ಕೋಟಿ ರೂ ಆಸ್ತಿಗಾಗಿ ಅಜ್ಜಿ, ತಂದೆಗೆ ಮೋಸ ಮಾಡಿ ಪರಾರಿಯಾದ ಮಗಳು

0

 ಹಣ, ಆಸ್ತಿ ಮುಂದೆ ಸಂಬಂಧಗಳು ಗೌಣವಾಗುತ್ತವೆ. ಅಂತಹದ್ದೆ ಘಟನೆ ಇಲ್ಲೊಂದು ನಡೆದು ಮೊಮ್ಮಗಳು ಮಾಡಿದ ಮೋಸಕ್ಕೆ ಈಗ ಅಜ್ಜಿ ಆಸ್ಪತ್ರೆ ಪಾಲಾಗಿದ್ದು, ಅಪ್ಪ ಅನಾಥವಾಗಿದ್ದಾರೆ. ಪೋಷಕರ ಮುಗ್ಧತೆಯನ್ನೇ ದುರಪಯೋಗ ಮಾಡಿಕೊಂಡು ಕೋಟ್ಯಾಂತರ ರೂ ಆಸ್ತಿಯನ್ನು ಲಪಟಾಯಿಸಿ ಮೊಮ್ಮಗಳು ಪರಾರಿಯಾಗಿದ್ದಾಳೆ. 84 ವರ್ಷದ ಸೆಲೆಸ್ಟಿನ್​ ಎಂಬ ಹಿರಿಯ ವೃದ್ದೆ ಮೊಮ್ಮಗಳು ರೋಶನಿ ಉದಯ್​ ವಂಚಿಸಿದಾಕೆ. ಹಲವರು ವರ್ಷಗಳ ಹಿಂದೆ ಮುಂಬೈನಲ್ಲಿ ನೆಲೆಸಿದ್ದ ಸೆಲೆಸ್ಟಿನ್​ , ಗಂಡ ತೀರಿ ಹೋದ ಬಳಿಕ ಇಲ್ಲಿನ ಮುದರಂಗಡಿ ಸಮೀಪದ ಸಾಂತೂರಿನಲ್ಲಿ ಬಂದು ನೆಲೆಸಿದ್ದರು. ಕೂಲಿ ನಾಲಿ ಮಾಡಿ ನಾಲ್ಕು ಮಕ್ಕಳನ್ನು ಸಾಕಿದ ಈಕೆ 1967ರಲ್ಲಿ ಎರಡು ಎಕರೆ ಜಮೀನು ಕೊಂಡಿದ್ದಳು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂ ಬೆಲೆಬಾಳುವ ಈ ಆಸ್ತಿಯ ಮೇಲೆ ಕಣ್ಣಿಟ್ಟ ಮೊಮ್ಮಗಳು ಅಜ್ಜಿಗೆ ಪ್ರೀತಿಯಿಂದಲೇ ಮೋಸ ಮಾಡಿದ್ದಾಳೆ. ಈ ಹಿಂದೆ ಮುಂಬೈನಲ್ಲಿ ವಾಸವಾಗಿದ್ದ ಮಗ​ ರೋನಾಲ್ಡ್ ಅಮ್ಮ ಸೆಬಸ್ಟಿನ್​ ಜೊತೆ ಇಲ್ಲಿಯೇ ವಾಸವಾಗಿದ್ದಾನೆ. ಈತನ ಮಗಳೇ ರೋಶನಿ. ಅಜ್ಜಿಯ ಜೊತೆಗಿನ ಅತಿಯಾದ ಸಲುಗೆಯಿಂದ ರೋಶನಿ ವಂಚನೆಯ ರಣತಂತ್ರ ಹೂಡಿದ್ದಾಳೆ. ತನ್ನ ವೃದ್ದ ತಂದೆಗೂ ಅರಿವಿಗೆ ಬಾರದಂತೆ ಮನೆ-ಆಸ್ತಿ ಲಪಟಾಯಿಸಿದ್ದಾಳೆ. 2019 ರ ಜನವರಿ ತಿಂಗಳಲ್ಲಿ ಅಜ್ಜಿ ಮತ್ತು ತಂದೆಯನ್ನು ಮೂಲ್ಕಿಯ ಸಬ್ ರಿಜಿಸ್ಟಾರ್ ಕಚೇರಿಗೆ ಕರೆದೊಯ್ದಿದ್ದಾಳೆ. ಇಬ್ಬರೂ ಅನಕ್ಷರಸ್ಥರಾದ ಕಾರಣ ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು-ಸಹಿ ಹಾಕಿಸಿಕೊಂಡಿದ್ದಾಳೆ. ಮೂರು ತಿಂಗಳ ನಂತರ ತಂದೆಯನ್ನು ಮಾತ್ರ ಅದೇ ಕಚೇರಿಗೆ ಕರೆದೊಯ್ದು ಮತ್ತೆ ಸಹಿ ಪಡೆದಿದ್ದಾಳೆ. ಈ ಮೂಲಕ ಅಜ್ಜಿಯ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ. ರೈತರಿಗೆ ನೀಡುವ ಸಾಲದ ಯೋಜನೆಯ ನೆಪ ಮಾಡಿ ಮೊಮ್ಮಗಳು ರೋಶನಿ ಈ ಸಹಿ ಪಡೆದಿದ್ದಾಳೆ. ಮೊಮ್ಮಗಳ ಬಗ್ಗೆ ಇದ್ದ ಅತಿಯಾದ ಕುರುಡು ಪ್ರೀತಿ ಹಾಗೂ ನಂಬಿಕೆ ಹೊಂದಿದ್ದ ಅಜ್ಜಿ ಮೋಸಹೋಗಿದ್ದು, ಆಸ್ಪತ್ರೆ ಪಾಲಾಗಿದ್ದಾರೆ. ಈ ವೃದ್ದೆ ಸೆಲೆಸ್ಟಿನ್ ತನ್ನ ನಾಲ್ವರು ಮಕ್ಕಳ ಹೆಸರಿಗೆ ವೀಲುನಾಮೆ ಬರೆಸಿದ್ದರು. ಆದರೆ ಈ ವೀಲು ನಾಮೆಯನ್ನು ರೋಶನಿ ಬಚ್ಚಿಟ್ಟಿದ್ದಾಳೆ.

ಇಪ್ಪತ್ತು ದಿನಗಳ ಹಿಂದೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸರ್ಕಾರಿ ಯೋಜನೆಯೊಂದಕ್ಕೆ ಕೃಷಿ ಸಮೀಕ್ಷೆಗೆ ಬಂದಾಗ ಮನೆ ಹಾಗೂ ಜಮೀನು ರೋಶನಿ ಹೆಸರಿಗೆ ವರ್ಗಾವಣೆ ಗೊಂಡಿರೋದು ಪತ್ತೆಯಾಗಿದೆ. ಸದ್ಯ ಈ ಪ್ರಕರಣ ಮಾನವ ಹಕ್ಕುಗಳ ಪ್ರತಿಷ್ಟಾನದ ಮುಂದೆ ಬಂದಿದೆ. ಡಾ.ರವೀಂದ್ರ ನಾಥ್ ಶ್ಯಾನುಭೋಗ್ ಈ ವೃದ್ಧೆಗೆ ಬೆಂಗಾವಲಾಗಿದ್ದಾರೆ. ಕಾನೂನು ಹೋರಾಟ

LEAVE A REPLY

Please enter your comment!
Please enter your name here