ಕೊರೊನಾ ಸೋಂಕಿತರ ಖುಷಿಗಾಗಿ ಸ್ಟೆಪ್ ಹಾಕಿದ ವೈದ್ಯ

0

ಕೊರೊನಾ ಸೋಂಕಿತರಿಗೆ ಅವಿರತ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸೋಂಕಿತರ ಭಾವನೆ ಅರಿತು, ತಮ್ಮ ಬೇಸರವನ್ನೂ ಕಳೆಯಲು ಅನೇಕ ವೈದ್ಯಕೀಯ ಸೇವೆಯ ಜೊತೆಗೆ ಮನರಂಜನಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.

ಸೋಂಕಿತರಿಗೆ ಧೈರ್ಯ ತುಂಬುವುದು, ಕೊರೊನಾ ಬಗ್ಗೆ ಮಾಹಿತಿ ನೀಡುವುದು, ಔಷಧೋಪಚಾರದ ಕುರಿತು ತಿಳಿ ಹೇಳುವುದರೊಂದಿಗೆ ದಿನಗಟ್ಟಲೇ ಕಾಲ ಕಳೆಯಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗದಂತೆಯೂ ಎಚ್ಚರ ವಹಿಸಲಾಗುತ್ತಿದೆ.

ಕೇರಳದ ನೀಲೇಶ್ವರ ಬಳಿಯ ಕಣ್ಣೂರು ವಿವಿ ಆವರಣದಲ್ಲಿರುವ ಸಿಎಫ್‌ಎಲ್ ಟಿ ಸಿ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿನ ಮನೋವೈದ್ಯ ಡಾ.ಶ್ರೀಜಿತ್ ಕೃಷ್ಣನ್, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿಕಿತ್ಸಾ ಕೇಂದ್ರದಲ್ಲಿರುವ ರೋಗಿಗಳಿಗಾಗಿ ಪ್ರಭುದೇವ – ಹನ್ಸಿಕಾ ಅಭಿನಯದ ಗುಲೇಬಾ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಾ, ಸೋಂಕಿತರನ್ನು ನಕ್ಕು ನಗಿಸಿದ್ದಾರೆ.

LEAVE A REPLY

Please enter your comment!
Please enter your name here