ಕೋಲಾರ ಮಾನ್ಯ ತಹಶೀಲ್ದಾರ್ ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಖಂಡಿಸಿ ಪ್ರತಿಭಟನೆ

0

ಹರಿಹರ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಭೂಮಿ ಸರ್ವೆ ಕಾರ್ಯಕ್ಕೆ ತೆರಳಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರನ್ನು ಗುರುವಾರ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಖಂಡಿಸಿ ಶುಕ್ರವಾರ ತಾಲ್ಲೂಕ ಸರ್ಕಾರಿ ನೌಕರರ ಸಂಘದ ಸದಸ್ಯರು ತಾಲ್ಲೂಕ ಕಚೇರಿ ಮುಂದೆ ತಾಲ್ಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಒಂದು ನಿಮಿಷ ಮೌನಾಚರಣೆ ಮಾಡಿ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಿ ತಹಶಿಲ್ದಾರ ಹಾಗೂ ತಾಲ್ಲೂಕ ದಂಡಾಧಿಕಾರಿ ಕೆ.ಬಿ.ರಾಮಚಂದ್ರಪ್ಪ ರವರಿಗೆ ಮನವಿ ಸಲ್ಲಿಸಿದರು

ಈ ವೇಳೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಕರ್ತವ್ಯಕ್ಕೆ ತೆರಳಿದ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರನ್ನು ಕೊಲೆ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಬೇಕು ಜೊತೆಗೆ ಅವರ ಕುಟುಂಬಕ್ಕೆ ಅವರ ಸಾವನ್ನು ಭರಿಸುವ ಶಕ್ತಿ ನೀಡಲಿ. ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡುವ ಕಾನೂನು ರೂಪಿಸಬೇಕು ಹಾಗೂ ಹತ್ಯೆಯಾದ ತಹಶಿಲ್ದಾರರ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದರು.

ಇಂದು ಚಂದ್ರಮೌಳೇಶ್ವರ್ ಅವರ ಸಾವನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಾಹಿಸುವ ಮೂಲಕ ಸಂಕೇತಿಕವಾಗಿ ಪ್ರತಿಭಟನೆ ಮಾಡಿ, ಜನರಿಗೆ ಅನಾನುಕೂಲವಾಗದಂತೆ ಕರ್ತವ್ಯ ಮಾಡತ್ತಿದೇವೆ ನಮ್ಮ ರೈತರು ಹಾಗೂ ಸಾರ್ವಜನಿಕರ ಸೇವೆ ಮಾಡಲು ನಾವು ಇದ್ದೇವೆ ನಾವೂ ನಿಮ್ಮ ಮಕ್ಕಳೆ ನಿಮ್ಮಗಾಗಿ ನಾವೂಗಳು ಇರುವುದು ನಾವುಗಳು ಎನಾದರು ತಪ್ಪು ಮಾಡಿದರೆ ನಮ್ಮಗೆ ಸಲಹೆ ಕೊಡಿ ನಮ್ಮ ಮೇಲಾಧಿಕಾರಿಗಳಿಗೆ ದೂರು ನೀಡಿ ನಮ್ಮಗೆ ತಿದ್ದಿಕೊಳ್ಳಲು ಅವೂಕಾಶ ಕಲ್ಪಿಸಿ ಕೊಡಿ ಎಂದು ರೈತರಲ್ಲಿ ಹಾಗೂ ಸರ್ವಾಜನಿಕರಲ್ಲಿ ಮನವಿ ಮಾಡಿದರು.

ಒಟ್ಟಿನಲ್ಲಿ ಸರಳ, ಸ್ನೇಹಜೀವಿಯಾಗಿದ್ದ ಅಧಿಕಾರಿ ಚಂದ್ರಮೌಳೇಶ್ವರ ದುರ್ಮರಣಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಈ ಸಾವು ನ್ಯಾಯವೇ ಎನ್ನುವ ಪ್ರಶ್ನೆ ಹುಟ್ಟುಹಾಕಿದ್ದು, ಕೆಲಸ ಮಾಡುವ ಅಧಿಕಾರಿಗಳಿಗೆ ಭದ್ರತೆಯೆಲ್ಲಿದೆ ಎಂದು ತೋರಿಸಿದಂತಿದೆ. ಎಂದು ಪ್ರಶ್ನಿಸಿದ್ದರು.

ಸಂಘದ ಖಜಾಂಚಿ ಎ.ಕೆ ಭೂಮೇಶ್ ಮಾತನಾಡಿ ಹಾಡಹಗಲೇ, ಪೆÇಲೀಸರು ಇರುವ ವೇಳೆಯಲ್ಲಿ ಇಂತಹ ಕೃತ್ಯ ನಡೆದಿದ್ದು ಇದಕ್ಕೆ ಯಾರು ಹೊಣೆ ಅಧಿಕಾರಿಯ ಸಾವಿಗೆ ಕಾರಣರಾದ ಆರೋಪಿಗೆ ಮರಣ ದಂಡನೆ ವಿಧಿಸಬೇಕು ಹಾಗೂ ತಹಶಿಲ್ದಾರರವರು ಮರಳು ಮಣ್ಣು ಕಲ್ಲು ಗಣಿ ಮಾಫಿಯ ಜೊತೆ ನಿರಂತರ ಹೊರಾಟ ಮಾಡುತ್ತಿದ್ದಾರೆ ಅಂತಹ ಅಧಿಕಾರಿಗಳಿಗೆ ಗನ್‍ಮ್ಯಾನ ಅಂಗರಕ್ಷಕ ನೇಮಿಸ ಬೇಕೇಂದು ಆಗ್ರಹಿಸಿದ್ದರು.

ತಾಲ್ಲೂಕ ದಂಡಾದಿಕಾರಿ ಮನವಿ ಸ್ವೀಕರಿಸಿ ಮಾತನಾಡಿ ನಿಮ್ಮ ಮನವಿಯನ್ನು ಕೊಡಲ್ಲೆ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ ಅಧ್ಯಕ್ಷ ಸೈಯದ್ ನಜೀರ ಅಹ್ಮದ್,ಉಪಾ ತಹಶಿಲ್ದಾರ ರವಿಕುಮಾರ,ಗೌರವಾಧ್ಯಕ್ಷ ಎಂ.ಉಮ್ಮಣ್ಣ, ರಾಜ್ಯ ಪರಿಷತ್ ಸದಸ್ಯ ರೇವಣಸಿದ್ದಪ್ಪ ಅಂಗಡಿ,ಪ್ರಕಾರ್ಯದರ್ಶಿ ಇಮ್ತಿಯಾಜ್ ಅಹ್ಮದ್ ಮಂಜುನಾಥ ಹೊರಕೇರಿ, ದಾದಾಪೀರ್ ಮೊಮಿನ್, ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here