ಕೋವಿಡ್-19 ಕರ್ತವ್ಯದಲ್ಲಿ ನಿರ್ಲಕ್ಷತೆಯನ್ನು ಸಹಿಸುವುದಿಲ್ಲ ಎಚ್ಚರಿಕೆ

0

ಕೋವಿಡ್-19 ಕರ್ತವ್ಯದಲ್ಲಿ ನಿರ್ಲಕ್ಷತೆಯನ್ನು ಸಹಿಸುವುದಿಲ್ಲ ; ಮಹಾಂತೇಶ್ ಬೀಳಗಿ ಎಚ್ಚರಿಕೆ
ಹರಿಹರ : ಕೋವಿಡ್-19 ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೆ ತೋರುವ ಅಧಿಕಾರಿ,ಸಿಬ್ಬಂದಿಗಳನ್ನು ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದ ಅವರು ಹರಿಹರ ನಗರ ತಾಲ್ಲೂಕು ಕೇಂದ್ರವು ಅಧಿಕಾರಿಗಳ ನಿರ್ಲಕ್ಷದಿಂದ ಹಾಟ್ – ಸ್ಪಾಟ್ ಆಗುವ ಹಂತ ತಲುಪಿದೆ ಎಂದು ಅವರು, ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ಗಳಿ ರಲಿ ಕೆಲಸದಲ್ಲಿ ಉದಾಸೀನ ತೋರಿದಲ್ಲಿ ತಕ್ಷಣ ವರದಿಯನ್ನು ಪಡೆದು ಅಂಥವರ ವಿರುದ್ಧ ನಿರ್ದಾ ಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ಕಾಗಿ ಹೇಳಿದರು.
ತಾಲೂಕಿನಾದ್ಯಂತ ಇರುವ ಮೊಹರು ಮಾಡಿದ ಪ್ರದೇಶ( ಸೀಲ್ ಡೌನ್) ಹಾಗೂ ನಿರ್ಬಂಧಿತ ವಲಯ( ಕಂಟೋನ್ಮೆಂಟ್ ಜೋನ್) ಗಳ ಮಾಹಿತಿ ಪಡೆದ ಅವರು, ಅಲ್ಲಿನ ದಿನನಿತ್ಯದ ಸೌಲಭ್ಯಗಳ ಬಗ್ಗೆ ವಿವರಣೆ ಪಡೆದರು.ಈಗ 65 ಪ್ರಕರಣಗಳಲ್ಲಿ 45 ಪ್ರಕರಣಗಳು ನೆಗೆಟಿವ್ ಆಗಿ ಹೊರಬಂದಿದ್ದು 23 ಪ್ರಕರಣಗಳು ಜೀವಂತವಾಗಿದ್ದು ಎಲ್ಲರೂ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಹಿತಿ ಪಡೆದರು.
ಇಂದಿನಿಂದ ನಗರದ ಹೊರವಲಯದ ಗುತ್ತೂರು ಬಳಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ 40 ಹಾಸಿಗೆಗಳ ಕೋವಿಡ್ ಕೇಂದ್ರವನ್ನು ತೆರೆಯುತ್ತಿ ರುವುದಾಗಿ ತಿಳಿಸಿದ ಅವರು ಇನ್ನುಮುಂದೆ ಪಾಸಿಟಿ ವ್ ಪ್ರಕರಣಗಳನ್ನು ದಾವಣಗೆರೆಗೆ ಕಳುಹಿಸದೆ ಹರಿ ಹರದಲ್ಲಿ ಚಿಕಿತ್ಸೆ ಕೊಡಲು ತಾಲೂಕ ಆರೋಗ್ಯ ಅಧಿಕಾರಿಗೆ ಸೂಚನೆ ನೀಡಿದರು.
ಹೊಸದಾಗಿ ಪ್ರಾರಂಭ ಮಾಡುತ್ತಿರುವ ಕೋವಿಡ್ ಕೇಂದ್ರಕ್ಕೆ ಬೇಕಾದ ಔಷಧಿ,ಚುಚ್ಚುಮದ್ದು ಮತ್ತು ಇತರೆ ದಾಸ್ತಾನುಗಳು ಇರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕ್ವಾರಂಟೈನ್ ನಲ್ಲಿರುವವರ ಬಗ್ಗೆ ಯೂ ಹೆಚ್ಚಿನ ನಿಗಾ ವಹಿಸಬೇಕು ಅಲ್ಲದೇ ಅವರಿಗೆ ಬೇಕಾದ ಉಪಹಾರ ಮತ್ತು ಊಟವನ್ನು ನಗರಸಭೆ ಯಿಂದ ವಿತರಿಸುವಂತೆ ಪೌರಾಯುಕ್ತರಿಗೆ ತಿಳಿಸಿದರು.
ಸಭೆಯಲ್ಲಿ ತಾ.ಪಂ.ವಿಸ್ತರಣಾಧಿಕಾರಿ ಬಿ.ಲಕ್ಷ್ಮೀ ಪತಿ ಮಾಹಿತಿ ನೀಡಿ ಗ್ರಾಮಾಂತರ ಪ್ರದೇಶದಲ್ಲಿ 6 ಗ್ರಾಮಗಳಲ್ಲಿ ಕೆಲ ಪ್ರದೇಶಗಳನ್ನು ಮೋಹರು ಮಾಡಲಾಗಿದೆ. ಮೋಹರ್ ಮಾಡಿದ ಮತ್ತು ನಿರ್ಬಂಧಿತ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಾಲು, ನೀರು, ಪಡಿತರ, ತರಕಾರಿ, ಔಷಧಿ ಮುಂತಾದ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ ಬೇರೆ ಊರು ಗಳಿಂದ ಬಂದವರ ಮಾಹಿತಿ ಪಡೆದು ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಇತ್ತೀಚೆಗೆ ಬೆಂಗಳೂರಿನಿಂದ ಬಂದ 350 ಜನರನ್ನು ತಪಾಸಣೆ ಮಾಡಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿರು ವುದಾಗಿ ತಿಳಿಸಿದ ಅವರು ಕಾಲಕಾಲಕ್ಕೆ ಟಾಸ್ಕ್ ಫೋರ್ಸ್ ವಾರ್ಡ್ ಮತ್ತು ಬೂತ್ ಮಟ್ಟದ ಸಭೆ ಗಳನ್ನು ನಡೆಸಿ ಸದಸ್ಯರಿಗೆ ಸೂಚನೆ ನೀಡಲಾಗುತ್ತಿ ರುವುದಾಗಿ ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯವರಿಗೆ ಮೋಹರ್ ಮಾಡಿ ದ ಪ್ರದೇಶದಿಂದ ಯಾರೊಬ್ಬರನ್ನೂ ಹೊರಗಡೆ ಬಿಡುವುದಾಗಲಿ, ಒಳಗಡೆ ಕಳುಹಿಸುವುದಾಗಲಿ ಮಾಡಬಾರದು. ಅದು ನಿಯಮಕ್ಕೆ ವಿರುದ್ಧ ವಾಗಿ ರುತ್ತದೆ ಇಲಾಖೆಯ ಕೆಲವು ಅಧಿಕಾರಿಗಳು ಕರ್ತವ್ಯ ದಲ್ಲಿ ನಿರ್ಲಕ್ಷ್ಯ ವಹಿಸಿರುವ ಮಾಹಿತಿಯಿದ್ದು ಅಂಥ ವರ ವರದಿ ಕಳಿಸಲು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.
ನಂತರ ಜಿಲ್ಲಾಧಿಕಾರಿಗಳು ನಗರದ ಮೋಹರ್ ಮಾಡಿದ ಪ್ರದೇಶಗಳಾದ ಗಾಂಧಿನಗರ ಮತ್ತು ಭಾರತ್ ಆಯಿಲ್ ಮಿಲ್ ಕಂಪೌಂಡ್ ಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳನ್ನು ಖುದ್ದಾಗಿ ವಿಚಾರಿಸಿ ಮಾಹಿತಿ ಪಡೆದರಲ್ಲದೆ ಅವರೆಲ್ಲರೂ ಮನೆಯಲ್ಲಿ ಇದ್ದು ಮಾಸ್ಕ್ ಧರಿಸಿ ಹೊರಗಡೆ ಬರದೆ ಇರುವಂತೆ ಕೆಲವು ಸೂಚನೆಗಳನ್ನು ನೀಡಿದರು.
ಈ ಸಮಯದಲ್ಲಿ ತಹಸಿಲ್ದಾರ್ ಕೆ.ಬಿ.ರಾಮ ಚಂದ್ರಪ್ಪ, ತಾ.ಪಂ.ವಿಸ್ತರಣಾಧಿಕಾರಿ ಬಿ ಲಕ್ಷ್ಮೀಪತಿ, ಪೌರಾಯುಕ್ತೆ ಎಸ್.ಲಕ್ಷ್ಮೀ, ತಾಲೂಕು ಆರೋಗ್ಯಾ ಧಿಕಾರಿ ಡಾ.ಚಂದ್ರಮೋಹನ್, ನಗರಸಭೆ ಸದಸ್ಯ ಪಿ.ಎನ್.ವಿರೂಪಾಕ್ಷ, ಗ್ರಾಮಾಂತರ ಪಿ ಎಸ್ ಐ ರವಿಕುಮಾರ್, ನಗರಸಭೆ ಎಇಇ ಬಿರಾದಾರ್, ಪರಿಸರ ಅಭಿಯಂತ ಮಹೇಶ್ ಕೋಡಬಾಳ, ಎ ಎಸ್ ಸುಶೀಲಾ, ಹಿರಿಯ ಆರೋಗ್ಯ ಸಹಾಯಕ ಎಂ.ವಿ.ಹೊರಕೇರಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಿಗ ಹೇಮಂತ್ ಎಚ್.ಜಿ, ಆರೋಗ್ಯ ನಿರೀಕ್ಷಕ ರವಿಪ್ರಕಾಶ್ ಅಲ್ಲದೆ ನಗರಸಭೆ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here