ಗನ್ ಪಾಯಿಂಟ್ ನಲ್ಲಿ ಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಿಜೆಪಿ ಯುವ ಮುಖಂಡ ಅರೆಸ್ಟ್

0

ಬಿಎ ವಿದ್ಯಾರ್ಥಿನಿ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ ಎಸಗಿದ ಬಿಜೆಪಿ ಯುವಮೋರ್ಚಾ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ವಾರಣಾಸಿ ಘಟಕದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶ್ಯಾಮ್ ಪ್ರಕಾಶ್ ದ್ವಿವೇದಿ ಬಂಧಿತ ಆರೋಪಿ. ಅನಿಲ್ ದ್ವಿವೇದಿ ಎಂಬುವನೊಂದಿಗೆ ಸೇರಿಕೊಂಡು ಬಿಎ ವಿದ್ಯಾರ್ಥಿನಿ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ ಎಸಗಿದ್ದರು.

ಮಾರ್ಚ್ ನಲ್ಲಿ ಘಟನೆ ನಡೆದಿದ್ದು 15 ದಿನಗಳ ಹಿಂದೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಪೋಷಕರು ಭಯದಿಂದ ದೂರು ನೀಡದಂತೆ ನನಗೆ ಹೇಳಿದ್ದರು. ಹಾಗಾಗಿ ದೂರು ನೀಡುವುದು ವಿಳಂಬವಾಗಿತ್ತು ಎಂದು ವಿದ್ಯಾರ್ಥಿನಿ ತಿಳಿಸಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಶ್ಯಾಮ್ ಪ್ರಕಾಶ್ ದ್ವಿವೇದಿ ಮತ್ತು ಅನಿಲ್ ನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here