ಗಡಿಗ್ರಾಮದ ಗೋಳು ಕೇಳುವವರು ಯಾರು? ಸಂಕಷ್ಟದಲ್ಲಿ ಸಿಲುಕುತ್ತಲೇ ಇರುತ್ತದೆ.ಡೆಂಗ್ಯೂ,ಭಾರೀ ಮಳೆ ನಂತರ ಇದೀಗ ಕೊರೊನಾ ಸರದಿ

0

ಗಡಿಗ್ರಾಮದ ಗೋಳು ಕೇಳುವವರು ಯಾರು?

ವರದಿಃಗಿರಿಧರ್ ಕೆ ಕೆ

ಕೊಡಗು: ಇಲ್ಲಿ ಎಲ್ಲವೂ ಇದೆ,ಆದರೆ ಏನು ಇಲ್ಲ…!! ಹೌದು ಇದು ಒಂದು ರಾಜ್ಯವನ್ನು ಗಡಿಯಾಗಿ ಹೊಂದಿರುವ ಗ್ರಾಮ ಕರಿಕೆಯ ಪರಿಸ್ಥಿತಿ.ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವಿರುವ ಈ ಗ್ರಾಮ ಒಂದು ಹಂತದಲ್ಲಿ ಪ್ರತೀ ಭಾರಿ ಒಂದಲ್ಲಾ ಒಂದು ಸಂಕಷ್ಟದಲ್ಲಿ ಸಿಲುಕುತ್ತಲೇ ಇರುತ್ತದೆ.ಡೆಂಗ್ಯೂ,ಭಾರೀ ಮಳೆ ನಂತರ ಇದೀಗ ಕೊರೊನಾ ಸರದಿ.
ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದಂತೆ ಕೇರಳ ಮತ್ತು ಕರಿಕೆ ನಡುವಿನ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಲಾಯಿತು.ಇದೇ ನೋಡಿ ಇದೀಗ ಇಲ್ಲಿನವರಿಗೆ ಎದುರಾಗಿರುವ ಸಮಸ್ಯೆ.
ಪ್ರತಿಯೊಂದು ಅಗತ್ಯ ಮೂಲಭೂತ ಸೌಕರ್ಯಕ್ಕೆ ಕೇರಳದ ಪಾಣತ್ತೂರನ್ನೇ ಅವಲಂಬಿಸುತಿದ್ದರು,ಒಂದು ಸಣ್ಣ ಕಾಯಿಲೆ ಬಂದರೆ ಅಲ್ಲಿಗೇ ತೆರಳುತ್ತಿದ್ದರು.ಇದಕ್ಕೆ ಮೂಲ ಕಾರಣ ಕರಿಕೆಯಲ್ಲಿ ಆಸ್ಪತ್ರೆ ಇದ್ದರೂ,ಸೂಕ್ತ ವ್ಯವಸ್ತೆಗಳಿಲ್ಲ.ಈ ಕಾರಣಕ್ಕೆ ಕೇರಳವನ್ನು ಅವಲಂಭಿಸಬೇಕಾಗುತ್ತಿತ್ತು.ಇದೀಗ ಕೊರೊನಾ ಪರೀಕ್ಷೆ ಸಂಬಂಧ ಪರೀಕ್ಷೆ ನಡೆಸುವ ಮಾತ್ರ ಇಲ್ಲಿ ವ್ಯವಸ್ಥೆ ಮಾಡಲಾಗಿದೆ,ಒಂದೆರೆಡು ದಿನಗಳ ಹಿಂದೆ ಆಂಬುಲೆನ್ಸ್ ಬಂದಿರುವುದು ಬಿಟ್ಟರೆ ಉಳಿದ ಯಾವುದೇ ಸೌಕರ್ಯವಿಲ್ಲ.ಇನ್ನು ಕಾಸರಗೋಡಿನಲ್ಲಿ ಅತೀ ಹೆಚ್ಚು ಸೊಂಕಿತರು ಪತ್ತೆಯಾಗಿರುವ ಹಿನ್ನಲೆಯಲ್ಲಿ ಅತ್ತ ಕಡೆ ತೆರಳುವುದಕ್ಕೂ ಹೆದರುತ್ತಿದ್ದಾರೆ,ಇತ್ತೀಚೆಗೆ ಈ ವ್ಯಾಪ್ತಿಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಕೊಡ ಬಂದಿದ್ದು,ಅವರ ಟ್ರಾವಲ್ ಹಿಸ್ಟರಿಯಿಂದ ದೃಡಪಟ್ಟಿದೆ.
ಕೆಲವೊಂದು ವಯೋ ಸಹಜ ಕಾಯಿಲೆಯಿಂದ ಬಳಲುವ ವೃದ್ದರನ್ನು 30 ಕಿಲೋಮೀಟರ್ ದೂರದ ಭಾಗಮಂಡಲದ ಹದ ಗೆಟ್ಟ ರಸ್ತೆಯಲ್ಲಿ ವಾಹನದಲ್ಲಿ ಕರೆದುಕೂಂಡು ಹೋಗುವುದು ಸಾಧ್ಯವಿಲ್ಲ,ಜಿಲ್ಲಾಕೇಂದ್ರ ಮಡಿಕೇರಿಯಂತೂ ಕನಸ್ಸಿನ ಮಾತು.ಇದೇ ಕಾರಣಕ್ಕೆ ಸಣ್ಣಪುಟ್ಟ ಕಾಯಿಲೆಗಳಿಗೆ ಪಾಣತ್ತೊರನ್ನು ಅವಲಂಭಿಸುವಂತಾಗಿದೆ.ಗಡಿಯನ್ನು ಮಣ್ಣು ಹಾಕಿ ಬಂದ್ ಮಾಡಿರುವುದರಿಂದ ವಾಹನಗಳು ತೆರಳುವುದಕ್ಕೆ ಸಾಧ್ಯವಾಗದ ಕಾರಣ ಕುರ್ಚಿಯಲ್ಲೇ ರೋಗಿಯನ್ನು ಕೂರಿಸಿಕೊಂಡು ಗಡಿ ದಾಟಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇರಳದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿಿರುವುದರಿಂದ ಕಾಸರಗೋಡು,ಕಾನಂಗಾಡಿಗೆ ಸಂಪರ್ಕ ಸಾಧ್ಯವಿಲ್ಲ,ಮಂಗಳೂರಿಗೆ ತೆರಳಬೇಕಾದಲ್ಲಿ 90 ಕಿಲೋಮೀಟರ್ ಪ್ರಯಾಣ ಇದೀಗ ಸುತ್ತಿಬಳಸಿ 200 ಕಿ.ಮಿ ತೆರಳಬೇಕು.ಕರಿಕೆ ಗ್ರಾಮದಲ್ಲೇ ಹೀಗಾದರೆ,ಇದು ಗುಡ್ಡಗಾಡಿನ ಪ್ರದೇಶದ,ಕಾಲು ದಾರಿಯೇ ಇವರಿಗೆ ಆಸರೆ,ಕೂಲಿನಾಲಿ ಮಾಡಿ ಬದುಕುವ ಜನರಿಗೆ ಬಾಡಿಗೆ ವಾಹನ ಪಡೆದು ತೆರಳುವುದಕ್ಕೂ ಸಾಧ್ಯವಿಲ್ಲ ,ದಿನಕ್ಕೆ ಒಂದು ಸಾರಿಗೆ ಬಸ್ ಬಂದು ಹೋಗುತ್ತದೆ,ಅದರಲ್ಲೂ ಮಳೆ ಬಂದು ರಸ್ತೆ ಸಂಪರ್ಕ ಕಡಿತಗೊಂಡರೆ ಬಸ್ ಕೊಡ ಇಲ್ಲ,ಈ ನತದೃಷ್ಠ ಗ್ರಾಮದ ಗೋಳು ಕೇಳುವವರು ಯಾರು.

LEAVE A REPLY

Please enter your comment!
Please enter your name here