ಕೊರೊನಾ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಬಿಗ್ ಶಾಕ್: ಹೆಚ್ಚಾಲಿದ್ಯಾ ರೈಲು ಪ್ರಯಾಣ ದರ?

0

ಕೊರೊನಾ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಮತ್ತೊಂದು ಮತ್ತಷ್ಟು ಹೊರೆ ಬೀಳುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ರೈಲು ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ರೈಲ್ವೇ ಪ್ರಯಾಣಕ್ಕೆ ಯೂಸರ್​ ಡೆವಲಪ್​ಮೆಂಟ್​ ಫೀಸ್ ​(ಯುಡಿಎಫ್​) ವಿಧಿಸುವ ಚಿಂತನೆಯಲ್ಲಿದೆ. ಇನ್ನು ಒಂದು ತಿಂಗಳಲ್ಲಿ ಅದಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲೂ ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದ್ದು, ಹಾಗಾದಲ್ಲಿ ಸ್ಲೀಪರ್ ಕ್ಲಾಸ್ ಮತ್ತು ಎಸಿ​ ಪ್ರಯಾಣ ದರದಲ್ಲಿ ಹೆಚ್ಚಳವಾಗಲಿದೆ.

ಸದ್ಯ ಸಿಕ್ಕಿರುವ ಮಾಹಿತಿಗಳಂತೆ, ಎಸಿ1 ಕೆಟಗರಿಯಲ್ಲಿ 35ರಿಂದ 40 ರೂಪಾಯಿ, ಎಸಿ 2ನಲ್ಲಿ ಸುಮಾರು 30 ರೂಪಾಯಿ ಹಾಗೂ ಎಸಿ 3ನಲ್ಲಿ 25ರಿಂದ 30 ರೂಪಾಯಿ ಮತ್ತು ಸ್ಲೀಪರ್ ಕ್ಲಾಸ್​​ನಲ್ಲಿ ಹತ್ತು ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

LEAVE A REPLY

Please enter your comment!
Please enter your name here