ಗಂಜಿ ಕುಡಿದಾದ್ರು ಗಂಭೀರ ಕೊರೊನಾ ಗೆಲ್ಲೋಣ

0

ಸಾಚಿ ಟಿವಿ ನ್ಯೂಸ್

ಗಂಜಿ ಕುಡಿದಾದ್ರು ಗಂಭೀರ ಕೊರೊನಾ ಗೆಲ್ಲೋಣ : ಶಾಸಕ ಮಹೇಶ ಕುಮಟಳ್ಳಿ

ಅಥಣಿ : ಜಗತ್ತಿನಲ್ಲಿ, ದೇಶದಲ್ಲಿ ,ನಮ್ಮ ರಾಜ್ಯದಲ್ಲಿ ಅಥಣಿಯಲ್ಲಿ ಇಂದು ವಿಪರೀತವಾಗಿ ಕೊರೊನಾ ಹೆಚ್ಚುತ್ತಿರುವದರಿಂದ ಎಲ್ಲ ಜನರು ಮನೆಯಲ್ಲಿ ಇದ್ದು ಸಹಕರಿಸಿ ಕೊರೊನಾ ತಡೆಗಟ್ಟಲು ಎಷ್ಟೇ ಕಷ್ಟವಾದರೂ ಮೊದಲು ಜೀವ ಆಮೇಲೆ ಜೀವನ ಗಂಜಿ ಕುಡಿದಾದರೂ ಕೊರೊನಾ ಗೆಲ್ಲೊಣ ಎಂದು  ಜನತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಥಣಿ ಶಾಸಕ ಮಹೇಶ ಕುಮಠಳ್ಳಿ ವಿನಂತಿಸಿದ್ದಾರೆ.

ಅಥಣಿಯ ಪ್ರವಾಸಿಮಂದಿರದಲ್ಲಿ ಅಥಣಿ ಕಾರ್ಯ ನಿರತ ಪತ್ರಕರ್ತರ ಸಂಘದ ಜೊತೆಗೆ” ಶಾಸಕರೊಂದಿಗೆ ಸಂವಾದ”ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡುತ್ತ ಕೊರೊನಾ 2019 ರಲ್ಲಿ ಬಂದಿದ್ದರಿಂದ ಕೊವಿಡ್ 19 ಎಂದು ಹೆಸರು ಬಂದಿದೆ.ಇದು ಇತಿಹಾಸದ ಕರಾಳ ಪುಟಗಳಲ್ಲಿ ದಾಖಲಾಗಿರುವ ಸಂಗತಿ.
ಕೊವಿಡ19 ತಡೆಗಟ್ಟಲು ಎಲ್ಲರೂ ಮನೆಯಲ್ಲಿ ಇದ್ದು ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಈ ಪಿಡುಗನ್ನು ಹೊಗಲಾಡಿಸಬೇಕು.

ಯಾರೂ ಭಯಪಡದೇ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಇದರ ಜೊತೆ ಬದುಕುತ್ತ ಇದನ್ನು ಓಡಿಸಬೇಕಾಗಿದೆ.ರೋಗ ತಡೆಗೆ ಪ್ರಯತ್ನ ಮಾಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ.ಖಾಸಗಿ ಆಸ್ಪತ್ರೆಗಳನ್ನು ಆರಂಭಿಸುವುದರಿಂದ ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡಲು ಪ್ರತಿ ರೋಗಿಗೂ ಕಿಟ್ ಬದಲಾವಣೆ ಮಾಡಬೇಕು. ಹೀಗೆ ಮಾಡದಿದ್ದರೆ ಸೊಂಕು ಚಿಕಿತ್ಸೆಗೆ ಬಂದ ಎಲ್ಲಾ ಇತರ ರೋಗಿಗಳಿಗೆ ಕೊರೊನಾ ತಗಲುವ ಸಾಧ್ಯತೆಯಿದೆ.800 ರಿಂದ ಸಾವಿರ ರೂ ಬೆಲೆಯ ದುಬಾರಿ ಕಿಟ್ಗಳನ್ನು ಪ್ರತಿರೋಗಿಗೂ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಇದೊಂದು ಖಾಸಗಿ ವೈದ್ಯಕೀಯ ಕ್ಷೇತ್ರದ ಸಮಸ್ಯೆ ಆಗಿದೆ . ಖಾಸಗಿ ವೈದ್ಯರಿಗೆ ಕೂಡ ಈ ರೀತಿಯ ಸಮಸ್ಯೆಗಳಿವೆ.

ಅಲ್ಲದೆ ನಿತ್ಯ ಕೊರೊನಾ
ನಿವಾರಣೆಗಾಗಿ ಶ್ರಮಿಸುತ್ತಿರುವ ವೈದ್ಯರು, ಪೋಲಿಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಪುರಸಭೆ ಸಿಬ್ಬಂದಿ ಹೀಗೆ ಎಲ್ಲ ಕೊರೊನಾ ವಾರಿಯರ್ಸ್‌ ಗೆ ಗೌರವ ನೀಡುವ ಅಗತ್ಯವಿದೆ.

ಆದಷ್ಟು ಶೀಘ್ರ ವಾಗಿ ಶಿವಯೋಗಿ ನಾಡು ಕೊರೊನಾ ಮುಕ್ತವಾಗಲಿ ಎಂಬ ಆಶಯ ವ್ಯಕ್ತ ಮಾಡಿದರು.

ಈ ಸಂದರ್ಭದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿ ಕಾರ್ಯಗಳು
ಕ್ಷೇತ್ರದ ನೀರಾವರಿ,ಹೀಗೆ  ಹಲವಾರು ಕ್ಷೇತ್ರದ ಸಮಸ್ಯೆಪರಿಹಾರ ಕುರಿತು ವಿಚಾರ ವಿನಿಮಯ ಮಾಡಿದರು.

ಈ ವೇಳೆ ಅಥಣಿ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ,ಅಧ್ಯಕ್ಷರಾದ ದೀಪಕ ಬುರ್ಲಿ,ಉಪಾಧ್ಯಕ್ಷರಾದ ಸಂತೊಷ ಬಡಕಂಬಿ,
ಪ್ರಧಾನ ಕಾರ್ಯದರ್ಶಿ ಪರಶುರಾಮ ನಂದೇಶ್ವರ,
ಸಹ ಕಾರ್ಯದರ್ಶಿ ಅಮಿತ ಕಾಂಬಳೆ, ಖಜಾಂಚಿ ರವಿ ಕಾಂಬಳೆ,ಸದಸ್ಯರಾದ ರಾಜು ಗಾಲಿ,ಕುಮಾರ ಕೋಳಿ ಸಮಾಜ ಸೇವಕ ಚಿದಾನಂದ ಶೇಗುಣಸಿ ಉಪಸ್ಥಿತರಿದ್ದರು.

ವರದಿ:ಡಾ:ಆರ್ ಎಸ್ ದೊಡ್ಡನಿಂಗಪ್ಪಗೋಳ ಸಾಚಿ ಟಿವಿ ನ್ಯೂಸ್ ಅಥಣಿ

LEAVE A REPLY

Please enter your comment!
Please enter your name here