ಕೊರೊನಾ ಸಮಯದಲ್ಲಿ ಹೆಚ್ಚಿದ ಸೈಬರ್‌ ಅಪರಾಧ: ವಿಶ್ವಸಂಸ್ಥೆ

0

ಕೊರೊನಾ ವೈರಸ್‌ ಸಾಂಕ್ರಾಮಿಕ ಹಬ್ಬಿದ ಸಂದರ್ಭದಲ್ಲಿ ವೆಬ್‌ಸೈಟ್‌ಗಳಿಗೆ ಕನ್ನ ಹಾಕುವುದು ಶೇಕಡ 350ರಷ್ಟು ಹೆಚ್ಚಾಗಿದೆ.

‘ವೆಬ್‌ಸೈಟ್‌ಗಳಿಗೆ ಕನ್ನ ಹಾಕುತ್ತಿರುವುದರಿಂದ ಸಹಜವಾಗಿ ಸೈಬರ್‌ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ’ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಘಟಕದ ಮುಖ್ಯಸ್ಥ ವ್ಲಾದಿಮಿರ್‌ ವೊರೊಂಕಾವ್‌ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ತಿಳಿಸಿದ್ದಾರೆ.

‘ಜಾಗತಿಕ ಶಾಂತಿ ಹಾಗೂ ಭದ್ರತೆ ಮೇಲೆ ಕೊರೊನಾ ಸಾಂಕ್ರಾಮಿಕ ಕಾಯಿಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆ ಮತ್ತು ಜಾಗತಿಕ ತಜ್ಞರು ಪರಿಪೂರ್ಣವಾಗಿ ಇನ್ನೂ ಅರ್ಥ ಮಾಡಿಕೊಂಡಿಲ್ಲ’ ಎಂದು ತಿಳಿಸಿದ್ದಾರೆ.

‘ಕೋವಿಡ್‌-19ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಉಗ್ರರು ಬೇರೆ, ಬೇರೆ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಭಯ, ದ್ವೇಷ, ವಿಭಜನೆ ಭಾವನೆಗಳನ್ನು ಬಿತ್ತುವ ಮೂಲಕ ಸಂಘಟನೆಗಳಿಗೆ ಹೊಸದಾಗಿ ಯುವಕರನ್ನು ನೇಮಿಸಿಕೊಳ್ಳುತ್ತಿದ್ದಾರೆ’ ಎಂದು ವೊರೊಂಕೋವ್‌ ತಿಳಿಸಿದ್ದಾರೆ.

‘ಕೋವಿಡ್‌ ಸಂದರ್ಭದಲ್ಲಿ ಇಂಟರ್‌ನೆಟ್‌ ಬಳಕೆ ಮತ್ತು ಸೈಬರ್‌ ಅಪರಾಧ ಹೆಚ್ಚಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ’ ಎಂದು ತಿಳಿಸಿದ್ದಾರೆ. ಸಭೆಯಲ್ಲಿ 134 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here