ಜಮಖಂಡಿ ತಾಲೂಕ ವರದಿ
ಸ್ಲಗ್: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ
ಕೋವಿಡ್-19 ಹೆಸರಿನಲ್ಲಿ ಹಣ ವಸೂಲಿ.
ಅ್ಯಂಕರ್:
ಜಮಖಂಡಿ: ನಗರದಲ್ಲಿ ಕೋವಿಡ್-19 ಹೆಸರಿನಲ್ಲಿ ನಗರದ ಬ್ಯಾಂಕ, ಹೋಟೆಲ್, ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸೆನಿಟೈಜರ್ ಪ್ರತಿ ದಿನ ಹಿಡಿಸಲು 250 ರೂ.ಗಳನ್ನು ಒತ್ತಾಯ ಪೂರಕವಾಗಿ ಈ ವಸೂಲಿ ದಂದಗೆ ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೋಳ್ಳ ಕೈ ಜೋಡಿಸಿ ವಸೂಲಿ ದಂದೆಯಲ್ಲಿ ಶಾಮೀಲಾಗಿದ್ದು ಪೌರಾಯುಕ್ತ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಿ ವಸೂಲಿ ದಂದಗೆ ಕಡಿವಾಣ ಹಾಕಬೇಕು ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೋರೋನಾ ಮಹಾಮಾರಿಯನ್ನು ಮುಕ್ತಗೋಳಿಸಲು ಜನರ ಜನರ ಮಧ್ಯೆ ಅಂತರ ಕಾಯ್ದುಕೊಂಡು ನಾಲ್ಕನೇ ಹಂತ ಲಾಕ್ಡೌನ್ ದಂತ ಅನೇಕ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು ಕೊಟ್ಯಾಂತರ ರೂಪಾಯಿಗಳು ಸರ್ಕಾರವೇ ಖರ್ಚು ಮಾಡುತ್ತಿರುವ ಸಂದರ್ಭ ದಲ್ಲಿ ನಗರದ ಖಾಸಗಿ ಸೆನಿಟೈಜರ್ ಸರ್ವಿಸ್ ಸೆಂಟರ್ ಒಂದು ಬಳಿಸಿಕೊಂಡು ನಗರಸಭೆ ಪೌರಾಯುಕ್ತ ಲಕ್ಷಾಂತರ ರೂಪಾಯಿ ಜನರಿಂದ ಲೂಟಿ ಮಾಡುತ್ತಿರುವ ಕಳ್ಳದಂದೆಯಲ್ಲಿ
ಶಾಮೀಲಾಗಿದ್ದು ಈ ದಂದೆಯಲ್ಲಿ ನಿಲ್ಲಬೇಕಾಗಿದೆ.
ಜುಲೈ 17 ರಂದು ಖಾಸಗಿ ಸೆನಿಟೈಜರ್ ಸೆಂಟರ್ ಅನುಮತಿ ನೀಡುವ ಮೂಲಕ ಇಂತಹದೊಂದು ಹೊಸ ದಂದೆ ಪ್ರಾರಂಭಿಸಿದ್ದಾರೆ ಸರ್ಕಾರ ಕೋಟ್ಯಂತರ ರೂಪಾಯಿ ಕೋರೋನಾ ಮುಕ್ತಗೋಳಿಸಲು ಖರ್ಚು ಮಾಡುವಾಗ ಆದರೆ ಖಾಸಗಿ ಸೆಂಟರ್ ಒಂದು ಹೋಟೆಲ್, ಬಾರ್, ಬ್ಯಾಂಕ್, ಶಾಲೆ ಕಾಲೇಜುಗಳ ಮುಖ್ಯಸ್ಥರಿಗೆ ಕಡ್ಡಾಯವಾಗಿ ಸೆನಿಟೈಜರ್ ಪ್ರತಿ ದಿನ 250. ರೂಪಾಯಿಗಳನ್ನು ಕೊಟ್ಟು ಮಾಡಿಸಬೇಕು ಇಲ್ಲವಾದರೆ ನಗರಸಭೆಯ ಆರೋಗ್ಯ ಅಧಿಕಾರಿಯನ್ನು ಕರೆದು ಕ್ರಮ ಜರುಗಿಸುತ್ತೆವೆ ಎಂದು ಬೆದರಿಕೆ ಒಡ್ಡುತ್ತಿರುವ ಕ್ರಮ ಸರಿಯಾದಲ್ಲ ಮಾನ್ಯ ಜಿಲ್ಲಾಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ದಲಿತ ಧುರೀಣ ರವಿ ಬಬಲೇಶ್ವರ, ತಾಲ್ಲೂಕು ಸಂಚಾಲಕ ವಕೀಲ ದೊಡಮನಿ, ಪುಂಡಲಿಕ ಕಾಂಬಳೆ, ಶಶಿಕ ದೊಡಮನಿ, ಅಡಿವೆಪ್ಪ ಮಾದರ ಇತರರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ವರದಿಗಾರರು: ಪರಶುರಾಮ ಕಾಂಬಳೆ ಸತೀಶ್ ಧೂಪ