ಕೇವಲ 10 ರೂಪಾಯಿಗೆ ನಾಲ್ಕು ಮೋದಿ ಇಡ್ಲಿ.!

0

ತಮಿಳುನಾಡಿನ ಸೇಲಂನಲ್ಲಿ ಹೋಟೆಲ್ ಒಂದು ಪ್ರಧಾನಿ ಮೋದಿ ಹೆಸರಿನ ಇಡ್ಲಿಯನ್ನು ಜನರಿಗೆ ಪರಿಚಯಿಸಿದೆ. ಹತ್ತು ರೂಪಾಯಿಗೆ ನಾಲ್ಕು ಮೋದಿ ಇಡ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ತಮಿಳುನಾಡು ಬಿಜೆಪಿ ಪ್ರಚಾರ ಕೋಶದ ಉಪಾಧ್ಯಕ್ಷ ಮಹೇಶ್ ಅವರು ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಊರ ತುಂಬೆಲ್ಲ ಮೋದಿ ಇಡ್ಲಿ ಪ್ರಚಾರದ ಪೋಸ್ಟರ್ ಹಾಕಲಾಗಿದೆ.

ಆಧುನಿಕ ಅಡುಗೆ ಉಪಕರಣದೊಂದಿಗೆ ಆರೋಗ್ಯಕರ ಇಡ್ಲಿಯನ್ನು ತಯಾರಿಸಲಾಗುತ್ತದೆ ಎಂದು ಪೋಸ್ಟರ್ ನಲ್ಲಿ ಹಾಕಿಕೊಳ್ಳಲಾಗಿದೆ. ಆರಂಭದಲ್ಲಿ ಸೇಲಂ ಪಟ್ಟಣದ 22 ಕಡೆಗಳಲ್ಲಿ ಮೋದಿ ಇಡ್ಲಿ ಮನೆಗೆ ತರುವ ಯೋಜನೆ ಇತ್ತು. ಆದರೆ ಪ್ರಚಾರ ಹೆಚ್ಚಾದಂತೆ ಮಳಿಗೆ ಸಂಖ್ಯೆ ಸಂಖ್ಯೆ ಹೆಚ್ಚಿಸಲು ಬಿಜೆಪಿ ತಮಿಳುನಾಡು ಕಾರ್ಯದರ್ಶಿ ಬಾಲಸುಬ್ರಮಣ್ಯಂ ನಿರ್ಧರಿಸಿದ್ದಾರೆ.

ಹಣವನ್ನು ಹೊಂದಿಸಲು ಅವರು ಜಾಹೀರಾತಿಗೂ ಮೊರೆ ಹೋಗಿದ್ದಾರೆ, ಇಡ್ಲಿ ಪಡೆಯಲು ಗ್ರಾಹಕರಿಗೆ ಕೂಪನ್ ವಿತರಿಸಲಾಗುತ್ತದೆ, ಆ ಕೂಪನ್ ಹಿಂಭಾಗದಲ್ಲಿ ಜಾಹೀರಾತನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here