ಕೋಮಾಗೆ ಜಾರಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್: ದೇಶದ ಅಧಿಕಾರ ವಹಿಸಿಕೊಂಡ ಕಿಮ್‌ ಸಹೋದರಿ..!

0

ಕಳೆದ ಕೆಲ ದಿನಗಳ ಹಿಂದಿನಿಂದಲೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಬಗ್ಗೆ ಊಹಾಪೋಹಗಳು ಓಡಾಡುತ್ತಲೇ ಇದ್ವು. ಇತ್ತಿಚಿಗಷ್ಟೇ ಕೊರೊನಾ ಸೋಂಕಿನಿಂದ ಹಿಂದೆ ಕಿಮ್ ಸಾವಿನಪ್ಪಿದ್ದಾರೆ ಎನ್ನುವ ವರದಿಗಳು ಸದ್ದು ಮಾಡಿದ್ದವು. ನಂತ್ರ ಅದು ಸುಳ್ಳು ಸುದ್ದಿ ಎನ್ನುವುದು ಸಾಬೀತಾಯಿತು. ಸಧ್ಯ ಕಿಮ್ ಅವರ ಆರೋಗ್ಯದ ಕುರಿತು ಮತ್ತೊಂದು ಸುದ್ದಿ ಹೊರ ಬಂದಿದೆ. ಅದ್ರಂತೆ, ಕಿಮ್‌ ಅನಾರೋಗ್ಯದಿಂದಾಗಿ ಕೋಮಾಗೆ ಜಾರಿದ್ದಾರೆ ಮತ್ತು ಅವರ ಸಹೋದರಿ ಕಿಮ್ ಯೋ ಜಾಂಗ್‌ ದೇಶದ ಅಧಿಕಾರವನ್ನ ವಹಿಸಿಕೊಂಡಿದ್ದಾರೆ.

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಕಿಮ್ ಡಿ ಜಂಗ್ ಅವರ ಆಪ್ತರೊಬ್ಬರು ಕಿಮ್ ಜಾಂಗ್‌ ಇನ್ನೂ ಜೀವಂತವಾಗಿದ್ದಾರೆ. ಆದರೆ ಕೋಮಾದಲ್ಲಿದ್ದಾರೆ ಎಂದು ಬ್ರಿಟಿಷ್ ಪತ್ರಿಕೆ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದೆ. ಇನ್ನು ಚಾಂಗ್ ಸಾಂಗ್ ಮಿನ್ ದಕ್ಷಿಣ ಕೊರಿಯಾದ ಮಾಧ್ಯಮಕ್ಕೆ ಉತ್ತರಾಧಿಕಾರಿ ಯೋಜನೆ ಇನ್ನೂ ಸಿದ್ಧವಾಗಿಲ್ಲ ಮತ್ತು ಕಿಮ್ ಅಧಿಕಾರದಲ್ಲಿ ಇಲ್ಲದಿರುವುದನ್ನ ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಅವರ ಸಹೋದರಿ ಕಿಮ್ ಯೋ ಜಾಂಗ್‌ ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

ಹೃದಯ ಶಸ್ತ್ರಚಿಕಿತ್ಸೆ ವಿಫಲವಾದ ಕಾರಣ ಕಿಮ್ ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದಾಗ್ಯೂ, ಕೆಲವು ದಿನಗಳ ನಂತರ ರಸಗೊಬ್ಬರ ಘಟಕದ ಉದ್ಘಾಟನೆಯ ಸಂದರ್ಭದಲ್ಲಿ ಕಿಮ್‌ ಕಾಣಿಸಿಕೊಂಡಿದ್ರು.

LEAVE A REPLY

Please enter your comment!
Please enter your name here