ಗಡಿ ಗ್ರಾಮಗಳಿಗೆ ಡ್ರೋನ್ ಬಳಸಿ ಶಸ್ತ್ರಾಸ್ತ್ರ ತಲುಪಿಸುತ್ತಿದೆ ಪಾಕ್

0

ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನ ಡ್ರೋನ್‌ಗಳ ಮೂಲಕ ಎಕೆ- 47 ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ರವಾನಿಸಿ ಉಗ್ರರಿಗೆ ತಲುಪಿಸುತ್ತಿದೆ. ಇದೇ ರೀತಿ ಅಖ್ನೂರಿನ ಹಳ್ಳಿಯೊಂದರ ಬಳಿ ಸೋಮವಾರ ರಾತ್ರಿ ಡ್ರೋನ್ ಮೂಲಕ ಎ.ಕೆ.47 ಬಂದೂಕುಗಳು ಹಾಗೂ ಪಿಸ್ತೂಲ್​ಗಳನ್ನು ಬೀಳಿಸಿ ಹೋಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಉಗ್ರರಿಗೆ ಡ್ರೋನ್‌ಗಳಿಂದ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿರುವ ಹಿಂದೆ ಜೈಷ್ ಸಂಘಟನೆ ಕೈವಾಡವಿದೆ ಎನ್ನಲಾಗಿದೆ. ಅಖ್ನೂರಿನ ಖಾದ್ ಸೊಹಾಲ್ ಹಳ್ಳಿಯ ಬಳಿ ರಾತ್ರಿಯಿಡೀ ಡ್ರೋನ್ ಹಾರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಅನುಮಾನಗೊಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಿದ್ದರು. ಈ ವೇಳೆ ಎಕೆ-47 ಬಂದೂಕುಗಳು, 90 ಸುತ್ತು ಗುಂಡುಗಳು ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here