ಗಡಿಯಲ್ಲಿ ನಿರ್ಮಾಣವಾಯ್ತು 365 ದಿನಗಳಲ್ಲಿಯೂ ಸಂಚಾರ ಮಾಡಬಲ್ಲ ರಸ್ತೆ

0

ಲೇಹ್ : ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟಿನ ಮಧ್ಯೆಯೇ ಬಾರ್ಡರ್ ರೋಡ್​ ಆರ್ಗನೈಜೇಷನ್​ ನಿರ್ಮಿಸುತ್ತಿರುವ (ಬಿಆರ್​ಒ) ನಿಮ್ಮು-ಪದಮ್-ದರ್ಚ್​​ಗೆ ಸಂಪರ್ಕ ಕಲ್ಪಿಸುವ ಮೂರನೇ ರಸ್ತೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ.

ಈ ರಸ್ತೆಯು ಭಾರತೀಯ ಸೇನೆಗೆ ಗಡಿಯಲ್ಲಿ ಹದ್ದಿನ ಕಣ್ಣಿಡಲು ಸಹಾಯ ಆಗಲಿದೆ. ಶತ್ರುರಾಷ್ಟ್ರಗಳಿಗೆ ಗೊತ್ತಾಗದ ರೀತಿಯಲ್ಲಿ ಸೇನೆಗಳನ್ನ, ಸೇನಾ ಸಾಮಗ್ರಿಗಳನ್ನ ರವಾನೆ ಮಾಡಲು ಈ ರಸ್ತೆ ಸಹಾಯಕವಾಗಲಿದೆ. ಇನ್ನು ಇಲ್ಲಿರುವ ಒಂದು ರಸ್ತೆ ಶ್ರೀನಗರ-ಕಾರ್ಗಿಲ್ ಲೇಹ್ ಸಂಪರ್ಕ ಹೊಂದಿದ್ದರೆ, ಇನ್ನೊಂದು ಮನಾಲಿ-ಸರ್ಚು-ಲೇಹ್​​ಗೆ ಸಂಪರ್ಕವನ್ನ ಕಲ್ಪಿಸಲಿವೆ. ನೂತನ ರಸ್ತೆಯಿಂದಾಗಿ ಶತ್ರುಗಳ ಬಗ್ಗೆ ನಿಗಾ ಇಡಲು ಮತ್ತು ಕಾರ್ಯತಂತ್ರ ರೂಪಿಸಲು ಮತ್ತಷ್ಟು ಅನುಕೂಲವಾಗಲಿದೆ.

ಇಗಿರುವ ರಸ್ತೆ ಮೂಲಕ ಮನಾಲಿಯಿಂದ ಲೇಹ್​​ಗೆ ತಲುಪಬೇಕು ಅಂದರೆ ಸುಮಾರು 12-14 ಗಂಟೆಗಳು ಬೇಕಾಗುತ್ತದೆ. ಆದರೆ ಹೊಸ ರಸ್ತೆ ಮೂಲಕ ಸಾಗಿದರೆ ಕೇವಲ 6-7 ಗಂಟೆಯೊಳಗೆ ತಲುಪಬಹುದಾಗಿದೆ. ಮತ್ತೊಂದು ಪ್ರಮುಖ ವಿಚಾರ ಏನಂದರೆ ಈ ರಸ್ತೆಯು ಎಲ್ಲಾ ದಿನಗಳಲ್ಲಿಯೂ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಉಳಿದೆಲ್ಲಾ ರಸ್ತೆಗಳಲ್ಲಿ 6-7 ತಿಂಗಳು ಮಾತ್ರ ಸಂಚಾರ ಮಾಡಬಹುದಾಗಿದೆ.

ನೂತನವಾಗಿ ನಿರ್ಮಿಸಿರುವ ರಸ್ತೆ ಮುಖಾಂತರ ವಾಹನಗಳು ತುಂಬಾ ಭಾರದ ವಸ್ತುಗಳನ್ನ ನಿರ್ಭಯದಿಂದ ಸಾಗಾಟ ಮಾಡಬಹುದಾಗಿದೆ. ಕೇವಲ 30 ಕಿಲೋ ಮೀಟರ್​​ನಷ್ಟು ರಸ್ತೆ ನಿರ್ಮಾಣ ಮಾಡೋದು ಬಾಕಿ ಇದೆ. ಈ ಮಾರ್ಗದ ಮೂಲಕ ಸೇನಾ ವಾಹನ ಸಂಚಾರ ಮಾಡಬಹುದಾಗಿದ್ದು, ಸುಮಾರು 6-7 ಗಂಟೆಗಳು ಉಳಿತಾಯ ಆಗಲಿದೆ ಅಂತಾ ಬಿಆರ್​ಒ ಇಂಜಿನಿಯರ್​ ಒಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here