ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಧನ ಸಹಾಯ ಮಾಡುವಂತೆ ಆಗ್ರಹ

0

ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಧನ ಸಹಾಯ ಮಾಡುವಂತೆ ಆಗ್ರಹ: ಧನರಾಜ್ ರಾಠೋಡ್.

ಜೇವರ್ಗಿ: ತಾಲೂಕಿನ ಖಾಸಗಿ ಶಾಲೆ ಶಿಕ್ಷಕರು ಹಾಗೂ ಪಿಯುಸಿ ಕಾಲೇಜಿನ ಉಪನ್ಯಾಸಕರಿಗೆ ಧನ ಸಹಾಯ ಮಾಡುವಂತೆ ಒತ್ತಾಯಿಸಿ ಮಾನ್ಯ ಜಿಲ್ಲಾಧಿಕಾರಿಗಳಗೆ ದಂಡ ಅಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.

ಕೊರನಾ ವೈರಸ್ ಮಾಹಾಮರಿ ತೀವ್ರವಾಗಿ ಹರಡಿದ ಹಿನ್ನೆಲೆ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಜೀವನ ನಡೆಸುವುದು ಕಷ್ಟವಾಗಿದೆ.

ಆದಕಾರಣ ಆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಅವರ ಮನೆ ಬಾಡಿಗೆ ಕಟ್ಟುವುದಕ್ಕೆ ಆಗುತ್ತಿಲ್ಲ.
ಆದಕಾರಣ ತಮ್ಮ ಶಿಕ್ಷಕರು ಬಿಟ್ಟು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಕೆಲವರು ಗೌಂಡಿ ಕೆಲಸ ಮಾಡುತ್ತಿದ್ದಾರೆ ಮತ್ತು ಇನ್ನೂ ಕೆಲವರು ದಿನಗೂಲಿ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾದರೆ ಶಿಕ್ಷಕರ ಬಾಳು ಮುಂದಿನ ದಿನಗಳಲ್ಲಿ ಕಷ್ಟಕರವಾಗುತ್ತದೆ.

ಆದಕಾರಣ ಸರ್ಕಾರ ಖಾಸಗಿ ಶಾಲಾ ಕಾಲೇಜುಗಳ ಗಮನಹರಿಸ ಎಂದು ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟ ಮಾನ್ಯ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಧನರಾಜ್ ರಾಥೋಡ್ ಮಾತನಾಡಿ ಖಾಸಗಿ ಶಾಲಾ ಹಾಗೂ ಪಿಯು ಕಾಲೇಜುಗಳ ಸಿಬ್ಬಂದಿಗಳು ಬಾಳ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರಿಗೆ ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಕೊಳ್ಳಲಾಗದೆ ಬೇರೆ ಕಡೆ ಉದ್ಯೋಗ ಅರಸಿ ಹೊರಟಿದ್ದಾರೆ ಅದಕ್ಕಾಗಿ ಸರಕಾರ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ದರು. ಹೀಗೆ ಮುಂದುವರೆದರೆ ಖಾಸಗಿ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡರು ತಪ್ಪಾಗಲಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಖಾಸಗಿ ಶಾಲೆ ಒಕ್ಕೂಟದ ತಾಲೂಕ ಅಧ್ಯಕ್ಷರಾದ ಶಾಂತಯ್ಯ ಹಿರೇಮಠ್, ಹನುಮಂತರಾಯ ಬಿರಾದಾರ್, ಬಿ.ಕೆ.ನಾಯಕ್, ವೆಂಕಟರಾವ ಮುಜುಂದಾರ್, ಅಮೀನಪ್ಪ ಹೊಸಮನಿ, ಮಹಾದೇವಯ್ಯ ಹಿರೇಮಠ್, ಬಸವರಾಜ್ ಗೊಡಗೇರಿ, ಜಗದೀಶ್ ಉಕನಾಳ, ಶ್ರೀಶೈಲ್ ಕಣದಾಳ, ಹನುಮಂತ್ರಾಯ ಬೇಲೂರು, ಖಾಸಗಿ ಶಾಲೆ ಮತ್ತು ಕಾಲೇಜುಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here