ಕೆಚ್ಚೆದೆಯ ಆಟ ಪ್ರದರ್ಶಿಸಿದ ಕನ್ನಡಿಗ ಮಯಾಂಕ್‍ಗೆ ಕಿಚ್ಚನ ಅಭಿನಂದನೆ

0

ಕೆಚ್ಚೆದೆಯ ಆಟ ಪ್ರದರ್ಶಿಸಿ ಕನ್ನಡಿಗರ ಹೃದಯ ಗೆದ್ದಿರುವ ಮಯಾಂಕ್ ಅಗರ್‍ವಾಲ್‍ಗೆ ಕಿಚ್ಚ ಸುದೀಪ್ ಅವರು ಶುಭಾಶಯ ಕೋರಿದ್ದಾರೆ. ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಕನ್ನಡಿಗ ಮಯಾಂಕ್‍ಗೆ ಚಿಯರ್ಸ್ ಹೇಳಿದ್ದು, ಸಿಸಿಎಲ್‍ನಲ್ಲಿ ನಾನು ನಿಮ್ಮ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಆಡಿದ್ದೆ, ನಿನ್ನೆ ನೀವು ಡೆಲ್ಲಿ ವಿರುದ್ಧ ತೋರಿದ ಅದ್ಭುತ ಬ್ಯಾಟಿಂಗ್ ಕೊರೊನಾ ಕಾಲದಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದೆ.

ನಿಮ್ಮ ಆ ಕೆಚ್ಚೆದೆಯ ಆಟದಿಂದಲೇ ಪಂದ್ಯ ಸೂಪರ್ ಓವರ್ ತಿರುವು ಪಡೆದುಕೊಂಡಿತ್ತಾದರೂ ಸೂಪರ್ ಓವರ್‍ನಲ್ಲಿ ನಿಮ್ಮ ಬ್ಯಾಟಿಂಗ್ ವೈಭವ ನೋಡಲು ಆಗದಿದ್ದರೂ ಮುಂದಿನ ಪಂದ್ಯಗಳಲ್ಲಿ ನೀವು ತಂಡಕ್ಕೆ ಆಸರೆಯಾಗಿ ಗೆಲುವು ತಂದುಕೊಡಿ ಎಂದು ಕಿಚ್ಚ ಸುದೀಪ್ ಹಾರೈಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಸ್ಫೋಟಕ ಆಟಗಾರ ಮಾರ್ಕಸ್ ಸ್ಟೋನಿಸ್ (53 ರನ್, 7 ಬೌಂಡರಿ, 3 ಸಿಕ್ಸರ್) ನೆರವಿನಿಂದ 157 ರನ್‍ಗಳನ್ನು ಗಳಿಸಿತ್ತು.

ಈ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ತಂಡ 55 ರನ್‍ಗಳಿಗೆ ಪ್ರಮುಖ 5 ವಿಕೆಟ್‍ಗಳನ್ನು ಕಳೆದುಕೊಂಡರೂ ಕ್ರೀಸಿನಲ್ಲಿ ಹೆಬ್ಬಂಡೆಯಂತೆ ನಿಂತ ಕನ್ನಡಿಗ ಮಯಾಂಕ್ ಅಗರ್‍ವಾಲ್ (89 ರನ್, 7 ಬೌಂಡರಿ, 4 ಸಿಕ್ಸರ್) ಕೆಚ್ಚೆದೆಯಿಂದ ಹೋರಾಡಿ ಪಂದ್ಯವನ್ನು ಟೈ ಗೊಳಿಸಿದ್ದರಾದರೂ ಸೂಪರ್ ಓವರ್‍ನಲ್ಲಿ ಕಿಂಗ್ಸ್ ಆಟಗಾರರು ಬ್ಯಾಟಿಂಗ್À ವೈಫಲ್ಯ ಅನುಭವಿಸಿ ಸೋಲು ಕಂಡಿತು.

LEAVE A REPLY

Please enter your comment!
Please enter your name here