ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ವಾಸವಾಗಿರುವ ಅಣ್ಣಯ್ಯರವರು ಹಣದ ಅವಶ್ಯಕತೆಯಿಂದ 5 ಕೋಟಿ ಸಾಲ ಕೋರಿ ಸ್ನೇಹಿತ ಮಂಜೇಗೌಡರವರ ಮೂಲಕ ಬೆಂಗಳೂರಿನ ರಾಮ್ ಫೈನಾನ್ಸ್ ಗೆ ಹೋದರು

0

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ವಾಸವಾಗಿರುವ ಅಣ್ಣಯ್ಯರವರು ಹಣದ ಅವಶ್ಯಕತೆಯಿಂದ 5 ಕೋಟಿ ಸಾಲ ಕೋರಿ ಸ್ನೇಹಿತ ಮಂಜೇಗೌಡರವರ ಮೂಲಕ ಬೆಂಗಳೂರಿನ ರಾಮ್ ಫೈನಾನ್ಸ್ ಗೆ ಹೋದರು . ಅಣ್ಣಯ್ಯ ರವರ ಸಂಪೂರ್ಣ ಆಸ್ತಿ ಪತ್ರ ಹಾಗೂ 11 ಲಕ್ಷ ಹಣವನ್ನು ಪಡೆದುಕೊಂಡ ರಾಮ್ ಪೈನಾನ್ಸ್ ನವರು 50 ಲಕ್ಷದ ಚೆಕ್ ಕೊಟ್ಟಿದರು ಆದರೆ ಚೆಕ್ ಬೌನ್ಸ್ ಆಗಿರುತ್ತದೆ . ಮೋಸ ಮಾಡಿದ ರಾಮ್ ಫೈನೈನ್ಸ್ ವಿರುದ್ಧ ದೂರು ದಾಖಲು ಮಾಡಿದರು ಪೊಲೀಸ್ ಇಲಾಖೆ ಇಲ್ಲಿಯವರೆಗೆ ಯಾವುದೇ ವಿಚಾರಣೆ ಮಾಡಿಲ್ಲ ಎಂದು ನ್ಯಾಯಬೇಕೆಂದು ಕೋರಿ ಮಂಡ್ಯ ಜಿಲ್ಲಾ ಮಾದ್ಯಮ ವರದಿಗಾರರು ಪೃಥ್ವಿ ರವರೊಂದಿಗೆ ಈ ದಿನ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಕೇಂದ್ರ ಕಛೇರಿಗೆ ಆಗಮಿಸಿ ಸಂಸ್ಥಾಪಕ -ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡರವರನ್ನು ಭೇಟಿ ಮಾಡಿ ರಾಮ್ ಫೈನಾನ್ಸ್ ವಿರುದ್ಧ ದೂರು ನೀಡಿದರು. ಆ ಕೂಡಲೇ ಅಧ್ಯಕ್ಷರು ರಾಮ್ ಫೈನಾನ್ಸ್ ಗೆ ಕರೆ ಮಾಡಿ ಅಣ್ಣಯ್ಯ ರವರ ಹಣ ಮತ್ತು ದಾಖಲಾತಿಗಳನ್ನು ಕೊಡಬೇಕು ಇಲ್ಲವದಲ್ಲಿ ತಮ್ಮ ಕಂಪನಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುವುದು ಹೇಳಿದರು . ಅಣ್ಣಯ್ಯರವರ ಹಣ ಮತ್ತು ದಾಖಲಾತಿಗಳನ್ನು ಹಿಂದಿರುಗಿಸುತ್ತೇವೆ 5 ದಿನಗಳ ಸಮಯವನ್ನು ಬೇಕೆಂದು ರಾಮ್ ಫೌನಾನ್ಸ್ ಕೋರಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here