ಗೊರಕೆ ಹೊಡೆಯುವ ಅಭ್ಯಾಸ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಯಿತು ಎಂದರೆ ನೀವು ನಂಬಲೇಬೇಕು…!
ತನ್ನ ಶಾಂತಿಯುತ ನಿದ್ರೆಗೆ ಭಂಗ ತಂದಿದ್ದಕ್ಕಾಗಿ ಯುವಕನೊಬ್ಬ ಗೊರಕೆ ಹೊಡೆಯುತ್ತಿದ್ದ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ನವೀನ್ (28) ಆರೋಪಿ. ರಾಮಸ್ವರೂಪ್ (65) ಕೊಲೆಗೀಡಾದವ.
ರಾಮ್ ಸ್ವರೂಪ್ ಗೊರಕೆ ಹೊಡೆಯಲು ಪ್ರಾರಂಭಿಸಿದಾಗ ಆತನ ಹಿರಿಯ ಮಗ ನವೀನ್ ಕೊಡಲಿಯಿಂದ ತನ್ನ ತಂದೆಯ ತಲೆಗೆ ಹೊಡೆದ. ರಾಮಸ್ವರೂಪ್ ನನ್ನು ಪುರಾಣಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಆದರೆ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ. ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮನೋಜ್ ತನ್ನ ಅಣ್ಣನ ವಿರುದ್ಧ ಲಿಖಿತ ದೂರು ದಾಖಲಿಸಿದ ನಂತರ ನವೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ಸೋಂಧಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ರಾತ್ರಿ ಮನೋಜ್ ತನ್ನ ತಾಯಿಯೊಂದಿಗೆ ಚಿಕ್ಕಪ್ಪನ ಮನೆಯಲ್ಲಿದ್ದ.
ಗೊರಕೆ ಹೊಡೆಯುವ ಅಭ್ಯಾಸವಿದ್ದ ತನ್ನ ತಂದೆಗೆ ಆರೋಪಿ ನಿಂದಿಸುತ್ತಿದ್ದ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಸೆರಾಮೌ ಉತ್ತರ ವಲಯದ ಪೊಲೀಸ್ ಠಾಣಾಧಿಕಾರಿ ಪುಷ್ಕರ್ ಸಿಂಗ್ ಹೇಳಿದ್ದಾರೆ.