ಅಣ್ಣಾಡಿಎಂಕೆ ಪಕ್ಷದ ಕಳ್ಳಕುರಿಚಿ ಕ್ಷೇತ್ರದ
ಶಾಸಕ ಪ್ರಭು (34) ಅವರು ನಿನ್ನೆಯಷ್ಟೇ (ಸೋಮವಾರ) ಪ್ರೇಮ ವಿವಾಹವಾಗಿದ್ದರು. ಇದೀಗ ವಿವಾದಕ್ಕೆ ಕಾರಣವಾಗಿದೆ.
ಶಾಸಕ ಪ್ರಭು ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ವಧು ಸೌಂದರ್ಯದ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ಮಗಳನ್ನು ಹಸ್ತಾಂತರಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.
ಪ್ರಭು ತಮ್ಮ ಮಗಳನ್ನು ಅಪಹರಿಸಿ ಬಲವಂತವಾಗಿ ಕರೆದೊಯ್ದು ಮದುವೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ನಾಳೆ ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಮದುವೆಯ ನಂತರ ಶಾಸಕ ಪ್ರಭು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಅದರಲ್ಲಿ ನಮ್ಮ ಮದುವೆ ಪರಸ್ಪರ ಇಷ್ಟಪೂರ್ವಕವಾಗಿ ನಡೆಯಿತು. ಒತ್ತಾಯಪೂರ್ವಕವಾಗಿ ನಡೆದಿಲ್ಲ.ಯಾರ ಬಲವಂತವೂ ಇಲ್ಲ. ನಾವು ನಾಲ್ಕು ತಿಂಗಳಿಂದ ಪ್ರೀತಿಸುತ್ತಿದ್ದೇವೆ. ನಾನು ಆಕೆಯನ್ನು ಅಪಹರಿಸಿದ್ದು ಸುಳ್ಳು. ಮದುವೆಯ ನಂತರ ನಾವು ಸೌಂದರ್ಯ ಅವರ ತಂದೆ ತಾಯಿಯವರ ಆಶೀರ್ವಾದಕ್ಕಾಗಿ ಅವರ ಮನೆಗೆ ಹೋದೆವು. ಆದರೆ ಅವರು ನಮ್ಮನ್ನು ತಿರಸ್ಕರಿಸಿದರು. ಆದರೆ ಈ ಮದುವೆಗೆ ನಮ್ಮ ಹೆತ್ತವರ ಅನುಮತಿ ಇದೆ ಎಂದು ತಿಳಿಸಿದ್ದಾರೆ.
ನಾನು ಪ್ರಭು ಅವರನ್ನು ಮನಃಪೂರ್ವಕವಾಗಿ ಇಷ್ಟ ಪಟ್ಟು ಪ್ರೀತಿಸಿ ಮದುವೆಯಾಗಿದ್ದೇನೆ. ಯಾರೂ ನನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಿಲ್ಲ ಎಂದು ಸೌಂದರ್ಯ ಹೇಳಿದ್ದಾರೆ.
ಸೌಂದರ್ಯದ ತಂದೆ ತನ್ನ ಊರಿನ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿವಾಹವು ಅಂತರ್ಜಾತಿ ವಿವಾಹವಾದ್ದರಿಂದ ಆಕೆಯ ತಂದೆ ತಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ.