ಮಾಜಿ ಶಾಸಕ ಅಪ್ಪಾಜಿ ಗೌಡರ ಅಕಾಲಿಕ ಮರಣ ಸಾಕಷ್ಟು ನೋವು ತಂದಿದೆ. ಅಪ್ಪಾಜಿ ಗೌಡರ ನಿಧನರಾದ ರೀತಿ ನೋಡಿದರೆ ಕೋವಿಡ್-19 ನಿಯಂತ್ರಿಸಲು ಸರ್ಕಾರ, ಜಿಲ್ಲಾಡಳಿತ ವಿಫಲವಾದ ಬಗ್ಗೆ ತಿಳಿಯುತ್ತದೆ ಎಂದು ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮಗೆಲ್ಲರಿಗೂ ಪ್ರತಿನಿತ್ಯ ಕೋವಿಡ್-19 ಪಾಸಿಟಿವ್ ವ್ಯಕ್ತಿಗಳು ನಮಗೆ ಬೆಡ್ ಕೂಡಿಸಿ ಎಂದು ಕರೆಗಳೂ ಬರುತ್ತಿವೆ. ಒಬ್ಬ ಮಾಜಿ ಶಾಸಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ದೊರೆತಿಲ್ಲ. ಕೋವಿಡ್-19 ಸೋಂಕು ನಿಯಂತ್ರಿಸುವಲ್ಲಿ ಸರ್ಕಾರಿ ವ್ಯವಸ್ಥೆ ನಗೆಪಾಟಲಿಗೆ ಈಡಾಗಿದೆ ಎಂದು ಆರೋಪಿಸಿದರು.
ಆಸ್ಪತ್ರೆ ಹಾಗೂ ಕೇರ್ ಸೆಂಟರ್ ಗಳಲ್ಲಿ ಕೋವಿಡ್ ಸೋಂಕಿತರಿಗೆ ಮೂಲಭೂತ ಚಿಕಿತ್ಸೆ ಕೂಡಲು ವಿಫಲವಾಗಿದೆ. ಅಪ್ಪಾಜಿ ಗೌಡರಿಗೆ ವೆಂಟಿಲೇಟರ್ ನೀಡದೆ ಇರುವ ಕಾರಣ ಸಾವನ್ನಪ್ಪಿದ್ದಾರೆ. ಮಾಜಿ ಶಾಸಕ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿರುವುದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಮಾಜಿ ಶಾಸಕರ ಸ್ಥಿತಿ ನೋಡಿ ಜನಸಾಮಾನ್ಯರು ನಮ್ಮಗತಿ ಏನಪ್ಪ ಅಂತ ಹೇಳುತ್ತಿದ್ದಾರೆ. ಅಪ್ಪಾಜಿ ಗೌಡರ ಸಾವಿನ ಹೊಣೆಯನ್ನ ಸರ್ಕಾರ, ಜಿಲ್ಲಾಡಳಿತ ಹೊರಬೇಕಿದೆ ಎಂದರು.