ಕೋವಿಡ್​ ಟೆಸ್ಟ್​ಗೆ ಒಳಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು

0

13ನೇ ಆವೃತ್ತಿಯ ಕಲರ್​ಫುಲ್ ಟೂರ್ನಿಗಾಗಿ ಬಹುತೇಕ ಎಲ್ಲಾ ತಂಡಗಳು ಈಗಾಗಲೇ ದುಬೈನಲ್ಲಿ ತಲುಪಿವೆ. ಇನ್ನುಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ, ಯುಎಇಗೆ ಹೊರಡುವ ಮುನ್ನ ಕೋವಿಡ್​​-19 ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ. ಇದರ ಭಾಗವಾಗಿ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರರು, ಕೋವಿಡ್​​-19 ಪರೀಕ್ಷೆಗೆ ಒಳಪಟ್ಟಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್​ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕೋವಿಡ್​ ಟೆಸ್ಟ್​ ಮುಗಿದಿದೆ. ಸುರಕ್ಷತಾ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ಸರಿಯಾಗಿದ್ದು ಯುಎಇಗೆ ತೆರಳಲು ರೆಡಿಯಾಗಿದ್ದೇವೆಂದು ಟ್ವೀಟ್​ ಮಾಡಿದೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಯುಎಇನಲ್ಲಿ ಆಟಗಾರರಿಗೆ 7 ದಿನಗಳ ಕ್ವಾರಂಟೀನ್ ವಿಧಿಸಲಾಗುತ್ತೆ. ಈಗಾಗಲೇ ಬಿಸಿಸಿಐ ಕೂಡ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಸೋಪು ವಿತರಿಸಿದೆ. ಇನ್ನು 1, 3 ಹಾಗೂ 6ನೇ ದಿನ ಐಪಿಎಲ್​​​ ಆಟಗಾರರಿಗೆ RT-PCR ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಇದಲ್ಲದೇ ಎಲ್ಲಾ ಆಟಗಾರರಿಗೂ 5 ದಿನಗಳಿಗೊಮ್ಮೆ ಕೊವಿಡ್-19 ಟೆಸ್ಟ್ ನಡೆಸಲಾಗುವುದು.

LEAVE A REPLY

Please enter your comment!
Please enter your name here