ಕೊರೊನಾ ಸಂಕಷ್ಟದ ಮಧ್ಯ ಹಣ ಗಳಿಕೆಗೆ ಇಲ್ಲಿದೆ ಅವಕಾಶ…!?

0

ಕೊರೊನಾ ಸಂಕಷ್ಟದಲ್ಲಿ ಹೊಸ ಉದ್ಯೋಗ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಮದರ್ ಡೈರಿ ನಿಮಗೆ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ. ಮದರ್ ಡೈರಿ ಫ್ರ್ಯಾಂಚೈಸ್ ನೀಡುತ್ತಿದೆ. ಫ್ರ್ಯಾಂಚೈಸ್ ತೆಗೆದುಕೊಳ್ಳುವ ಮೂಲಕ ನೀವು ವ್ಯವಹಾರ ಶುರು ಮಾಡಬಹುದು.

ಹೂಡಿಕೆಯೊಂದಿಗೆ ಫ್ರ್ಯಾಂಚೈಸ್ ವ್ಯವಹಾರ ಮಾಡಲು ಇದು ಬೆಸ್ಟ್. ಇದ್ರಲ್ಲಿ 5 ರಿಂದ 10 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ. ಇದು ಭಾರತದ ಕೃಷಿ ಉದ್ಯಮದ ಅತಿದೊಡ್ಡ ಫ್ರ್ಯಾಂಚೈಸ್ ಜಾಲವಾಗಿದೆ. ಇತ್ತೀಚೆಗೆ, ಕಂಪನಿ ಮೊದಲ ಬಾರಿಗೆ ಬೇಕರಿ ವಿಭಾಗವನ್ನು ಪ್ರವೇಶಿಸಲು ಯೋಜಿಸಿದೆ. ಕಂಪನಿಯು ಮೂರು ಬಗೆಯ ಬ್ರೆಡ್‌ಗಳನ್ನು ಬಿಡುಗಡೆ ಮಾಡಿದೆ.

ಕಂಪನಿಯು ಹಾಲು, ಹಾಲಿನ ಉತ್ಪನ್ನಗಳು ಮತ್ತು ಇತರ ಆಹಾರ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುತ್ತದೆ. ಡೈರಿ ಉತ್ಪನ್ನಗಳಲ್ಲದೆ, ಹಣ್ಣುಗಳು, ತರಕಾರಿಗಳು, ಖಾದ್ಯ ತೈಲಗಳು, ಆಹಾರ ಪದಾರ್ಥಗಳು, ಉಪ್ಪಿನಕಾಯಿ, ಹಣ್ಣಿನ ರಸಗಳು, ಜಾಮ್‌ಗಳಂತಹ ವಸ್ತುಗಳನ್ನು ಕಂಪನಿಯು ಉತ್ಪಾದಿಸುತ್ತದೆ. ಕಂಪನಿಯು ಸುಮಾರು 2500 ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.

ಸ್ಥಳಕ್ಕೆ ಅನುಗುಣವಾಗಿ ಹೂಡಿಕೆ ಮಾಡಬೇಕು. ಇದರಲ್ಲಿ 50,000 ರೂಪಾಯಿಗಳನ್ನು ಪ್ರತ್ಯೇಕವಾಗಿ ಬ್ರಾಂಡ್ ಶುಲ್ಕವಾಗಿ ನೀಡಬೇಕಾಗುತ್ತದೆ. ಕಂಪನಿಯು ಯಾವುದೇ ರಾಯಲ್ಟಿ ಶುಲ್ಕವನ್ನು ವಿಧಿಸುವುದಿಲ್ಲ. ಮೊದಲ ವರ್ಷದಲ್ಲಿಯೇ ಹೂಡಿಕೆಯ ಮೇಲೆ ಶೇಕಡಾ 30 ರಷ್ಟು ಲಾಭವನ್ನು ಪಡೆಯಬಹುದು. ಹೂಡಿಕೆಯ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಸುಮಾರು 2 ವರ್ಷಗಳು ಬೇಕಾಗುತ್ತದೆ. ಮದರ್ ಡೈರಿಯಲ್ಲಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು ಸುಮಾರು 44,000 ರೂಪಾಯಿ ಗಳಿಸಬಹುದು.

LEAVE A REPLY

Please enter your comment!
Please enter your name here