ಕೋವಿಡ್-19 ಸೋಂಕಿಗೆ ಶಿಕ್ಷಕ ಬಲಿ
ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿ ಕೋವಿಡ್-19 ಸೋಂಕಿನಿಂದ ಮರಣ ಹೊಂದಿದ ಶಿಕ್ಷಕನ ಕುಟುಂಬಕ್ಕೆ 30 ಲಕ್ಷ ಪರಿಹಾರಕ್ಕಾಗಿ ತಾಲ್ಲೂಕು ಶಿಕ್ಷಕರ ಸಂಘ ಮನವಿ.
ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕದಬಹಳ್ಳಿ ವೃತ್ತದಲ್ಲಿ ಸಿ.ಆರ್.ಪಿ ಯಾಗಿ ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಸಕ್ರಿಯ ಪ್ರಕರಣಗಳ ಸಂಪರ್ಕದಲ್ಲಿರುವವರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ವ್ಯಕ್ತಿಗಳನ್ನು ಗುರುತಿಸುವ ಕಾಂಟ್ಯಾಕ್ಟ್ ಟ್ರೇಸಿಂಗ್ ಆಪ್ ನಲ್ಲಿ ಇಂದೀಕರಿಸುವ ಕಾರ್ಯಕ್ಕೆ ನೇಮಿಸಲಾಗಿತ್ತು. ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನಿಗೆ ಉಸಿರಾಟದ ಸಮಸ್ಯೆಯಿಂದ ಜುಲೈ 29ರಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಗಂಟಲು ದ್ರವವನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಧೃಡ ಪಟ್ಟಿದ್ದು ಸೋಂಕಿತ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಕೋವಿಡ್-19 ನಿಯಮದಂತೆ ಸಲಾಯಿತು.
ಪರಿಹಾರಕ್ಕೆ ತಾಹಶೀಲ್ದಾರ್ ಗೆ ಮನವಿ
ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕೋವಿಡ್-19 ಸೋಂಕಿನಿಂದ ಮರಣ ಹೊಂದಿದ ಮೃತ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನೌಕರರಿಗೆ ನೀಡುತ್ತಿರುವ 30 ಲಕ್ಷ ರೂಗಳ ವಿಮಾ ಸೌಲಭ್ಯವನ್ನು ನೀಡಬೇಕೆಂದು ತಹಶೀಲ್ದಾರ್ ರವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲ್ಲೂಕು ಘಟಕದ ವತಿಯಿಂದ ವತಿಯಿಂದ ಮನವಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ, ಮಂಜುನಾಥ್, ಕಾರ್ಯದರ್ಶಿ ದೇವರಾಜು, ರಾಜ್ಯಾಧ್ಯಕ್ಷರು ಸಿ.ಆರ್.ಪಿ ಸಂಘ ನಾಗೇಶ್, ಕಾರ್ಯದರ್ಶಿ ರಂಗನಾಥ್, ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ದೇ.ರಾ .ಜಗದೀಶ ನಾಗಮಂಗಲ