ಕೇಂದ್ರ ಸರಕಾರ ಕಳೇದ ಮಾರ್ಚನಲ್ಲಿ 88ಎಚ್ ಅಧಿನಿಯದಡಿಯಲ್ಲಿ ತಳವಾರ ಮತ್ತು ಪರಿವಾರ ಸಮಾಜಗಳ ವರದಿಯನ್ನು ಪರಿಗಣಿಸಿ ಪರಿಶಿಷ್ಠ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ ಆದರೆ ಸಮಾಜ ಕಲ್ಯಾಣ ಸಚಿವರು ಯಾವುದೋ ಒಂದು ಸಮುದಾಯಕ್ಕೆ ಮಣಿದು ಈ ಸಮುದಾಯಗಳಿಗೆ ದಿಕ್ಕು ತಪ್ಪಿಸುವ ಹೇಳಿಕೆ ನೀಡಿ ಅನ್ಯಾಯ ವೆಸಗುತ್ತಿದ್ದಾರೆ ಎಂದು ತಳವಾರ ಮತ್ತು ಪರಿವಾರ ಹೋರಾಟ ಸಮಿತಿ ಜಿಲ್ಲಾದ್ಯಕ್ಷ ಸರಣಪ್ಪ ಸುಣಗಾರ ಆರೋಪಿಸಿದರು.

0

ಸಿಂದಗಿ; ಕೇಂದ್ರ ಸರಕಾರ ಕಳೇದ ಮಾರ್ಚನಲ್ಲಿ 88ಎಚ್ ಅಧಿನಿಯದಡಿಯಲ್ಲಿ ತಳವಾರ ಮತ್ತು ಪರಿವಾರ ಸಮಾಜಗಳ ವರದಿಯನ್ನು ಪರಿಗಣಿಸಿ ಪರಿಶಿಷ್ಠ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ ಆದರೆ ಸಮಾಜ ಕಲ್ಯಾಣ ಸಚಿವರು ಯಾವುದೋ ಒಂದು ಸಮುದಾಯಕ್ಕೆ ಮಣಿದು ಈ ಸಮುದಾಯಗಳಿಗೆ ದಿಕ್ಕು ತಪ್ಪಿಸುವ ಹೇಳಿಕೆ ನೀಡಿ ಅನ್ಯಾಯ ವೆಸಗುತ್ತಿದ್ದಾರೆ ಎಂದು ತಳವಾರ ಮತ್ತು ಪರಿವಾರ ಹೋರಾಟ ಸಮಿತಿ ಜಿಲ್ಲಾದ್ಯಕ್ಷ ಸರಣಪ್ಪ ಸುಣಗಾರ ಆರೋಪಿಸಿದರು.
ಪಟ್ಟಣದ ಪಿಕಾರ್ಡ ಬ್ಯಾಂಕ ಸಭಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ.ಪಂ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸರಕಾರದ ವಿಳಂಭ ನೀತಿಯನ್ನು ಖಂಡಿಸಿ ಕಳೇದ 15 ರಂದು ರಕ್ತದಾನದ ಮೂಲಕ ಮೊದಲ ಚಳುವಳಿ ಪ್ರಾರಂಭಿಸಿದ್ದು ಅ. 30ರಂದು ಎರಡನೇ ಹಂತದ ಚಳವಳಿಗೆ ರೂಪರೇಶ ಹಾಕಿದ್ದು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವರ ಪ್ರವಾಸವಿದ್ದರು ಅಲ್ಲಿ ಈ ಸಮುದಾಯದ ಜನರು ಮೌನವಾಗಿ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಸಿ ಎಂದು ಒತ್ತಾಯಿಸಲಾಗುವುದು. ಸೆ.1 ರಿಂದ ನುರಿತ ನ್ಯಾಯವಾದಿಗಳ ಸಮಿತಿ ರಚಿಸಿ ಪತ್ರ ಚಳುವಳಿ, ಮಹಾತ್ಮಾ ಗಾಂಧಿಜಿಯವರ ಅಹಿಂಸಾತ್ಮಕ ಮಾರ್ಗದಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ ಸಂವಿಧಾನದಡಿ ಕಾನೂನಾತ್ಮಕ ಚಳುವಳಿ ಪ್ರಾರಂಭಿಸಿ ಸಮಾಜಕ್ಕೆ ಅನ್ಯಾಯ ಮಾಡಬೇಡಿ, ನಮ್ಮ ಹಕ್ಕು ನಮಗೆ ಕೊಡಿ ಎನ್ನುವ ವಾಕ್ಯದೊಂದಿಗೆ ಸೆ.21 ರಂದು ನಡೆಯಲಿರುವ ಅಧಿವೇಶದಲ್ಲಿ ಕೇಂದ್ರ ಸರಕಾರ ಈ ಎರಡು ಸಮುದಾಯಕ್ಕೆ ನೀಡಿದ ಮಿಸಲಾತಿ ಪಟ್ಟಿಯಲ್ಲಿ ಸೇರಿಸಿ ಪ್ರಮಾಣ ಪತ್ರ ನೀಡಲು ಪರಿಗಣಿಸುವ ಸಲುವಾಗಿ ಸೆ.15ರಿಂದ 21ರವರೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ 5 ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಮತ್ತು ಎಲ್ಲ ಮತಕ್ಷೇತ್ರದ ಶಾಸಕರ ಹಾಗೂ ಸಚಿವರ ಮನೆ ಮುಂದೆ ಬೆಳಿಗ್ಗೆ 10.30ರಿಂದ ಸಾಯಂಕಾಲ 5ರವರೆಗೆ ಧರಣಿ ಸತ್ಯಾಹಗ್ರ ಹಮ್ಮಿಕೊಂಡು ಸದನದಲ್ಲಿ ಕೇಂದ್ರ ಸರಕಾರದ ಆದೇಶದಂತೆ ಈ ಸಮುದಾಯದ ಕುರಿತು ಒತ್ತಾಯಿಸಲು ಉತ್ತರ ಕರ್ನಾಟಕದ ಬೆಳಗಾಂವ ಹಾಗೂ ಗುಲಬರ್ಗಾ ವಿಭಾಗಗಳಿಂದ ಏಕಕಾಲಕ್ಕೆ ಮನವಿ ಮಾಡಿಕೊಳ್ಳಲಾಗುವುದು ಅಲ್ಲದೆ ಸೆ.15 ರಂದು ಉತ್ತರ ಕರ್ನಾಟಕದಿಂದ ವಿಧಾನಸೌಧಾದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಆ ಕಾರ್ಯಕ್ರಮವನ್ನು ರಾಜ್ಯದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರ, ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಗುಜರಾತಿನ ಮಂತ್ರಿಗಳು, ಶಾಸಕರು ಈ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 21 ರಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ ಸಮಾವೇಶಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ಸೊನ್ನದ, ಸಾಹೇಬಗೌಡ ಬಿರಾದಾರ, ಶ್ರೀಶೈಲ ಬೂಯ್ಯಾರ, ಮಲ್ಲು ಗತ್ತರಗಿ, ಶ್ರೀಮಂತ ಝಳಕಿ, ಅಂಬಣ್ಣ ಕಲಮಣಿ, ಸಂಗಮೇಶ ಕೊಲಕಾರ, ಈರಗಂಟಿ ದೇವಣಗಾಂವ, ಮಾರುತಿಗೌಡ ಬಿರಾದಾರ ಅಣಜಿ, ವಿಜು ಯಾಳವಾರ ಸೇರಿದಂತೆ ಹಲವರು ಇದ್ದರು.

ವರದಿ: ಮಹಾಂತೇಶ ನೂಲಾನವರ, ಸಿಂದಗಿ..

LEAVE A REPLY

Please enter your comment!
Please enter your name here