ಕೊವಿಡ್-19 ಪರೀಕ್ಷೆ ವಿಳಂಬ ಗತಿಯಲ್ಲಿ ಸಾಗುವ ಭಯಕ್ಕೆ ಶಾಶ್ವತ ಪರಿಹಾರ

0

ಕೊವಿಡ್-19 ಪರೀಕ್ಷೆ ವಿಳಂಬ ಗತಿಯಲ್ಲಿ ಸಾಗುವ ಭಯಕ್ಕೆ ಶಾಶ್ವತ ಪರಿಹಾರ

ನನ್ನ ಉಸ್ತುವಾರಿ ಜಿಲ್ಲೆಯಾದ ವಿಜಯಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ, ನೂತನವಾಗಿ ಪ್ರಾರಂಭವಾಗಿರುವ ಆರ್.ಟಿ.ಪಿ.ಸಿ‌.ಆರ್ ಲ್ಯಾಬ್ ಅನ್ನು ಉದ್ಘಾಟಿಸಿ, ಮಾತನಾಡಲಾಯಿತು.

ಈ ಲ್ಯಾಬ್‌ನಲ್ಲಿ ಒಂದು ಬಾರಿಗೆ ಪ್ರತಿ 8 ತಾಸಿಗೆ 90 ಮತ್ತು ಪ್ರತಿ ದಿನಕ್ಕೆ 200 ಪರೀಕ್ಷೆಗೆ ಜನರನ್ನು ಒಳಪಡಿಸಿ ತೀವ್ರಗತಿಯಲ್ಲಿ ಫಲಿತಾಂಶ ಕಂಡುಕೊಳ್ಳಬಹುದಾಗಿದೆ. ಇದು ’96 well Capacity’ ಒಳಗೊಂಡಿದ್ದು, 3-ಬಯೋಸೇಫ್ಟಿ ಕ್ಯಾಬಿನೆಟ್, 90 ಡಿಗ್ರಿ ಮತ್ತು 20 ಡಿಗ್ರಿ ಥರ್ಮೋಫಿಶರ್ ಫ್ರೀಜರ್ ಮತ್ತು 1-RNA Extraction ಗಳನ್ನೊಳಗೊಂಡಿದೆ.

RT-PCR ಲ್ಯಾಬ್ ಕೊವಿಡ್-19 ಸೋಂಕಿತ ರೋಗಿಗಳ ತಪಾಸಣೆ ಮಾತ್ರವಲ್ಲದೇ, ಗುಣ ಲಕ್ಷಣಗಳಿಲ್ಲದ ಸಂಶಯಿತ ಕ್ಯಾನ್ಸರ್ ಬಯೊ ಮಾರ್ಕರ್ ರೋಗದ ತಪಾಸಣೆಗೆ ಸಹ ಇದನ್ನು ಬಳಸಿಕೊಳ್ಳಬಹುದು. ಈ ಲ್ಯಾಬ್ ಸ್ಥಾಪನೆಯಿಂದ ಕೊವಿಡ್-19 ತಡೆಗಟ್ಟುವಲ್ಲಿ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಅತ್ಯಂತ ಸಹಕಾರಿಯಾಗಿರುತ್ತದೆ. ಲ್ಯಾಬ್ ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿಗಳನ್ನು ಸೂಕ್ತ ತರಬೇತಿಯನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಶ್ರೀ ಅರುಣ ಶಹಾಪುರ, ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಗೋವಿಂದ ರೆಡ್ಡಿ, ಜಿಲ್ಲಾ ವೈದ್ಯಾಧಿಕಾರಿಗಳಾದ ಶ್ರೀ ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಕಟ್ಟಿ, ಮೈಕ್ರೋ ಬಯೋಲಾಜಿಸ್ಟ್ ಗಳದ ಶ್ರೀಮತಿ ಚೆನಮ್ಮ ಕಟ್ಟಿ, ಅಧಿಕಾರಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here