ದೇಶವನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆಪಲ್ ಮತ್ತು ಆಲ್ಫಾಬೆಟ್ ಮಾಲೀಕತ್ವದ ಗೂಗಲ್ ನೀಡುತ್ತಿರುವ ಆಪ್ ಸ್ಟೋರ್ ಗಳಿಗೆ ಪರ್ಯಾಯವಾಗಿ ಭಾರತ ತನ್ನದೇ ಆಪ್ ಸ್ಟೋರ್ ಅನ್ನು ಲಾಂಚ್ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ತನ್ನ ಮೊಬೈಲ್ ಸೇವಾ ಆಯಪ್ ಸ್ಟೋರ್ನ ಸಾಮರ್ಥ್ಯ ಹೆಚ್ಚಿಸಬಹುದು ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ನಡುವೆ ಆಂಡ್ರಾಯ್ಡ್ ಫೋನ್ ಗಳು ತನ್ನ ಆಪ್ ಗಳನ್ನು ಪ್ರೀ ಇನ್ ಸ್ಟಾಲ್ ಮಾಡಿಕೊಳ್ಳಲು ಕಡ್ಡಾಯಗೊಳಿಸುವ ಯೋಜನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.