ಕೋವಿಡ್ ಕಳವಳ- ಸೆ.06: 9319 ಹೊಸ ಪ್ರಕರಣ; 9575 ಡಿಸ್ಚಾರ್ಜ್; 95 ಸಾವು

0

ಶನಿವಾರ ಸಾಯಂಕಾಲದಿಂದ ಭಾನುವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 9319 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.

ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 9575 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 95 ಸೋಂಕಿತರು ಮೃತಪಟ್ಟಿದ್ದಾರೆ.

ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ ಸಮೀಪಿಸಿದೆ.. ನಮ್ಮಲ್ಲಿ ಸದ್ಯಕ್ಕೆ ಒಟ್ಟು 3,98,551ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ 2.9 ಲಕ್ಷದ ಗಡಿಯನ್ನು ದಾಟಿರುವುದು ಆಶಾದಾಯಕ ವಿಷಯವಾಗಿದೆ. ರಾಜ್ಯದಲ್ಲಿ ಇದೀಗ ಒಟ್ಟು 2,92,873 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ನಮ್ಮಲ್ಲಿ ಇದೀಗ ಒಟ್ಟು 99,266 ಸಕ್ರಿಯ ಸೋಂಕು ಪ್ರಕರಣಗಳಿವೆ.

ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ ಒಟ್ಟು 6393 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 19 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 775 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2824 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಇನ್ನುಳಿದಂತೆ, ಮೈಸೂರು (686), ಬಳ್ಳಾರಿ (396), ದಾವಣಗೆರೆ (221), ಹಾಸನ (324), ಶಿವಮೊಗ್ಗ (329), ಬೆಳಗಾವಿ (427), ದಕ್ಷಿಣ ಕನ್ನಡ (326 ), ರಾಯಚೂರು (187), ಧಾರವಾಡ (311), ಕಲಬುರಗಿ (165), ಚಿಕ್ಕಮಗಳೂರು (239), ಉಡುಪಿ (217), ಮಂಡ್ಯ (230), ಚಿತ್ರದುರ್ಗ (261), ಉತ್ತರ ಕನ್ನಡ (247), ಕೊಪ್ಪಳ (198), ತುಮಕೂರು (304), ವಿಜಯಪುರ (96), ಬಾಗಲಕೋಟೆ (180), ಹಾವೇರಿ (295), ಗದಗ (194), ಬೆಂಗಳೂರು ಗ್ರಾಮಾಂತರ (93), ಚಿಕ್ಕಬಳ್ಳಾಪುರ (81), ಕೋಲಾರ (119), ರಾಮನಗರ (68), ಯಾದಗಿರಿ (139), ಬೀದರ್ (83), ಚಾಮರಾಜನಗರ (41) ಮತ್ತು ಕೊಡಗು (38) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ 9319 ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here