ಕೊರೊನಾ ವೈರಸ್ ಅಬ್ಬರಕ್ಕೆ ಶಿವಯೋಗಿ ನಾಡಿನ ಜನರಲ್ಲಿ ಪ್ರತಿ ಕ್ಷಣವೂ ಆತಂಕ ಮೂಡಿಸಿದ ಬೆನ್ನಲ್ಲೇ ಇಷ್ಟೊಂದು ಪಾಜಿಟಿವ್ ಬರಲು ಕಾರಣ ಏನು?

0

ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿದ  ಡಿ ಸಿ ಎಂ ಲಕ್ಷ್ಮಣ ಸವದಿ

ಅಥಣಿ: ಕೊರೊನಾ ವೈರಸ್ ಅಬ್ಬರಕ್ಕೆ ಶಿವಯೋಗಿ ನಾಡಿನಲ್ಲಿ ಜನರಲ್ಲಿ ಪ್ರತಿ ಕ್ಷಣವೂ ಆತಂಕ ಮೂಡಿಸಿದ ಬೆನ್ನಲ್ಲೇ ಇಷ್ಟೊಂದು ಪಾಜಿಟಿವ್ ಬರಲು ಕಾರಣ ಏನು? ತಳಮಟ್ಟದ ಸಿಬ್ಬಂದಿಯನ್ನು ಸರಿಯಾಗಿ ಕೆಲಸಕ್ಕೆ ನಿಯೋಜಿಸಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು. ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸಂವಹನ ಕೊರತೆ ಇದೆ ಎಂದು ಡಿಸಿಎಂ ಲಕ್ಷ್ಮಣ ಸವದಿ   ಚುರುಕು ಮುಟ್ಟಿಸಿದರು.

ಅಥಣಿ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಸೋಮವಾರ ತಾಲೂಕು ಆಡಳಿತದ ಜೊತೆ ಡಿಸಿಎಂ ಲಕ್ಷ್ಮಣ ಸವದಿ ಅಧಿಕಾರಿಗಳ ಸಭೆ  ನಡೆಸಿದರು. ಅಥಣಿ ತಾಲೂಕಿನಲ್ಲಿ 70 ಕ್ಕೂ ಅಧಿಕ ಕೊರೊನಾ ಪಾಜಿಟಿವ್ ಪ್ರಕರಣ ಬಂದಿರುವುದರಿಂದ ಡಿಸಿಎಮ್  ತಾಲೂಕು ಆಡಳಿತಕ್ಕೆ ಸೂಕ್ತ ಕಾರ್ಯ ನಿರ್ವಹಣೆಗೆ  ನಿರ್ದೆಶನ  ನೀಡಿ ಅಥಣಿ ತಾಲೂಕಿನಲ್ಲಿ ಗಂಟೆ ಗಂಟೆಗೆ ಏರುತ್ತಿರುವ ಕೊರೊನಾ ಪ್ರಕರಣಗಳಿಗೆ, ಸ್ವಲ್ಪ ಮಟ್ಟಿಗೆಯಾದರೂ ತಡೆ ಒಡ್ಡಲು ಅಥಣಿ ಲಾಕ್ ಡೌನ್ ಮಾಡಲಾಗುವುದು ಎಂದು ಸುಳಿವು ನೀಡಿದ್ದಾರೆ.

ಇದೆ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಜೂಲೈ ೨೦ ವರೆಗೆ ಅಥಣಿ ಪಟ್ಟಣದಲ್ಲಿ ವ್ಯಾಪಾರಸ್ಥರು ಸಂಘ ಸ್ವಯಂ ಘೋಷಿತ ಲಾಕ್ ಡೌನ್ ಮಾಡಿದ್ದಾರೆ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಸೋಂಕಿತರ ಪರಿಕ್ಷೆ ಜಿಲ್ಲಾ ಮಟ್ಟದಲ್ಲಿ ಮಾಡುವುದರಿಂದ ವಿಳಂಬವಾಗುತ್ತಿದೆ, ಆದುದರಿಂದ ಅಥಣಿಯಲ್ಲಿ ಪರೀಕ್ಷೆ ಮಾಡಲಾಗುವುದು. ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕೆತ್ಸೆ ನೀಡಲಾಗುವುದು. ಕೊರೊನಾ ಸೋಂಕಿತರಿಗೆ ೩೦ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಥಣಿ ಪಟ್ಟಣವನ್ನು ಸ್ವಯಂ ಪ್ರೇರಿತ ಬಂದ್ ಮಾಡಿರುವ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆನೆ,  ಅಥಣಿಯನ್ನು ಲಾಕ್ ಡೌನ್ ಮಾಡಿ ಎಂದು ತಿಳಿಸಿದ್ದೆನೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿ ಆಯಾ ಜಿಲ್ಲಾ ಅಧಿಕಾರಿಗಳೆ ಸೂಚನೆ ನೀಡಿದ್ದೇನೆ ತುರ್ತು ಇದ್ದರೆ ಅವರೆ ಆದೇಶ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಮತ್ತು ಈ ರೋಗದಿಂದ ಬಳಲುತ್ತಿರುವವರಿಗೆ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಸಕಲ ರೀತಿಯಲ್ಲೂ ಅವರ ಯೋಗ ಕ್ಷೇಮ ನೋಡಿಕೊಳ್ಳಿ ಎಂದು ತಿಳಿಸಿದ್ದೆನೆ ಎಂದು ಹೇಳಿದರು.

ಈ ವೇಳೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ,ತಾಲೂಕು ಪಂಚಾಯತ ಕಾ ನಿ ಅಧಿಕಾರಿ ರವಿ ಬಂಗಾರಪ್ಪನವರ, ಡಿವೈ ಎಸ್ ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ, ತಾಲೂಕು ವೈದ್ಯಾಧಿಕಾರಿ ಡಾ ಮುತ್ತಣ್ಣ ಕೊಪ್ಪದ,ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಸಿಎಸ್ ಪಾಟೀಲ ಸೇರಿದಂತೆ ಹಲವಾರು ಅಧಿಕಾರಿಗಳು  ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here