ಕೊರೊನಾ ಲಸಿಕೆ ಬಗ್ಗೆ ರಷ್ಯಾದಿಂದ ಮಹತ್ವದ ಮಾಹಿತಿ…!?

0

ಕೊರೊನಾ ಲಸಿಕೆಯನ್ನು ಯಾವ ದೇಶ ಮೊದಲು ಹೊರಗೆ ತರಲಿದೆ ಎಂಬ ಕುತೂಹಲವಿದೆ. ಈ ರೇಸ್ ನಲ್ಲಿ ರಷ್ಯಾ ಮುಂದಿದೆ. ರಷ್ಯಾ ಲಸಿಕೆ ತರುವ ತರಾತುರಿಯಲ್ಲಿದೆ. ರಷ್ಯಾ ಆಗಸ್ಟ್ 10ರೊಳಗೆ ಕೊರೊನಾ ಲಸಿಕೆಗೆ ಅನುಮೋದನೆ ನೀಡುವ ಸಾಧ್ಯತೆಯಿದೆ.

ರಷ್ಯಾದಿಂದ ಇದ್ರ ಬಗ್ಗೆ ಒಳ್ಳೆಯ ಸುದ್ದಿ ಬಂದಿದೆ. ರಷ್ಯಾದ ಆರೋಗ್ಯ ಸಚಿವರು ಲಸಿಕೆಯ ಪ್ರಯೋಗ ಪೂರ್ಣಗೊಂಡಿದೆ ಎಂದಿದ್ದಾರೆ. ಗಮಾಲಯ ಇನ್ಸ್ಟಿಟ್ಯೂಟ್ ತಯಾರಿಸಿದ ಲಸಿಕೆ ಇದಾಗಿದೆ. ಇನ್ನೂ ಎರಡು ಕಂಪನಿಗಳು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿವೆ. ಆಗಸ್ಟ್ 10 ಅಥವಾ ಅದಕ್ಕೂ ಮೊದಲು ಅನುಮೋದನೆ ಸಿಗುವ ಸಾಧ್ಯತೆಯಿದೆ. ಆಗಸ್ಟ್ ಎರಡನೇ ವಾರದಲ್ಲಿ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದು ಗಮಲಯ ಇನ್ಸ್ಟಿಟ್ಯೂಟ್ ಹೇಳಿದೆ.

ಲಸಿಕೆ ಪ್ರಯೋಗದ ಬಗ್ಗೆ ರಷ್ಯಾ ಇನ್ನೂ ಯಾವುದೇ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಈ ಕಾರಣದಿಂದಾಗಿ ಅದರ ಪರಿಣಾಮದ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗ್ತಿಲ್ಲ. ಲಸಿಕೆಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ರಾಜಕೀಯ ಒತ್ತಡವಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದಲ್ಲದೆ, ಲಸಿಕೆಯ ಅಪೂರ್ಣ ಮಾನವ ಪ್ರಯೋಗದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಡಬ್ಲ್ಯುಎಚ್ ಒ ಕೂಡ ರಷ್ಯಾ ಲಸಿಕೆಯನ್ನು ಸರಿಯಾಗಿ ಪರೀಕ್ಷಿಸಿಲ್ಲ ಎನ್ನುತ್ತಿದೆ.

LEAVE A REPLY

Please enter your comment!
Please enter your name here