ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕರೆ

0

ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕರೆ

•ಮಹದೇವಪುರ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ – ನೂರು ಮೀಟರ್‌ ಹೂವಿನ ದಾರಿ ನಿರ್ಮಿಸಿ ಅದ್ದೂರಿ ಸ್ವಾಗತ
•ಧರ್ಮರಾಯಸ್ವಾಮಿ ದೇವಸ್ಥಾನದ ಒತ್ತುವರಿ ಜಾಗವನ್ನು ತೆರುವುಗೊಳಿಸಲು ಮನವಿ

ಬೆಂಗಳೂರು ಸೆಪ್ಟೆಂಬರ್‌ 23: ಯುವಕರು ಹೆಚ್ಚಿನ ರೀತಿಯಲ್ಲಿ ಪಕ್ಷದ ಬಗ್ಗೆ ಒಲವು ತೋರಿಸುವಂತೆ ಪಕ್ಷದ ಸಂಘಟನೆಗೆ ಒತ್ತು ನೀಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಅವರು ಕರೆ ನೀಡಿದರು.

ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಮಹದೇವಪುರ ಕ್ಷೇತ್ರಕ್ಕೆ ಆಗಮಿಸಿದ್ದ ಅವರು ಮಾಜಿ ಪಾಲಿಕೆ ಸದಸ್ಯರಾದ ಶ್ವೇತಾ ಹೂಡಿ ವಿಜಯಕುಮಾರ್‌ ಅವರ ಎಐಸಿಎಸ್‌ ಲೇಔಟ್‌ ನ ಮನೆಗೆ ಭೇಟಿ ನೀಡಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು. ಮಹದೇವಪುರ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಹಾಗೂ ರಾಜ್ಯದಲ್ಲಿರುವ ಬಿ ಎಸ್‌ ಯಡಿಯೂರಪ್ಪ ನವರ ನೇತೃತ್ವದ ಸರಕಾರ ಜನಪರ ಆಡಳಿತವನ್ನು ನೀಡುತ್ತಿದೆ. ಇದರ ಪರಿಣಾಮ ಪಕ್ಷದತ್ತ ಜನರು ಒಲವು ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರು ಪಕ್ಷದತ್ತ ಒಲವು ತೋರಿಸುವಂತೆ ಪಕ್ಷವನ್ನು ಸಂಘಟಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಬೆಂಗಳೂರು ನಗರ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೇ ನಂ 79 ರ 15 ಏಕರೆ 12 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ದೇವಾಲಯದ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘ ಖಜಾಂಚಿ ಹೂಡಿ ವಿಜಯ ಕುಮಾರ್ ತಿಳಿಸಿದರು.

ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸಿದ್ದ ಬಿ ವೈ ವಿಜಯೇಂದ್ರ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ನೂರು ಮೀಟರ್‌ ಗೂ ಹೆಚ್ಚು ರಸ್ತೆಯನ್ನು ಹೂವನ್ನು ಹಾಸಲಾಗಿತ್ತು. ಖಡ್ಗವನ್ನು ನೀಡಿ ವಿಶೇಷವಾಗಿ ಸ್ವಾಗತಿಸಲಾಯಿತು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ತಿಗಳ (ವಹ್ನಿಕುಲ ಕ್ಷತ್ರೀಯರ) ಸಂಘ ಅಧ್ಯಕ್ಷರಾದ ಜಯರಾಜ್‌, ಬಿಎಂಟಿಸಿ ಅಧ್ಯಕ್ಷರಾದ ನಂದೀಶ್‌ ರೆಡ್ಡಿ, ತಮೇಶ್‌ ಗೌಡ, ಮಾಜಿ ಬಿಬಿಎಂಪಿ ಸದಸ್ಯರಾದ ರಮೇಶ್‌, ಮಾರ್ಕೇಟ್‌ ರಮೇಶ್‌ ರಾಜಶೇಖರ ರೆಡ್ಡಿ, ಬಿಜೆಪಿ ಮುಖಂಡ ಕೈಕೊಂಡ್ರಹಳ್ಳಿ ಶೇಖರ್‌ ರೆಡ್ಡಿ, ಕುಂದೇನಹಳ್ಳೀ ರಮೇಶ್‌ ರೆಡ್ಡಿ, ಮಿಥುನ್‌ ರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here