ಕೆಂಚಮ್ಮನ ಕೆರೆಗೆ ಯು.ಬಿ.ಬಣಕಾರ್ ಜೊತೆ ಬಾಗೀನ ಅರ್ಪಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

0

ಹಾವೇರಿ : ಇದೇ ಮೊದಲ ಬಾರಿ ತಾವು ಹಾಗೂ ಯು.ಬಿ.ಬಣಕಾರ್ ಇಬ್ಬರೂ ಸೇರಿ ಬಾಗಿನ ಅರ್ಪಿಸಿರುವುದು ವಿಶೇಷ ಹಾಗೂ ಪುಣ್ಯದ ಕೆಲಸ‌.ಕೆರೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇಬ್ಬರೂ ಶ್ರಮಿಸುವುದಾಗಿ ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಐತಿಹಾಸಿಕ ಪ್ರಸಿದ್ಧ ರಟ್ಟಿಹಳ್ಳಿ -ಹಿರೇಕೆರೂರಿನ “ಮದಗಮಾಸೂರು ಕೆರೆ” ( ಕೆಂಚಮ್ಮನ ಕೆರೆ)ಗೆ ಬಾಗೀನ ಅರ್ಪಿಸಿ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018-19 ಸಾಲಿನಲ್ಲಿ ಎಡಬಲದಂಡೆಗೆ 25 ಕೋಟಿ ರೂ.ಅಭಿವೃದ್ಧಿಗೆ ಇಡಲಾಗಿತ್ತಾದರೂ ಕೋವಿಡ್ ಕಾರಣದಿಂದ ಹಣದ ಕೊರತೆಯಾಗಿದೆ.ಎಡಬಲ ದಂಡೆಗಳನ್ನು ನವೀಕರಿಸಿ ಕೆರೆಯನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ರೈತರು ಹಾಗೂ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಪ್ರತಿವರ್ಷ ತಾವು ಹಾಗೂ ಯು.ಬಿ.ಬಣಕಾರ್ ಪ್ರತ್ಯೇಕವಾಗಿ ಬಾಗೀನ ಬಿಡುತ್ತಿದ್ದೆವು‌.ದೇವರ ದಯೆಯಿಂದ ಈ ಬಾರಿ ಕೃಷಿಸಚಿವನಾಗುವ ಸೌಭಾಗ್ಯ ದೊರೆತಿದ್ದು, ಇಬ್ಬರೂ ಸೇರಿ ಕೆಂಚಮ್ಮನಕೆರೆಗೆ ಬಾಗೀನ ಅರ್ಪಿಸಿದ್ದೇವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here