ಗರ್ಭಿಣಿಯನ್ನು ಕೊಂದು ಶವವನ್ನು ಗಂಗಾ ಕಾಲುವೆಗೆಸದ್ರು!

0

ವರದಕ್ಷಿಣ ಸಂಬಂಧ ಗಲಾಟೆಯಲ್ಲಿ ಗರ್ಭಿಣಿಯನ್ನು ಹತ್ಯೆಗೈದು ಗಂಗಾ ನದಿ ಕಾಲುವೆಗೆಸೆದ ಹೃದಯವಿದ್ರಾವಕ ಘಟನೆ ಉತ್ತರ ಪರದೇಶದ ಮುಜಫರನಗರ ವ್ಯಾಪ್ತಿಯಲ್ಲಿ ನಡೆದಿದೆ.

ವರದಕ್ಷಿಣೆ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲಳಾದ ಗರ್ಭಿಣಿಯನ್ನು ಪತಿ ಮತ್ತು ಆತನ ಕುಟುಂಬದವರು ಸೇರಿ ಹೊಡೆದು ಸಾಯಿಸಿದ್ದಾರೆ. ನಂತರ ಸಮೀಪದ ಗಂಗಾ ಕಾಲುವೆಗೆ ಎಸೆದು ಬಂದಿದ್ದಾರೆ. ಮೃತಳನ್ನು ನೇಹಾ (30) ಎಂದು ಗುರುತಿಸಲಾಗಿದೆ.

 ಆಕೆಯ ತಂದೆ ಕೊಟ್ಟ ದೂರಿನ ಮೇರೆಗೆ ಪತಿ ಮತ್ತು ಕುಟುಂಬದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ನೇಹಾಳನ್ನು ನಾಲ್ಕು ವರ್ಷ ಹಿಂದೆ ಕಮಲ್​ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆತ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಇನ್ನಿಲ್ಲದಂತೆ ಪೀಡಿಸುತ್ತಿದ್ದರು.

 ಆರಂಭದಲ್ಲಿ ಮನ್ನಿಸಲಾಗಿತ್ತಾದರೂ, ಬಳಿಕ ದುರಾಸೆ ಪ್ರದರ್ಶಿಸಲಾರಂಭಿಸಿದ್ದರಿಂದ ನೇಹಾ ಪ್ರತಿರೋಧ ತೋರಿದ್ದಳು. ಪರಿಣಾಮ ಆಕೆಯ ಜೀವ ಹೋಗಿದೆ.
ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕಮಲ್​ನನ್ನು ಪೊಲೀಸರು ಬಂಧಿಸಿದ್ದು, ಉಳಿದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here