ಬಳ್ಳಾರಿ ಜಿಲ್ಲೆ ಹೊಸಪೇಟೆ ವಿಭಾಗದ ಕೆಎಸ್ಆರ್ಟಿಸಿ ಅಧಿಕಾರಿಯಿಂದ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ನಿಂದನೆ ಮಾಡಿರುವುದಾಗಿ ಗಂಭೀರ ಆರೋಪ ಕೇಳಿಬಂದಿದೆ.ಹೊಸಪೇಟೆ ವಿಭಾಗದ ನೊಯಂತ್ರಣಾಧಿಕಾರಿ ವಿರುದ್ಧ ಕೂಡ್ಲಿಗಿ ಬಸ್ ಡಿಪೋದ ಬಸ್ ನಿವಾ೯ಹಕ ಮೆಹಬೂಬ್ ಈ ಗಂಭಿರ ಆರೋಪ ಮಾಡಿದ್ದಾನೆ. ಹಲವು ದಿನಗಳ ಹಿಂದೆ ಇಂತಹದ್ದೇ ಆದ ಪ್ರಕರಣ ಕೂಡ್ಲಿಗಿ ಡಿಪೋದಲ್ಲಿ ಜರುಗಿತ್ತು.ಕೂಡ್ಲಿಗಿ ಡಿಪೋದ ಕೆಲ ಸಿಬ್ಬಂದಿಯವರು,ತಮ್ಮ ಡಿಪೋದ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಅವರು ಮಾಧ್ಯಮಗಳಲ್ಲಿ ದೂರು ನೀಡಿದ್ದರು,ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.ಆಗ ಸಂಸ್ಥೆಯ ಜಿಲ್ಲಾಧಿಕಾರಿಗಳು ಸಿಬ್ಬಂದಿಗಳ ಅಹವಾಲುಗೆ ಸ್ಪಂಧಿಸಿದ್ದರು.ಆದ್ರೆ ಈಗ ಜಿಲ್ಲಾ ವಿಭಾಗೀಯ ಅಧಿಕಾರಿ ವಿರುದ್ಧ ಆರೋಪ ಕೇಳಿ ಬಂದಿದೆ,ಕೂಡ್ಲಿಗಿ ಘಟಕದ ಬಸ್ ನಿವಾ೯ಹಕ ಮೆಹಬೂಬ್ ನಿಂದ ಹೊಸಪೇಟೆ ವಿಭಾಗಿಯ ನಿಯಂತ್ರಣಾಧಿಕಾರಿಯ ವಿರುದ್ಧ,ಕಿರುಕುಳ ಹಾಗೂ ಅವಾಶ್ಚ ಶಬ್ದಗಳಿಂದ ನಿಂಧನೆ ಮಾಡಿರುವುದಾಗಿ ಮೆಹಬೂಬು ಆರೋಪಿಸಿದ್ದಾರೆ,ಮಾಧ್ಯಮದೆದಿರು ತಮ್ಮ ಅಳನ್ನು ತೋಡಿಕೊಂಧು ಕಣ್ಣೀರಿಟ್ಟಿದ್ದಾರೆ.ಅವರು ಅಧಿಕಾರಿ ವಿರಿದ್ಧ ಆರೋಪಿಸಿದ್ದು ಈ ಕುರಿತು ಹೇಳಿಕೆಯನ್ನೂ ನೀಡಿದ್ದಾರೆ. ಹಲವು ವಷ೯ಗಳ ಹಿಂದೆ ತಾನು ಈ ಅಧಿಕಾರಿ ವಿರುದ್ಧ,ತನಗೆ ಕಿರುಕುಳ ನೀಡುತ್ತಿರುವುದರ ವಿರುದ್ಧ,ಕಾನೂನು ಹೋರಾಟ ಹಾಗೂ ಸಂಸ್ಥೆಯ ಉನ್ನತಾಧಿಕಾರಿಗಳಲ್ಲಿ ದೂರು ಸಲ್ಲಿದ್ದು,ಈ ಅಧಿಕಾರಿ ಆ ಸೇಡನ್ನು ಈಗ ಈ ರೀತಿ ತೀರಿಸಿಕೊಳ್ಳುತ್ತಿದ್ದಾನೆ ಎಂದು ಬಸ್ ನಿವಾ೯ಹಕ ಮೆಹಬೂಬ್ ಆರಪಿಸಿದ್ದಾರೆ.ಸಂಸ್ಥೆಯ ಉನ್ನತಾಧಿಕಾರಿಗಳು ತನ್ನ ದೂರನ್ನು ಪರೊಶೀಲಿಸಿ ಗಂಭೀರವಾಗಿ ಪರಿಗಣಿಸಬೇಕಾಗಿದೆ,ಶೀಘ್ರವೇ ಪರಿಶೀಲಿಸಿ ತಮಗೆ ಅವಾಶ್ಚ ಶಬ್ದಗಳಿಂದ ನಿಂಧಿಸಿರುವ ಅಧಿಕಾರಿಯನ್ನು ಅಮಾನತ್ತಿನಲ್ಲಿಡಬೇಕು ಎಂದು ಮನವಿ ಮಾಡಿದ್ದಾರೆ.ನ್ಯಾಯ ಒದಗಿಸದಿದ್ದಲ್ಲಿ ತನ್ನ ಕುಟುಂಬ ಸದಸ್ಯರ ಸಮೇತವಾಗಿ,ಸಂಸ್ಥೆಯ ಉನ್ನತಾಧಿಕಾರಿಗಳವರ ಕಚೇರಿಯ ಮುಂದೆ,ತನಗಾದ ಅನ್ಯಾಯವನ್ನು ಖಂಡಿಸಿ ನ್ಯಾಯ ಸಿಗೋವರೆಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು ಮೆಹಬೂಬ್ ತಿಳಿಸಿದ್ದಾರೆ. ಸಹಪಾಟಿಗಳು ಸಹಕರಿಸಿದರೆ ಸಂಘಟನೆಯ ನೆರವಿನೊಂದಿಗೆ,ಸಂಸ್ಥೆಯ ಸಿಬ್ಬಂದಿಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಅಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದೆಂದು ಮೆಹಬೂಬ್ ತಿಳಿಸಿದ್ದಾರೆ.
( ಮೆಹಬೂಬ್ ಬಸ್ ನಿವಾ೯ಹಕ ಕೂಡ್ಲಿಗಿ ಡಿಪೋ)