ಗೊಬ್ಬರ ಮಾರಾಟ ಮಾಡುವವರು ಹಾಗೂ ಕೃಷಿ ಇಲಾಖೆಯವರು ರೈತರ ರಕ್ತ ಹೀರುತ್ತಿದ್ದಾರೆ, ಅವರು ರೈತರನ್ನು ನಿರಂತರವಾಗಿ ಶೋಷಿಶಿಸುತ್ತಿದ್ದಾರೆ

0

ಕರೋನಾಗಿಂತ ಕಠುಕರು ರೈತರ ರಕ್ತಹೀರೋ ಕ್ರಿಮಿಗಳು-

 

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಬಹುತೇಕ ದಲ್ಲಾಲಿ ಅಂಗಡಿಯವರು,ಗೊಬ್ಬರ ಮಾರಾಟ ಮಾಡುವವರು

ಹಾಗೂ ಕೃಷಿ ಇಲಾಖೆಯವರು ರೈತರ ರಕ್ತ ಹೀರುತ್ತಿದ್ದಾರೆ, ಅವರು ರೈತರನ್ನು ನಿರಂತರವಾಗಿ

ಶೋಷಿಶಿಸುತ್ತಿದ್ದಾರೆ ಈ ಮೂಲಕ ಕೊರೋನಾ ಮಹಾ ಮಾರಿಗಿಂತಲೂ ಕಠೋರವಾಗಿದ್ದಾರೆಂದು ಕಾಮಿ೯ಕ

ಮುಖಂಡ ಹಾಗೂ ಕ.ರಾ.ಪ್ರಾ.ರೈತ ಸಂಘದ ಮುಖಂಡ ಗುನ್ನಳ್ಳಿ ರಾಘವೇಂದ್ರ

ಆಕ್ರೋಶವ್ಯಕ್ತಪಡಿಸಿದ್ದಾರೆ.ಅವರು ಮಾತನಾಡಿ ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಯಾವ ಸಕಾ೯ರಗಳು

ರೈತರ ಹಿತಕಾಯುತ್ತಿಲ್ಲ,ಬದಲಾಗಿ ಬಂಡಾಳಶಾಯಿಗಳ ವ್ಯಾಪಾರಿಗಳ ಹಿತಕಾಯುತ್ತಿವೆ.ತುಂಡು ಚಾಕುಲೇಟ್ ಗೆ

ಬೆಲೆ ನಿಗದಿ ಮಾಡುವ ಸಕಾ೯ರ ಅನ್ನ ನೀಡುವ ರೈತನ ಬೆಳೆಗೆ ಯೋಗ್ಯ ಬೆಲೆ ನೀಡುವುದಿಲ್ಲ. ಯೋಗ್ಯವಾದ

ಮಾರುಕಟ್ಟೆ ಒದಗಿಸುವುದಿಲ್ಲ ಇಂತಹ ಸಕಾ೯ರಗಳಿಗೆ ನಾಚಿಕೆಯಾಗಬೇಕು ಎಂದು ಅವರು ಕಿಡಿಕಾರಿದರು.

ಮಧ್ಯವತಿ೯ಗಳ ಹಾವಳಿ ಮಿತಿ ಮೀರಿದೆ,ಕಡು ಬ್ರಷ್ಟ ದಲ್ಲಾಳಿಗಳು ಮತ್ತು ಬ್ರಷ್ಟಅಧಿಕಾರಿಗಳು ತಿಗಣಿ

ಸೋಳ್ಳೆಗಳಂತೆ ರಕ್ತ ಹೀರುತ್ತಿದ್ದಾರೆ.ರೈತರ ಹಿತಕಾಯದ ಪ್ರಭಾವಿ ಜನಪ್ರತಿನಿಧಿಗಳು ಬ್ರಷ್ಠರ ಏಜೆಂಟರಂತೆ,ಕೃಷಿ

ಇಲಾಖೆಯ ತಾಲೂಕು ಹಾಗೂ ಜಿಲ್ಲಾಡಾಳಿತಗಳು ಬೆದರು ಗೊಂಬೆಗಳಂತೆ ವತಿ೯ಸುತ್ತಿವೆ ಎಂದು

ಆರೋಪಿಸಿದರು.ಕೃಷಿ ಇಲಾಖೆಯಲ್ಲಿ ಗೊಬ್ಬರ ಬೀಜಗಳ ಕೃತಕ ಅಭಾವ ಸೃಷ್ಠಿಸಲಾಗುತ್ತಿದೆ,ಕಾಳಸಂತೆಯಲ್ಲಿ

ಗೊಬ್ಬರ ಮಾರಾಟ ಮಾಡಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.ನಿಗದಿತ ದರಕ್ಕಿಂತ ಅತಿಹೆಚ್ಚು ಬೆಲೆಯಲ್ಲಿ

ಗೊಬ್ಬರ ಬೀಜ ಮಾರಾಟ ಮಾಡಲಾಗುತ್ತಿದೆ.ರಸಗೊಬ್ಬರ ಬೀಜವನ್ನು ಪರಾನಗಿರಹಿತರು ಬೇಕಾ ಬಿಟ್ಟಿಯಾಗಿ

ರಾಜಾರೋಷಾಗಿ ಮಾರಾಟ ಮಾಡಿ ವಂಚಿಸಲಾಗುತ್ತಿದೆ ಎಂಬ ದೂರುಗಳಿವೆ ಎಂದರು.ಈ ಸಂಬಂದಿಸಿದಂತೆ

ಸಕಾ೯ರಕ್ಕೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಲಾಗಿದೆ ಎಂದು ಅವರು ನುಡಿದಿದ್ದಾರೆ.ಇದು ಹೀಗೇ ಮುಂದುವರೆದಲ್ಲಿ

ಹಂತ ಹಂತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಎಚ್ವರಿಸಿದ್ದಾರೆ. ಪ್ರಾಮಾಣಿಕ

ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಕೃಷಿಕುಟುಂಬದಿಂದ ಬಂದಿದ್ದಾರೆ.ಬಳ್ಳಾರಿಯ ನಿಷ್ಠಾವಂತ

ಜಿಲ್ಲಾಧಿಕಾರಿಗಳಾದ ಎಸ್.ಎಸ್.ನಕುಲ್ ರವರು ರೈತರ ಹಿತಕಾಯಬೇಕಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ.✍️

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ- ಗುನ್ನಳ್ಳಿ ರಾಘವೇಂದ್ರ<->

LEAVE A REPLY

Please enter your comment!
Please enter your name here