ಬೆಳಗಾವಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ, ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ಕ್ರಮಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಖಾಸಗೀ ಆಸ್ಪತ್ರೆಗಳು ಕೋವಿಡ್ ಹಾಗೂ ಇತರ ಚಿಕಿತ್ಸೆಗೆ ಮುಂದಾಗುತ್ತಿರುವುದು ಸಂತಸದ ಸಂಗತಿ. ಹೀಗೆ ಸ್ವಯಂಪ್ರೇರಿತವಾಗಿ ಮುಂಬರುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿ, ಮಾರ್ಗಸೂಚಿ ಪ್ರಕಾರ ತಕ್ಷಣವೇ ಅನುಮತಿ ನೀಡಬೇಕು. ಪ್ರತಿ ತಾಲ್ಲೂಕಿಗೆ ಒಂದರಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದರೆ ತುರ್ತು ಚಿಕಿತ್ಸೆಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಜೊತೆಗೆ ನಿಸ್ವಾರ್ಥ, ಸೇವಾ ಮನೋಭಾವ ಮೆರೆಯುತ್ತಿರುವ ಖಾಸಗೀ ಆಸ್ಪತ್ರೆಗಳು ಹಾಗೂ ವೈದ್ಯಕೀಯ ವೃಂದವನ್ನು ಶ್ಲಾಘಿಸಿದರು.
ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಸಂಭವ ಎದ್ದು ಕಾಣಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸಂಜಯ್ ಪಾಟೀಲ್, ಜಿಲ್ಲಾಧಿಕಾರಗಳಾದ ಶ್ರೀ ಎಂ. ಜಿ ಹಿರೇಮಠ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಲಕ್ಷ್ಮಣ ನಿಂಬರಗಿ, ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಗಳಾದ ಶ್ರೀ ಅರವಿಂದ ಕಣಗಲಿ, ಅಪರ ಜಿಲ್ಲಾಧಿಕಾರಿ ಶ್ರೀ ಅಶೋಕ ದುಡಗುಂಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಶಿವನಗೌಡ ಪಾಟೀಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶ್ರೀ ಡಾ. ತುಕ್ಕಾರ, ನೀರಾವರಿ ಇಲಾಖೆಯ ಎಂಜಿನಿಯರ್ ಶ್ರೀ ಸಿ.ಡಿ. ಪಾಟೀಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
बेळगावी
“कोविड आणि पुराचा सामना करण्यासाठी आम्ही पूर्णपणे तयार आहोत”
बेळगावी जिल्हा शासकीय विश्रामगृह येथे विविध विभागांच्या अधिकाऱ्यांच्याशी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी बैठक घेऊन, कोविड -19 नियंत्रण आणि पूर परिस्थितीशी पुरेशा व्यवस्थापन उपायांवर चर्चा केली व आवश्यक सल्ला व सूचना दिल्या.
जिल्ह्यातील खाजगी रुग्णालये कोविड व इतर उपचारांवर पुढे येऊन उपचार देत आहेत ही अभिमानाची बाब आहे. असे स्वयंप्रेरित पुढे येत असलेल्या खाजगी रुग्णालयांना ओळखून, तेथील सुविधांची तपासणी करून, मार्गदर्शक सूचनांनुसार त्वरित परवानगी दिली पाहिजे. प्रत्येक तालुक्यात एक तर खासगी रुग्णालयात उपचार उपलब्ध असल्यास आपत्कालीन उपचार करणे अनुकूल ठरेल, अशी मनोगत व्यक्त करण्यात आली. याव्यतिरिक्त, नि: स्वार्थ, सेवा-विचारांची खासगी रुग्णालये आणि वैद्यकीय कर्मचार्यांचे कौतुक केले.
मुसळधार पावसामुळे वारंवार पूर येत असून त्यावर नियंत्रण ठेवण्यासाठी योग्य त्या उपाययोजना केल्या पाहिजेत असे सांगितले.
यावेळी आमदार श्री दुर्योधन एेहोले, बेळगाव जिल्हा भाजपाचे अध्यक्ष श्री संजय पाटील, जिल्हाधिकारी श्री एम. जी.हिरेमठ, जिल्हा पंचायतचे मुख्य कार्यकारी अधिकारी श्री दर्शन एच वी, जिल्हा पोलिस प्रमुख श्री लक्ष्मण निंबरगी, कर्नाटक पाटबंधारे महामंडळाचे उत्तर विभागाचे अभियंता श्री अरविंद कणगली, अपर जिल्हाधिकारी श्री अशोक दुडगंटी, कृषी सहसंचालक श्री शिवनगौड पाटील, जिल्हा सर्व्हेअर, डॉ. तुक्कार, पाटबंधारे विभागाचे अभियंता श्री सी.डी. पाटील व विविध विभागाचे अधिकारी उपस्थित होते..