ಕೊಡಗಿನ ಅಭಿವೃದ್ದಿಗೆ ಸರ್ಕಾರ ಬದ್ದ:ಸೋಮಣ್ಣ

0

ಕೊಡಗಿನ ಅಭಿವೃದ್ದಿಗೆ ಸರ್ಕಾರ ಬದ್ದ:ಸೋಮಣ್ಣ

ಕೊಡಗು: ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದವಾಗಿದ್ದು,ಜಲಪ್ರಳಯ ಸಂದರ್ಭ ಸೂರುಕಳೆದುಕೊಂಡ 2330 ಕುಟುಂಬಳಿಗೆ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮತ್ತು ಹಾನಿಗೊಳಗಾದ ಮನಗಳ ರಿಪೇರಿ ಖರ್ಚನ್ನು ಸರ್ಕಾರ ಬರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿ.ಸೋಮಣ್ಣ ತಿಳಿಸಿದ್ದಾರೆ.ಮಡಿಕೇರಿಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಾತನಾಡಿದ ಅವರು ಮಡಿಕೇರಿಯ ಹಳೆಯ ಕೋಟೆ ಯನ್ನು ಅಭಿವೃದ್ದಿ ಪಡಿಸಲು ಪುರಾತತ್ವ ಇಲಾಖೆ ಜೊತೆಗೂಡಿ ಕಾಮಗಾರಿ ನಡೆಸಲು 10 ಕೋಟಿ 80 ಲಕ್ಷ ರುಪಾಯಿ ಕಾಮಗಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದ್ದು,ಮಹಿಳಾ ಮತ್ತು ಸರ್ಕಾರಿ ಕಾಲೇಜುಗಳ ಅಭಿವೃದ್ದಿಗೆ ತಲಾ 5 ಕೋಟಿ ನಿಗದಿಪಡಿಸಲಾಗಿದೆ.ಇನ್ನು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹೂಳೆತ್ತಲು 94 ಲಕ್ಷ ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ 84 ಲಕ್ಷ ವೆಚ್ಚದಲ್ಲಿ ಹೂಳೆತ್ತುವುದು ಮತ್ತು ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.ಇದಕ್ಕೂ ಮೂದಲು ರಾಜ್ಯ ಸರ್ಕಾರದ ಒಂದು ವರ್ಷದ ಕಾರ್ಯಕ್ರಮವನ್ನು ಬೆಂಗಳೂರಿನಿಂದ ನೇರ ಪ್ರಸಾರವನ್ನು ವರ್ಚುವಲ್ ಮಿಡಿಯಾ ಮೂಲಕ ವೀಕ್ಷಿಸಿದರು ಹಾಗೆ ಸರ್ಕಾರದ ಸಾಧನೆ ಕುರಿತ ಪುಸ್ತಕ ಬಿಡುಗಡೆ ಗೊಳಿಸಿದರು. ಸಂಸದ ಪ್ರತಾಪ್ ಸಿಂಹ,ಶಾಸಕರಾದ ಕೆ.ಜಿ ಬೋಪಯ್ಯ,ಅಪ್ಪಚ್ಚು ರಂಜನ್,ಸುನಿಲ್ ಸುಬ್ರಮಣಿ ಹಾಜರಿದ್ದರು.

LEAVE A REPLY

Please enter your comment!
Please enter your name here