ಅಭಿವೃದ್ಧಿ ಮಂಡಳಿಯಿಂದ ಶೀಘ್ರದಲ್ಲೇ 91734 ಮನೆ ನಿರ್ಮಾಣ

0

ಸಾಚಿ ಟಿವಿ ನ್ಯೂಸ್

ಅಭಿವೃದ್ಧಿ ಮಂಡಳಿಯಿಂದ ಶೀಘ್ರದಲ್ಲೇ 91734 ಮನೆ ನಿರ್ಮಾಣ

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶೀಘ್ರದಲ್ಲಿ 91734 ಮನೆ ನಿರ್ಮಾಣ: ಅಧ್ಯಕ್ಷ ಮಹೇಶ ಕುಮಠಳ್ಳಿ ಮಾಹಿತಿ

ಅಥಣಿ : ರಾಜ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶೀಘ್ರದಲ್ಲಿ 91734 ಮನೆ ನಿರ್ಮಾಣ ಮಾಡಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ  ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.

ಅಥಣಿಯ ಪ್ರವಾಸಿಮಂದಿರದಲ್ಲಿ ಗುರುವಾರ ಸಂಜೆ ಅಥಣಿ ಕಾರ್ಯ ನಿರತ ಪತ್ರಕರ್ತರ ಸಂಘದ ಜೊತೆಗೆ” ಶಾಸಕರೊಂದಿಗೆ ವಿಶೇಷ ಸಂವಾದ” ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡುತ್ತ ನಾನು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ಜೂನ್‌ 3 ರಂದು  ಅಧಿಕಾರ ವಹಿಸಿಕೊಂಡು ಅವತ್ತು ಸಂಜೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿದ್ದೆನೆ. ಶೀಘ್ರದಲ್ಲಿ 5.5  ಲಕ್ಷ ವೆಚ್ಚದ 91734 ಮನೆ ನಿರ್ಮಾಣ ಮಾಡಲಾಗುವುದು.ಈ ಕಾರ್ಯಕ್ಕೆ 6500 ಕೋಟಿ ರೂ ವೆಚ್ಚ ತಗಲುತ್ತದೆ. ಇದರಲ್ಲಿ ಕೇಂದ್ರದಿಂದ1.5 ಲಕ್ಷ, ರಾಜ್ಯದಿಂದ 2 ಲಕ್ಷ ಅನುದಾನ ಪಾಲುದಾರಿಕೆಯಿದ್ದು 350 ಚದುರ ಮಿಟರ ಮನೆ ನಿರ್ಮಾಣ ಮಾಡುವ ಈ ಯೋಜನೆ ಸುಮಾರು ಎರಡು ವರ್ಷಗಳಿಂದ ಬಾಕಿ ಇದ್ದು ಈಗಾಗಲೇ  ಮಂತ್ರಿ ಮಂಡಲದ ಅನುಮತಿ ಸಿಕ್ಕಿದೆಯೆಂದು ತಿಳಿಸಲು ಅತೀವ ಸಂತೋಷವೆನಿಸುತ್ತದೆ.ಕೇಂದ್ರದ ಅನದಾನ ಸುಮಾರು ಐದನೂರರಿಂದ ಆರುನೂರುಕೋಟಿ ರೂಪಾಯಿ ಜಮಾ ಆಗಲಿದೆ.

ನನ್ನ ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವ ಸೋಮಣ್ಣ,ಉಪಮುಖ್ಯಮಂತ್ರಿ ಗೊವಿಂದ ಕಾರಜೋಳ,

ಸಚಿವರಾದ ರಮೇಶ ಜಾರಕಿಹೊಳಿ, ಸಚಿವರಾದ ಕೆ ಎಸ್ ಈಶ್ವರಪ್ಪ, ಎಲ್ಲ ಸಚಿವರ ಶಾಸಕರ ಸಹಕಾರ ತುಂಬಾ ಇದೆ ಎಲ್ಲರನ್ನೂ ಈ ವೇಳೆ ಕೃತಜ್ಞತೆಯಿಂದ ಸ್ಮರಿಸುವುದಾಗಿ ಹೇಳಿದರು.

ಈಗಾಗಲೇ 83911 ಕೋಟಿ ರೂ ವೆಚ್ಚದ ಕಾಮಗಾರಿ ಪ್ರಾರಂಭವಿದ್ದು 20-30 ಪ್ರತಿಶತ ಕಾಮಗಾರಿ ಪೂರ್ಣಗೊಂಡಿದೆ.30-35 ಪ್ರತಿಶತ ಪ್ರಗತಿಯಲ್ಲಿದೆ.25-30 ಬಾಕಿಯಿದೆ.ಈ ಕಾರ್ಯಕ್ಕೆ 503.11ಕೊಟಿ ರೂಪಾಯಿ ಅನುದಾನ ಬಿಡುಗಡೆ ಆಗಬೇಕಾಗಬೇಕಾಗಿದ್ದು ಶೀಘ್ರ ಬಿಡುಗಡೆ ಮಾಡಿಕೊಂಡು ಚಾಲನೆ ನೀಡಲಾಗುವುದು.ಉತ್ತರ ಕರ್ನಾಟಕ ಪ್ರದೇಶಕ್ಕೆ ದೊರಕಬೇಕಾದ ಪಾಲನ್ನು ನ್ಯಾಯಯುತವಾಗಿ ದೊರಕಿಸಿ ಕೊಡಲಾಗುವುದು ಎಂದು ಹೇಳಿದರು.

ಅಥಣಿಯಲ್ಲಿ 1500 ಮನೆ ನಿರ್ಮಾಣ:

91734 ಮನೆಗಳಲ್ಲಿ

ಅಥಣಿಯಲ್ಲಿ ಸುಮಾರು1500 ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಕುಮಠಳ್ಳಿ ಮಾಹಿತಿ ನೀಡಿದರು. ಬೆಳಗಾವಿ ಜಿಲ್ಲೆಯ18 ಕ್ಷೇತ್ರದಲ್ಲಿ ಪಟ್ಟಣ ಪಂಚಾಯತಿ, ಪುರಸಭೆ ಅಲ್ಲದ ಬೆಳಗಾವಿ ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರ ಹೊರತುಪಡಿಸಿ ಉಳಿದ 16 ಕ್ಷೇತ್ರದಲ್ಲಿ ಮಂಡಳಿಯಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವದು ಎಂದು ಹೇಳಿದರು.

ವರದಿ :ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here