ಕೋವಿಡ್ ಕಾರಣದಿಂದ ಭಾರತಕ್ಕೆ ಹಿಂದಿರುಗಿದೆ, ಪರಿಸ್ಥಿತಿ ಸುಧಾರಿಸಿದ್ರೆ ಮತ್ತೆ ತಂಡ ಸೇರುವೆ: ಮೌನ ಮುರಿದ ಸುರೇಶ್‌ ರೈನಾ..!

0

ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಅವೃತ್ತಿ ಶುರುವಾಗುವ ಮುಂಚಿಯೇ ಯುಎಇಯಿಂದ ಭಾರತಕ್ಕೆ ಹಿಂದಿರುಗಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೊನೆಗೂ ಮೌನ ಮುರಿದ್ದಾರೆ. ತಾವು ಕೊವಿಡ್‌ ಕಾರಣದಿಂದ ದೇಶಕ್ಕೆ ಹಿಂದಿರಬೇಕಾಯ್ತು. ಪರಿಸ್ಥಿತಿ ಸುಧಾರಿದ್ರೆ, ಮತ್ತೆ ತಂಡಕ್ಕೆ ಹಿಂದಿರುಗುವೆ ಎಂದಿದ್ದಾರೆ.

ಸಿಎಸ್‌ಕೆ ನಾಯಕ ಎಂ.ಎಸ್. ಧೋನಿ ಮತ್ತು ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರೊಂದಿಗೆ ರೈನಾ ಜಗಳ ಮಾಡಿದ್ದಾರೆ. ಹಾಗಾಗಿ ತಂಡದಿಂದ ಹೊರ ಬಂದಿದ್ದಾರೆ ಎನ್ನುವ ಗಾಳಿ ಸುದ್ದಿಗಳ ಬೆನ್ನಲ್ಲೇ ಸುರೇಶ್‌ ರೈನಾ ಸ್ಪಷ್ಟನೆ ನೀಡಿದ್ದಾರೆ. “ಕೋವಿಡ್ -19 ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯಿಂದ ನಾನು ಭಾರತಕ್ಕೆ ಮರಳಿ ಕುಟುಂಬದೊಂದಿಗೆ ಇರಬೇಕಾಯ್ತು” ಎಂದಿದ್ದಾರೆ.

ದುಬೈನಲ್ಲಿ ಕೋವಿಡ್ -19 ಸೋಂಕಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಉತ್ತಮಗೊಂಡರೆ ಸಿಎಸ್‌ಕೆ ತಂಡಕ್ಕೆ ಮತ್ತೆ ಸೇರುವ ಸಾಧ್ಯತೆಯ ಬಗ್ಗೆ ರೈನಾ ಸುಳಿವು ನೀಡಿದ್ದಾರೆ. “ನಾನು ಶಾಶ್ವತವಾಗಿ ಸಿಎಸ್‌ಕೆ ಆಟಗಾರ. ದುಬೈನಲ್ಲಿ ಪರಿಸ್ಥಿತಿ ಉತ್ತಮಗೊಂಡರೆ, ನಾನು ಸಹ ಹಿಂತಿರುಗಬಹುದು. ತಂಡದ ಬಾಗಿಲು ಮುಚ್ಚಿಲ್ಲ” ಎಂದು ಸುರೇಶ್‌ ರೈನಾ ಹೇಳಿದ್ದಾರೆ.

“ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ನಿವೃತ್ತಿ ಹೊಂದಿರಬಹುದು. ಆದರೆ ನಾನು ಇನ್ನೂ ಚಿಕ್ಕವನಿದ್ದೇನೆ. ಇನ್ನು 4-5 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಲು ಬಯಸುತ್ತೇನೆ” ಎಂದಿದ್ದಾರೆ.

LEAVE A REPLY

Please enter your comment!
Please enter your name here