ಕೊರೊನಾ ಮಧ್ಯ ದಲ್ಲಿ ಸಿಇಟಿ ಪರೀಕ್ಷೆ 2020 ಪರೀಕ್ಷೆಗೆ ಸಕಲ ಸಿದ್ಧತೆ : ಮೇಲ್ವಿಚಾರಕರ ಸಭೆ

0

ಕೊರೊನಾ ಮಧ್ಯ ದಲ್ಲಿ ಸಿಇಟಿ ಪರೀಕ್ಷೆ 2020 ಪರೀಕ್ಷೆಗೆ ಸಕಲ ಸಿದ್ಧತೆ : ಮೇಲ್ವಿಚಾರಕರ ಸಭೆ

ಅಥಣಿ : ಕೊರೊನಾ ಮಧ್ಯ ದಲ್ಲಿ ಸಿಇಟಿ ಪರೀಕ್ಷೆಗಳು ಇಲಾಖೆಯ ನಿಗದಿಯಂತೆ ಇದೇ ತಿಂಗಳ 30 ಮತ್ತು 31ರಂದು ನಡೆಯಲಿವೆ ಎಂದು ಪ್ರಾಚಾರ್ಯರಾದ ಪ್ರೋ ಎಸ್ ಎಸ್ ಗೌಡರ ಹೇಳಿದರು.

ಅಥಣಿಯ ಜೆ ಎ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡುತ್ತ ಪರೀಕ್ಷೆಗೆ ಬೇಕಾದ ಕೊಠಡಿ, ನಂಬರಿಂಗ,ಮೇಲ್ವಿಚಾರಕರ ನಿಯೊಜನೆ,ಮೇಲ್ವಿಚಾರಕರಿಗೆ ತರಬೇತಿ ಇಲಾಖೆಯ ನಿರ್ದೇಶನದಂತೆ ಸಕಲ  ಸಿದ್ಧತೆ ಮಾಡಿಕೊಳ್ಳಲಾಗಿದೆ  ಈ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿಇಟಿ 30 ಮತ್ತು 31 ರಂದು ನಾಲ್ಕು ವಿಷಯಗಳಿಗೆ ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳಿಗೆ ಗುರುವಾರ ಮುಂಜಾನೆ , ಜೀವಶಾಸ್ತ್ರ ಮಧ್ಯಾಹ್ನ ಗಣಿತ ಶುಕ್ರವಾರ ಮುಂಜಾನೆ ಭೌತಶಾಸ್ತ್ರ ಮಧ್ಯಾಹ್ನ ರಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿದ್ದು ಕೊರೊನಾಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಲ್ಲಾ ಸಿಬ್ಬಂದಿ ಅತ್ಯಂತ ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕು

ಈ ಹಿನ್ನಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿ ಪರೀಕ್ಷೆ ನಡೆಸಲಾಗುವುದು. ಸಮರ್ಪಕ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರಕ್ಕೆ ಧಕ್ಕೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರದ ಕಸ್ಟೋಡಿಯನ್ ಪ್ರೊ ಬಿ ಬಿ ಕೊಹಳ್ಳಿ ಅವರು ಹೇಳಿದರು.

ಪ್ರೋ ಎಸ್ ವಿ ದಾಸರಡ್ಡಿ ಎಲ್ಲಾ ಪರೀಕ್ಷೆ ಮೆಲ್ವಿಚಾರಕರಿಗೆ ತರಬೇತಿ ನೀಡಿದರು.

ಈ ವೇಳೆ ಹಲವಾರು ಜನ ಮೇಲ್ವಿಚಾರಕರು ಯಶಸ್ವಿಯಾಗಿ ತರಬೇತಿ ಪೂರೈಸಿದರು.

ವರದಿ :ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here