ಕೋವಿಡ್ -19 ಎಫೆಕ್ಟ್: ಬಿಸಿಸಿಐ ಸಭೆ ಮುಂದೂಡಿಕೆ

0

ಹೊಸದಿಲ್ಲಿ: ಈ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ ಬಿಸಿಸಿಐ ವಾರ್ಷಿಕ ಮಹಾಸಭೆಯನ್ನು ಕೋವಿಡ್‌-19 ಕಾರಣದಿಂದ ಮುಂದೂಡಲಾಗಿದೆ. ಆದರೆ ಇದು ಯಾವುದೇ ಕಾರಣಕ್ಕೂ ಆನ್‌ಲೈನ್‌ನಲ್ಲಿ ನಡೆಯುವುದಿಲ್ಲ ಎಂದೂ ಬಿಸಿಸಿಐ ಸ್ಪಷ್ಟಪಡಿಸಿದೆ.

ತಮಿಳುನಾಡು ಸೊಸೈಟೀಸ್‌ ರಿಜಿಸ್ಟ್ರೇಶನ್‌ ಆಯಕ್ಟ್ 1975ರ ಪ್ರಕಾರ ಕ್ರಿಕೆಟ್‌ ಮಂಡಳಿಯ ವಾರ್ಷಿಕ ಮಹಾಸಭೆ ಪ್ರತೀ ವರ್ಷ ಸೆ. 30ರ ಒಳಗೆ ನಡೆಯಬೇಕಿದೆ. ಆದರೆ ಈ ವರ್ಷ ಕೊರೊನಾದಿಂದಾಗಿ ಇದನ್ನು ಕನಿಷ್ಠ 3 ತಿಂಗಳು ಮುಂದೂಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಈ ಸಭೆ ಅಕ್ಟೋಬರ್‌ನಲ್ಲಿ ನಡೆದಿತ್ತು. ಆಗ ಸುಪ್ರೀಂ ಕೋರ್ಟ್‌ ನಿಯೋಜಿತ ಆಡಳಿತ ಸಮಿತಿ ಅಧಿಕಾರದಲ್ಲಿದ್ದುದೇ ಈ ವಿಳಂಬಕ್ಕೆ ಕಾರಣ. ಇದು ಮುಗಿದೊಡನೆಯೇ ಸೌರವ್‌ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

LEAVE A REPLY

Please enter your comment!
Please enter your name here