ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಅಲಿ ಖಾನ್ ಐಪಿಎಲ್‌ 2020ಯಿಂದ ಔಟ್

0

ಕೋಲ್ಕತ್ತಾ ನೈಟ್ ರೈಡರ್ಸ್‌ನ ವೇಗಿ ಅಲಿ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ 2020ರಿಂದ ಹೊರ ಬಿದ್ದಿದ್ದಾರೆ. ಗಾಯಕ್ಕೀಡಾಗಿರುವ ಅಲಿ ಖಾನ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅಮೆರಿಕಾದ ಕ್ರಿಕೆಟರ್ ಐಪಿಎಲ್‌ನಿಂದ ಹೊರ ಬಿದ್ದಿರುವುದು ಸದ್ಯ ಹಿನ್ನಡೆಯಲ್ಲಿರುವ ಐಪಿಎಲ್‌ಗೆ ಮತ್ತೊಂದು ಆಘಾತ ನೀಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದ ಇಂಗ್ಲೆಂಡ್ ಕ್ರಿಕೆಟರ್ ಹ್ಯಾರಿ ಗರ್ನಿ ಅವರು ಗಾಯಕ್ಕೀಡಾಗಿದ್ದರಿಂದ ಅಲಿ ಖಾನ್ ಅವರನ್ನು ತಂಡಕ್ಕೆ ಕರೆತರಲಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹ ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಖಾನ್ ಅವರನ್ನು ಕೆಕೆಆರ್‌ ತಂಡದಲ್ಲಿ ಹೆಸರಿಸಿತ್ತು.

ಅಕ್ಟೋಬರ್ 7ರ ಬುಧವಾರ ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೂ ಮುನ್ನವೇ ಅಲಿ ಖಾನ್ ಟೂರ್ನಿಯಿಂದ ಹೊರ ಬಿದ್ದಿರುವ ವಿಚಾರ ಕೇಳಿ ಬಂದಿದೆ.

ಮೂಲತಃ ಪಾಕಿಸ್ತಾನದವರಾದ ಅಲಿ ಖಾನ್ ಹುಟ್ಟಿದ್ದು ಆಗ ಪಾಕಿಸ್ಥಾನದ ಭಾಗವಾಗಿದ್ದ ಪಂಜಾಬ್‌ನಲ್ಲಿ. ಆ ಬಳಿಕ ಅಮೇರಿಕಾಕ್ಕೆ ಹೋಗಿ ನೆಲೆಸಿದ್ದ ಖಾನ್ ಕ್ರಿಕೆಟ್ ಕ್ರೇತ್ರದಲ್ಲಿ ಬೆಳೆಯಲಾರಂಭಿಸಿದ್ದರು. ಅಲಿ ಖಾನ್‌ಗೆ ಬದಲಿ ಆಟಗಾರರನ್ನು ಕೆಕೆಆರ್ ಇನ್ನಷ್ಟೇ ಹೆಸರಿಸಬೇಕಿದೆ. ಕೋಲ್ಕತ್ತಾ vs ಚೆನ್ನೈ ಪಂದ್ಯ ರಾತ್ರಿ 7.30 pmಗೆ ಆರಂಭವಾಗಲಿದೆ.

LEAVE A REPLY

Please enter your comment!
Please enter your name here