ಗಸ್ತಿನಲ್ಲಿದ್ದ ಪೋಲೀಸರನ್ನು ಕಂಡು ಪರಾರಿಯಾಗಲು ಯತ್ನಿಸುತಿದ್ದ ದ್ವಿಚಕ್ರ ವಾಹನ ಕಳ್ಳನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಪಟ್ಟಣ ಪೋಲೀಸರು ಯಶಸ್ವಿಯಾಗಿದ್ದಾರೆ

0

ಗಸ್ತಿನಲ್ಲಿದ್ದ ಪೋಲೀಸರನ್ನು ಕಂಡು ಪರಾರಿಯಾಗಲು ಯತ್ನಿಸುತಿದ್ದ ದ್ವಿಚಕ್ರ ವಾಹನ ಕಳ್ಳನನ್ನು ಬೆನ್ನಟ್ಟಿ

ಹಿಡಿಯುವಲ್ಲಿ ಕೆ.ಆರ್.ಪೇಟೆ ಪಟ್ಟಣ ಪೋಲೀಸರು ಯಶಸ್ವಿಯಾಗಿದ್ದಾರೆ

ತಾಲೋಕಿನ ಮಡುವಿನಕೋಡಿ ಗ್ರಾಮದ ಸೋಮಶೇಖರ್ ಎಂಬುವವರ ಮಗ ಮಧುಕುಮಾರ್(೨೦) ಬಂಧಿತ ಆರೋಪಿ.
ಶುಕ್ರವಾರ ಬೆಳಗಿನ ಜಾವ ನಗರದ ಟಿ.ಬಿ.ವೃತ್ತದಲ್ಲಿ ಪೋಲಿಸ್ ಪೇದೆಗಳಾದ ಸೋಮಶೇಖರ್ ಮತ್ತು

ಜಯವರ್ದನ ಎಂಬುವವರು ರಾತ್ರಿ ಗಸ್ತಿನಲ್ಲಿದ್ದ ವೇಳೆ ಅದೇ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ

ಮಧುಕುಮಾರ್ ಎಂಬ ವ್ಯಕ್ತಿಯನ್ನು ತಡೆದಿದ್ದಾರೆ ಈ ವೇಳೆ ಪೋಲೀಸರನ್ನು ಕಂಡು ಪರಾರಿಯಾಗಲು

ಯತ್ನಿಸಿದ್ದಾನೆ ತಕ್ಷಣ ಬೆನ್ನಟ್ಟಿದ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವಿವಿಧೆಡೆ

ನಾಲ್ಕು ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ಪೋಲಿಸರ ಮುಂದೆ ಒಪ್ಪಿಕೊಂಡ್ಡಿದ್ದಾನೆ.

ಈ ಪ್ರಕರಣಕ್ಕೆ ಸಂಭAದಪಟ್ಟAತೆ ಪಟ್ಟಣ ಠಾಣೆಯಲ್ಲಿ ಸಿಪಿಐ ಕೆ.ಎನ್.ಸುಧಾಕರ್ ಮತ್ತು ಪಿಎಸ್‌ಐ

ಬಿ.ಪಿ.ಬ್ಯಾಟರಾಯಗೌಡರ ಮಾರ್ಗದರ್ಶನದಲ್ಲಿ ಆರೋಪಿ ಮಧುಕುಮಾರನ ವಿರುದ್ದ ಕಳ್ಳತನದ ಪ್ರಕರಣ

ದಾಖಲಿಸಿಕೊಂಡಿರುವ ಪೋಲೀಸರು ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ

ನ್ಯಾಯಾಧೀಶರು ಆರೋಪಿ ಮಧುಕುಮಾರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here