‘ಕೊರೋನಾ’ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತಪದ್ಧತಿಯಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಹೇಗೆ ಮಾಡಬೇಕು !

0

‘ಕೊರೋನಾ’ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತಪದ್ಧತಿಯಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಹೇಗೆ ಮಾಡಬೇಕು !

ಈ ವರ್ಷ ‘ಭಾದ್ರಪದ ಕೃಷ್ಣ ಪಕ್ಷ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ (2 ರಿಂದ 17 ಸಪ್ಟೆಂಬರ್ 2020) ಈ ಅವಧಿಯಲ್ಲಿ ಪಿತೃಪಕ್ಷವಿದೆ. ‘ಎಲ್ಲ ಪಿತೃಗಳು ತೃಪ್ತರಾಗಬೇಕು ಹಾಗೂ ಸಾಧನೆಗಾಗಿ ಆಶೀರ್ವಾದ ಸಿಗಬೇಕೆಂದು’, ಪಿತೃಪಕ್ಷದಲ್ಲಿ ಎಲ್ಲರೂ ಮಹಾಲಯ ಶ್ರಾದ್ಧವನ್ನು ಮಾಡಬೇಕೆಂದು ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.
ಪಿತೃಪಕ್ಷ ಸಮಯದಲ್ಲಿ ಕುಲದಲ್ಲಿನ ಎಲ್ಲ ಪಿತೃಗಳು ಅನ್ನ ಮತ್ತು ಉದಕ(ನೀರು)ದ ಅಪೇಕ್ಷೆಯಿಂದ ತಮ್ಮ ವಂಶದವರ ಸಮೀಪಕ್ಕೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಪೃಥ್ವಿಲೋಕಕ್ಕೆ ಅತಿ ಸಮೀಪ ಬರುತ್ತಿರುವುದರಿಂದ ಪಿತೃಗಳಿಗೆ ನೀಡುವ ಅನ್ನ, ಉದಕ (ನೀರು) ಮತ್ತು ಪಿಂಡದಾನವು ಅವರಿಗೆ ಬೇಗನೆ ತಲುಪುತ್ತದೆ. ಆದ್ದರಿಂದ ಅವರು ಸಂತುಷ್ಟರಾಗಿ ಕುಟುಂಬದವರಿಗೆ ಆಶೀರ್ವಾದವನ್ನು ನೀಡುತ್ತಾರೆ. ಶ್ರಾದ್ಧವಿಧಿ ಮಾಡುವುದರಿಂದ ಪಿತೃದೋಷದಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಗೆ ಸಹಾಯವಾಗುತ್ತದೆ. ಹೀಗಿದ್ದರೂ ಪ್ರಸ್ತುತ ಶ್ರಾದ್ಧವಿಧಿ ಹೇಗೆ ಮಾಡಬೇಕೆಂದು ಜನರ ಎದುರು ಯಕ್ಷ ಪ್ರಶ್ನೆಯಾಗಿದೆ. ಆ ನಿಮಿತ್ತ ಈ ಲೇಖನ

‘ಕೊರೋನಾ’ ಮಹಾಮಾರಿಯಿಂದ ಹಿನ್ನೆಲೆಯಲ್ಲಿ ಪಿತೃಪಕ್ಷದಲ್ಲಿ ಶಾಸ್ತ್ರಕ್ಕನುಸಾರ ಮಹಾಲಯ ಶ್ರಾದ್ಧವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಏನು ಮಾಡಬೇಕು ?

‘ಸದ್ಯ ಜಗತ್ತಿನಾದ್ಯಂತ ಕೊರೊನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜನರ ಸಂಚಾರಕ್ಕೆ (ಲಾಕ್‌ಡೌನ್) ಅನೇಕ ನಿರ್ಬಂಧಗಳಿವೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರಸಾರಿಗೆಗೆ ನಿಷೇಧವಿದೆ. ಕೆಲವು ಸ್ಥಳಗಳಲ್ಲಿ ಕೊರೊನಾದ ಸೋಂಕು ಕಡಿಮೆಯಿದ್ದರೂ, ಅಲ್ಲಿನ ಜನರು ಮನೆಯಿಂದ ಹೊರಗೆ ಬರಲು ಅನೇಕ ನಿಷೇಧಗಳಿವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ ಮತ್ತು ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿಷೇಧಗಳು ಬಂದಿವೆ. ಕೊರೊನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ ಎಂದು ಹೇಳುತ್ತಾರೆ. ‘ಆಪದ್ಧರ್ಮ ಅಂದರೆ ‘ಆಪದ್ಧರ್ಮ ಕರ್ತವ್ಯೋ ಧರ್ಮಃ| ಅಂದರೆ ‘ ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳು.

ಇಂತಹ ಕಾಲದಲ್ಲಿಯೇ ‘ಪಿತೃಪಕ್ಷ’ ಬಂದಿರುವುದರಿಂದ ಸಂಪತ್ಕಾಲದಲ್ಲಿ ಹೇಳಿದ ಪದ್ಧತಿಯನ್ನು ಈ ಬಾರಿ ಎಂದಿನಂತೆ ಮಾಡಲು ಮಿತಿ ಇದೆ. ಇಂತಹ ಸ್ಥಿತಿಯಲ್ಲಿ ‘ಶ್ರಾದ್ಧ ಮಾಡುವ ಬಗ್ಗೆ ಶ್ರಾಸ್ತ್ರವಿಧಾನವೇನು ?’ ಎಂಬ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ‘ಹಿಂದೂ ಧರ್ಮವು ಯಾವ ಮಟ್ಟದವರೆಗೆ ಮಾನವನ ವಿಚಾರವನ್ನು ಮಾಡಿದೆ ?, ಎಂಬುದನ್ನು ನಾವು ಕಲಿಯಬಹುದು. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಗಮನಕ್ಕೆ ಬರುತ್ತದೆ.

೧. ಆಮಶ್ರಾದ್ಧವನ್ನು ಮಾಡುವುದು
‘ಆಪತ್ಕಾಲದಲ್ಲಿ, ಪತ್ನಿಯ ಅನುಪಸ್ಥಿತಿಯಿದ್ದರೆ, ತೀರ್ಥಕ್ಷೇತ್ರದಲ್ಲಿ ಮತ್ತು ಸಂಕ್ರಾಂತಿಯ ದಿನ ಆಮಶ್ರಾದ್ಧ ಮಾಡಬಹುದು’, ಎಂದು ಕಾತ್ಯಾಯನನ ವಚನವಿದೆ. ಯಾವುದೇ ಕಾರಣದಿಂದ ಪೂರ್ಣಶ್ರಾದ್ಧ ವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಸಂಕಲ್ಪಪೂರ್ವಕ ‘ಆಮಶ್ರಾದ್ಧ’ ಮಾಡಬೇಕು. ತಮ್ಮ ಕ್ಷಮತೆಗನುಸಾರ ಧಾನ್ಯ, ಅಕ್ಕಿ, ಎಣ್ಣೆ, ತುಪ್ಪ, ಸಕ್ಕರೆ, ಬಟಾಟೆ, ತೆಂಗಿನಕಾಯಿ, ೧ ಅಡಿಕೆ, ೨ ವೀಳ್ಯದೆಲೆ, ೧ ನಾಣ್ಯ ಇತ್ಯಾದಿ ಸಾಹಿತ್ಯಗಳನ್ನು ಹರಿವಾಣದಲ್ಲಿಡಬೇಕು. ‘ಆಮಾನ್ನಸ್ಥಿತ ಶ್ರೀ ಮಹಾವಿಷ್ಣುವೇ ನಮಃ |’ ಈ ನಾಮಮಂತ್ರವನ್ನು ಹೇಳುತ್ತಾ ಅದರ ಮೇಲೆ ಗಂಧ, ಅಕ್ಷತೆ, ಹೂವು ಮತ್ತು ತುಳಸಿಎಲೆಯನ್ನು ಅರ್ಪಿಸಬೇಕು. ಆ ಸಾಹಿತ್ಯವನ್ನು ಯಾರಿಗಾದರೂ ಪುರೋಹಿತರಿಗೆ ಕೊಡಬೇಕು. ಪುರೋಹಿತರು ಸಿಗದಿದ್ದರೆ, ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಕ್ಕೆ ದಾನ ಮಾಡಬೇಕು.

೨. ‘ಹಿರಣ್ಯ ಶ್ರಾದ್ಧ’ ಮಾಡುವುದು
ಈ ಮೇಲಿನಂತೆಯೂ ಮಾಡಲು ಸಾಧ್ಯವಾಗದಿದ್ದರೆ, ಸಂಕಲ್ಪಪೂರ್ವಕ ‘ಹಿರಣ್ಯ ಶ್ರಾದ್ಧ’ ಮಾಡಬೇಕು, ಅಂದರೆ ನಮ್ಮ ಕ್ಷಮತೆಗನುಸಾರ ವ್ಯಾವಹಾರಿಕ ದ್ರವ್ಯವನ್ನು (ಹಣವನ್ನು) ಒಂದು ಹರಿವಾಣದಲ್ಲಿಡಬೇಕು. ‘ಹಿರಣ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ |’ ಅಥವಾ ‘ದ್ರವ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ |’ ಎಂದು ಹೇಳಿ ಅವುಗಳಿಗೆ ಗಂಧ, ಅಕ್ಷತೆ, ಹೂವು ಮತ್ತು ತುಳಸಿಎಲೆಗಳನ್ನು ಒಟ್ಟಿಗೆ ಅರ್ಪಿಸಬೇಕು. ಅನಂತರ ಆ ಹಣವನ್ನು ಪುರೋಹಿತರಿಗೆ ಅರ್ಪಿಸಬೇಕು. ಪುರೋಹಿತರು ಸಿಗದಿದ್ದರೆ ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಗಳಿಗೆ ದಾನ ಮಾಡಬೇಕು.

೩. ಗೋಗ್ರಾಸವನ್ನು ನೀಡುವುದು
ಯಾರಿಗೆ ಆಮಶ್ರಾದ್ಧ ಮಾಡಲು ಸಾಧ್ಯವಿಲ್ಲವೋ, ಅವರು ಗೋಗ್ರಾಸವನ್ನು ನೀಡಬೇಕು. ಗೋಗ್ರಾಸವನ್ನು ಕೂಡ ಕೊಡಲು ಸಾಧ್ಯವಿಲ್ಲದವರು ಸಮೀಪದ ಗೋಶಾಲೆಯನ್ನು ಸಂಪರ್ಕಿಸಿ ಗೋಗ್ರಾಸಕ್ಕಾಗಿ ಸ್ವಲ್ಪ ಹಣವನ್ನು ಅರ್ಪಣೆ ಮಾಡಬೇಕು.

ಈ ಮೇಲಿನವುಗಳಲ್ಲಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ಗೋಗ್ರಾಸವನ್ನು ಸಮರ್ಪಿಸಿದ ನಂತರ ಎಳ್ಳುತರ್ಪಣೆ ಮಾಡಬೇಕು. ಪಂಚಪಾತ್ರೆಯಲ್ಲಿ (ಲೋಟದಲ್ಲಿ) ನೀರು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕಪ್ಪು ಎಳ್ಳು ಹಾಕಬೇಕು. ಈ ರೀತಿ ತಿಲೋದಕವನ್ನು ಸಿದ್ಧಪಡಿಸಬೇಕು. ಅನಂತರ ಪಿತೃಗಳ ಹೆಸರನ್ನು ಸ್ಮರಿಸಿಕೊಂಡು ಬಲಗೈಯ ಹೆಬ್ಬೆರಳು ಮತ್ತು ತರ್ಜನಿಯಿಂದ ತಿಲೋದಕವನ್ನು ಅರ್ಪಿಸಬೇಕು. ವ್ಯಕ್ತಿಯ ಹೆಸರು ನೆನಪಿಲ್ಲದಿದ್ದರೆ, ಆ ವ್ಯಕ್ತಿಯನ್ನು ಸ್ಮರಿಸಿ ತಿಲೋದಕವನ್ನು ನೀಡಬೇಕು. ಸಾಮಾನ್ಯವಾಗಿ ಇವೆಲ್ಲ ವಿಧಿಗಳನ್ನು ಮಾಡುವಾಗ ಪುರೋಹಿತರು ಮಂತ್ರಪಠಣ ಮಾಡುತ್ತಾರೆ ಹಾಗೂ ನಾವು ಕೃತಿ ಮಾಡುತ್ತೇವೆ. ಪುರೋಹಿತರು ಸಿಗದಿದ್ದರೆ, ಈ ಲೇಖನದಲ್ಲಿ ಹೇಳಿದಂತೆ ಭಾವವನ್ನಿಟ್ಟು ವಿಧಿ ಮಾಡಬೇಕು.

ಯಾವುದೇ ವಿಧಿಯನ್ನು ಮಾಡಲು ಸಾಧ್ಯವಿಲ್ಲದವರು ಕೇವಲ ಎಳ್ಳು ತರ್ಪಣೆಯನ್ನಾದರೂ ಮಾಡಬೇಕು.

೪. ಯಾರಿಗೆ ಈ ಮೇಲಿನ ಯಾವುದೇ ಕೃತಿಯನ್ನು ಮಾಡಲು ಸಾಧ್ಯವಿಲ್ಲವೋ, ಅವರು ಧರ್ಮಕಾರ್ಯಕ್ಕಾಗಿ ಸಮರ್ಪಿಸಿಕೊಂಡಿರುವ ಯಾವುದೇ ಆಧ್ಯಾತ್ಮಿಕ ಸಂಸ್ಥೆಗೆ ಅರ್ಪಣೆ ಮಾಡಬೇಕು.

ಶ್ರಾದ್ಧವಿಧಿಯನ್ನು ಮಾಡುವಾಗ ಮಾಡಬೇಕಾದ ಪ್ರಾರ್ಥನೆ !
‘ಶಾಸ್ತ್ರಕ್ಕನುಸಾರ ಇದ್ದ ಪರಿಸ್ಥಿತಿಯಲ್ಲಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ತರ್ಪಣ ವಿಧಿ (ಮೇಲೆ ತಿಳಿಸಿದಂತೆ ಯಾವುದನ್ನು ಮಾಡಿದ್ದೇವೆ ಆ ವಿಧಿಯನ್ನು ಉಲ್ಲೇಖಿಸಿ) ಇದನ್ನು ಮಾಡಲಾಗಿದೆ. ಇದರಿಂದ ಪಿತೃಗಳಿಗೆ ಅನ್ನ ಮತ್ತು ನೀರು ಸಿಗಲಿ. ಈ ದಾನದಿಂದ ಎಲ್ಲ ಪಿತೃಗಳು ತೃಪ್ತರಾಗಲಿ. ಅವರ ಕೃಪಾಶೀರ್ವಾದ ನಮ್ಮ ಮೇಲಿರಲಿ. ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅವರ ಆಶೀರ್ವಾದ ಸಿಗಲಿ. ದತ್ತಗುರುಗಳ ಕೃಪೆಯಿಂದ ಅವರಿಗೆ ಮುಂದಿನ ಗತಿ ಪ್ರಾಪ್ತಿಯಾಗಲಿ’, ಎಂದು ಶ್ರೀ ದತ್ತಗುರುಗಳ ಚರಣಗಳಲ್ಲಿ ಪ್ರಾರ್ಥನೆ ಮಾಡಬೇಕು.

ಪಿತೃಪಕ್ಷದ ನಂತರ ಅಧಿಕ ಮಾಸ ಬರುವುದರಿಂದ ಆ ಅವಧಿಯಲ್ಲಿ ಎಂದರೆ 18.9.2020 ರಿಂದ 16.10.2020 ಈ ಅವಧಿಯಲ್ಲಿ ಶ್ರಾದ್ಧ ಮಾಡಬಾರದು. ಅನಂತರ ಮಹಾಲಯ ಸಮಾಪ್ತಿಯ ನಂತರ ಅಂದರೆ 17.10.2020 ರಿಂದ 15.11.2020 ಈ ಅವಧಿಯಲ್ಲಿ ಶ್ರಾದ್ಧ ಮಾಡಬಹುದು.

ಕೊರೋನಾದ ಮಹಾಮಾರಿಯಿಂದಾಗಿ ಈಗಿನ ಸ್ಥಿತಿಯು ಬದಲಾಗಿ ಮುಂಚಿನಂತಾದರೆ ವಿಧಿಪೂರ್ವಕ ಪಿಂಡದಾನ ಮಾಡಿ ಶ್ರಾದ್ಧ ಮಾಡಬೇಕು.’

ಆಧಾರ : ಸನಾತನ ಸಂಸ್ಥೆ
ಸಂಪರ್ಕ : 9342599299

LEAVE A REPLY

Please enter your comment!
Please enter your name here