ಕೇರಳ ಪತ್ರಕರ್ತನ ವಿರುದ್ಧ ದೇಶದ್ರೋಹ ಪ್ರಕರಣ

0

ಇತ್ತೀಚೆಗೆ ಮಥುರಾದಲ್ಲಿ ಬಂಧಿಸಲ್ಪಟ್ಟಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ಇತರ ಮೂವರ ವಿರುದ್ಧ ಉತ್ತರಪ್ರದೇಶದ ಪೊಲೀಸರು ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಯಿಂದ ದಿಲ್ಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ 20ರ ಹರೆಯದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ದಿಲ್ಲಿಯಿಂದ ಹತ್ರಸ್‌ಗೆ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರನ್ನು ಸೋಮವಾರ ರಾತ್ರಿ ಟೋಲ್‌ಗೇಟ್ ಬಳಿ ತಡೆದಿದ್ದ ಉತ್ತರಪ್ರದೇಶ ಪೊಲೀಸರು ಅವರ ಬಳಿಯಿದ್ದ ಮೊಬೈಲ್, ಲ್ಯಾಪ್‌ಟಾಪ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡ ಬಳಿಕ ಅವರನ್ನು ಬಂಧಿಸಿದ್ದರು. ನಾಲ್ವರಿಗೆ ಪಿಎಫ್‌ಐ ಸಂಘಟನೆಯ ಜೊತೆ ನಂಟಿದೆ ಎಂದು ವಿಚಾರಣೆಯ ವೇಳೆ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದರು.

LEAVE A REPLY

Please enter your comment!
Please enter your name here