ಕೋರೋನಾ ದಿಂದ ಹಳ್ಳಿ ಸೇರಿದವರಿಗೆ ಒಂದು ಸಲಹೆ.

0

ಕೋರೋನಾ ದಿಂದ ಹಳ್ಳಿ ಸೇರಿದವರಿಗೆ ಒಂದು ಸಲಹೆ.

ಒಂದೊಂದು ಹಳ್ಳಿಯಲ್ಲಿ ಡಿಸೇಂಟ್ ಡಿಗ್ನಿಪೈಡ್ ವಾಟ್ಸಪ್ ಗ್ರೂಪ್‌ ಮಾಡಿಕ್ಕೊಳ್ಳಿ. ಅಥವಾ ಸಂಘ‌ ಮಾಡಿಕ್ಕೊಳ್ಳಿ.

ಹಳ್ಳಿಗಳಲ್ಲಿ ಕೆಲಸಗಾರರ ಸಮಸ್ಯೆ ಇದೆ.
ಮೊದಲು ನಿಮ್ಮ ಕೆಲಸ ಮಾಡಿ.

ಬಿಡುವಾದಾಗ ಬೇರೆಯವರಿಗೆ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿ. ಒಟ್ಟಾಗಿ ಹೋಗಿ ಹಬ್ಬದ ವಾತಾವರಣವಿರುತ್ತದೆ.

ಒಬ್ಬರಿಗೆ ಈಗ ದಿನಕ್ಕೆ 400 ರೂ ಇದೆ. ತಿಂಗಳಿಗೆ ಇಪ್ಪತ್ತು ದಿನ ಕೆಲಸ‌ಮಾಡಿ..ಸಾಕು.8 ಸಾವಿರ ಆಗುತ್ತದೆ. ಗಂಡ ಹೆಂಡತಿ ದುಡಿದರೆ ಇನ್ನೂ ಜಾಸ್ತಿ.
ಯಾವುದೇ ದುಶ್ಚಟವಿಲ್ಲದ್ದಿದ್ದರೆ ಇಷ್ಟು ಸಾಕು….ಜೊತೆಗೆ ನಿಮ್ಮ ಸ್ವಂತ ಸಂಪಾದನೆ….ಬಿಪಿಲ್ …ರೇಷನ್…ಸುಖವಾಗಿರಬಹುದು.

ಈ ಸಿಟಿಯಲ್ಲಿ ಹೋರಾಟ ಒದ್ದಾಟವೇಕೆ.
ಬೇರೆಯವರ ಮನೆಯ ಗೇಟ್ ಕಾದು,ತಳ್ಳುವಗಾಡಿಯಲ್ಲಿ ತರಕಾರಿ ಮಾರಿ,ಪುಟ್ ಬಾತ್ ನಲ್ಲಿ ಕಲುಷಿತ ಆಹಾರ ಮಾರಿ ಬದುಕಬೇಕೆ.

ಕೆಲಸ ಮುಗಿಸಿ ಪ್ರತಿದಿನ ಸಂಜೆ ಸ್ನಾನ ಮಾಡಿ ನೆಮ್ಮದಿಯಿಂದ ನಿದ್ರೆ ಮಾಡಿ
ಎಷ್ಟೇ ಶ್ರೀಮಂತರಾದರೂ ಹೆಚ್ಚಿಗೆ ಉಣ್ಣಲು ,.‌‌‌‌..ಬದುಕಲು…ರೋಗರಹಿತವಾಗಿ ಬದುಕಲು ಸಾದ್ಯವಿಲ್ಲ.

ಸರಕಾರದ ಸವಲತ್ತು..ಸಾಲ..ಇತರೆ ಪ್ರಯೋಜನಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕ್ಕೊಳ್ಳಿ.

ಉಪಕಸುಬಾಗಿ …ಕುರಿ…ಕೋಳಿ ..ನಾಟಿಹಸು ..ಸಾಕಾಣಿಕೆ ಯನ್ನು ಮಾಡಿ.
ನಾಟಿಹಸುವಿನ ಹಾಲು ತುಪ್ಪ. ತಿಂದು ಮಿಕ್ಕಿದ್ದನ್ನು ಮಾರಿ.

ಸ್ವಲ್ಪ ತಿಂಗಳುಗಳಲ್ಲಿ… ನಿಮ್ಮ ಕೆಲಸಕ್ಕೆ ಗೌರವ ಮನ್ನಣೆ ಸಿಗುತ್ತದೆ.

ಎಲ್ಲರೂ ಎಲ್ಲಾ ಕೆಲಸಗಳಲ್ಲಿ…ಬೇರೆಯವರಿಗೆ ಹೋಗುವುದರಿಂದ..ಅಹಂ ಕರಗಿ ಒಂದಾಣಿಕೆ ಬರುತ್ತದೆ. ಕೀಳಿರಿಮೆ ಕಡಿಮೆಯಾಗುತ್ತೆ.

ಯೋಚಿಸಿ ಮುನ್ನಡೆಯಿರಿ….ಎಚ್ಚರಿಕೆ ರಾಜಕಾರಣಿಗಳ ಹಿಂದೆ ಹೋಗಬೇಡಿ ಅವರು ನಿಮ್ಮ ಹಿಂದೆ ಬರುವಂತೆ ಮಾಡಿ.

ಬೆಳಿಗ್ಗೆ 9 ಕ್ಕೆ ಬರುತ್ತಾರೆ ಒಂದಕ್ಕೆ ಲಂಚ್ ಐದಕ್ಕೆ ಪ್ಯಾಕ್ ಅಪ್ ಮದ್ಯೆ ಟೀ…ಖುಷಿಯಾಗಿ ಧರ್ಮ ವಾಗಿ ಕೆಲಸ ಮಾಡಿದರೆ ದೇಹಕ್ಕೆ ವ್ಯಾಯಾಮ…ಮನಸ್ಸಿಗೆ ನೆಮ್ಮದಿ…ನಿಜವಾದ ನೇಗಿಲ ಯೋಗಿ

Walk like a Lion…. Be like a servant..🙏

ಜೈ ಜವಾನ್…ಜೈ ಕಿಸಾನ್..🙏🙏🙏

LEAVE A REPLY

Please enter your comment!
Please enter your name here