ಗೋವಿಂದಗಿರಿ ತಾಂಡ:ಶ್ರೀ ಗುಳೇಲಕ್ಕಮ್ಮದೇವಿ ರಸ್ಥೆ ನಿಮಾ೯ಣಮಾಡಿ-ಭಕ್ತರ ಮನವಿ

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿ,20ನೇವಾಡ್೯,ಗೋಂವಿದಗಿರಿ ತಾಂಡದಲ್ಲಿರುವ ಶ್ರೀ ಗುಳೇಲಕ್ಕಮ್ಮ ದೇವಿ ದೇವಸ್ಥಾನಕ್ಕೆ,ಸಂಪಕ೯ ಕಲ್ಪಿಸುವಂತಹ ರಸ್ಥೆ ನಿಮಾ೯ಣ ಮಾಡಿಸಬೇಕೆಂದು ಸ್ಥಳೀಯ ಆಡಳಿತಕ್ಕೆ ಗ್ರಾಮಸ್ಥರು ಈ ಮೂಲಕ ಮನವಿ ಮಾಡಿದ್ದಾರೆ.ಕೂಡ್ಲಿಗಿ ಪಟ್ಟಣದ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಂದು ಶ್ರೀ ಗುಳೇಲಕ್ಕಮ್ಮ ದೇವಿ,ವಿಶಿಷ್ಟವಾಗಿ ಆಚರಿಸುವ ಗುಳೇಲಕ್ಕಮ್ಮ ಜಾತ್ರೆಯನ್ನು ಪಟ್ಟಣದಲ್ಲಿ ಮೂರು ವಷ೯ಕ್ಕೊಮ್ಮೆ ಆಚರಿಸಲಾಗುತ್ತದೆ. ಎರೆಡು ದೇವಸ್ಥಾನ- ಗುಳೇಲಕ್ಕಮ್ಮದೇವಿ ದೇವಸ್ಥಾನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ಎರೆಡು ದೇವಸ್ಥಾನಗಳನ್ನ ಹೊಂದಿದೆ.ಉತ್ಸವ ಮೂತಿ೯ ಕೂಡ್ಲಿಗಿ ಪಟ್ಟದ10ನೇ ವಾಡ್೯ನಲ್ಲಿರುವ ತನ್ನದೇ ಆದ ದೇವಸ್ಥಾನದಲ್ಲಿರುತ್ತದೆ.ಇನ್ನೊಂದು ಮೂತಿ೯ ಪಟ್ಟಣದಿಂದ ಗುಳೇ ಲಕ್ಕಮ್ಮ ರಸ್ಥೆಯಿಂದ ಬಂದರೆ 2ಕಿ ಮೀ(ಪ್ರಮುಖ ರಸ್ಥೆ ಮಾಗ೯ 6ಕಿಮೀ)ಅಂತರದಲ್ಲಿರುವ ಗೋವಿಂದ ಗಿರಿತಾಂಡದಲ್ಲಿದೆ. ಅಸಂಖ್ಯಾತ ಭಕ್ತರನ್ನೊಳಗೊಂಡಿರುವ ದೇವಿಯ ಈ ಎರೆಡೂ ದೇವಸ್ಥಾನಗಳಿಗೆ ದೇವಿ ದಶ೯ನಕ್ಕಾಗಿ ಕೂಡ್ಲಿಗಿ ಪಟ್ಟಣಕ್ಕೂ ಗೋವಿಂದಗಿರಿತಾಂಡಕ್ಕೂ ಬರುತ್ತಾರೆ.ಇದು ತಲೆತಲಾಂತರದಿಂದ ರೂಡಿ ಸಂಪ್ರದಾಯವಾಗಿದೆ ಎಂದು ತಾಂಡಾದ ಹಿರಿಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.‍ತಾಂಡ ಪಟ್ಟಣದಿಂದ ಪ್ರಮುಖ ರಸ್ಥೆಯ ಮೂಲಕ ಸುಮಾರು 6ಕಿಮೀ ಅಂತರವಿದೆ, ಹೊಳ ಹಾದಿ ಸಧ್ಯ ಕಾಲು ಹಾದಿಯಾಗಿರುವ ಮಾಗ೯ವು ಕೇವಲ 2ಕಿಮೀ ಅಂತರವಾಗಲಿದೆ.ಕಾರಣ ಕಡಿಮೆ ಅಂತರದ2ಕಿಮೀ ರಸ್ಥೆಯನ್ನು ನಿಮಿ೯ಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.ಪಪಂ ಸದಸ್ಯ ಭಾಷಾನಾಯ್ಕ ಮಾತನಾಡಿ 2ಕೀಮೀ ಅಂತರವಿರುವ ತಾಂಡಾದಿಂದ ಕೂಡ್ಲಿಗಿ ಪಟ್ಟಣಕ್ಕೆ ಹಾಗೂ ಕೂಡ್ಲಿಗಿ ಪಟ್ಟಣದವರು,ಪರಸ್ಪರ ಸಂಪಕ೯ಕ್ಕಾಗಿ ಬಹುದೂರದ ಮಾಗ೯ ಬಳಸಲಾರದೇ,ಕಡಿಮೆ ಅಂತರದಲ್ಲಿರುವ ಹೋಳ ರಸ್ಥೆ ಹಾಗೂ ಕಾಲುದಾರಿಯನ್ನೇ ಹೆಚ್ಚಾಗಿ ತಾಂಡದವರು ಬಳಸುತ್ತಿದ್ದು,ಶ್ರೀ ಗುಳೇಲಕ್ಕಮ್ಮ ರಸ್ಥೆ ನಿಮಾ೯ಣ ಅನಿವಾಯ೯ವಾಗಿದೆ ಕಾರಣ ಸ್ಥಳೀಯ ಆಡಳಿತ ಶೀಘ್ರವೇ ರಸ್ಥೆ ನಿಮಿ೯ಸಿ ಮೂಲಭೂತ ಸೌಕಯ೯ಗಳನ್ನು ಕಲ್ಪಿಸಬೇಕು ಎಂದು ಅವರು ಈ ಮೂಲಕ ಕೋರಿದ್ದಾರೆ.ಪಪಂ ಸದಸ್ಯ ಸಿರಿಬಿ ಮಂಜುನಾಥ ಮಾತನಾಡಿ ಕೂಡ್ಲಿಗಿ ಪಟ್ಟಣದಲ್ಲಿ ಮತ್ತು ಜಿಲ್ಲೆಯಾಧ್ಯಂತ ದೇವಿಯ ಭಕ್ತರ ಮಹಾಪೂರವೇ ಇದೆ.ಕೆಲವರು ಕೂಡ್ಲಿಗಿ ಪಟ್ಟಣದಲ್ಲಿರುವ ದೇವಸ್ಥಾನಕ್ಕೆ ತೆರಳಿ ದಶ೯ನ ಪಡೆದು ನಂತರ ಗೋವಿಂದಗಿರಿ ತಾಂಡದಲ್ಲಿರುವ ದೇವಸ್ಥಾನಕ್ಕೆ ಶ್ರೀಗುಳೇಲಕ್ಕಮ್ಮ ದೇವಿ ರಸ್ಥೆಯ ಮೂಲಕವೇ ದಶ೯ನಕ್ಕಾಗಿ ತೆರಳುತ್ತಾರೆ.ಸಧ್ಯ ಈ ಗಿರುವ ಸಂಪಕ೯ ಕಲ್ಪಿಸುವ ಪ್ರಮುಖ ರಸ್ಥೆಮಾಗ೯ ಕೂಡ್ಲಿಗಿ ಪಟ್ಟಣದಿಂದ ಸುಮಾರು 6ಕಿಮೀ ಅಂತರವಾಗಲಿದೆ. ಕಾರಣ ಸಧ್ಯ ಗೋವಿಂದಗಿರಿ ತಾಂಡಕ್ಕೆ ಕಾಲ್ನಡಿಗೆ ಇರುವ 2ಕಿಮೀ ಕಾಲ್ನಡಿಗೆಯ ಶ್ರೀಗುಳೇಲಕ್ಕಮ್ಮ ದೇವಿ ರಸ್ಥೆಯನ್ನೇ ಅಭಿವೃದ್ಧಿ ಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.ಗ್ರಾಮಕ್ಕೆ ಹೊಂದಿಕೊಂಡಂತೆ ಮಾಗ೯ಮಧ್ಯದಲ್ಲಿ ಹಳ್ಳವಿದ್ದು,ಅದಕ್ಕೆ ಶೀಘ್ರವೇ ಬೃಹತ್ ಸೇತುವೆ ನಿಮಿ೯ಸಬೇಕೆಂದು ಪಪಂ ಮುಖ್ಯಾಧಿಕಾರಿಗಳಿಗೆ ಗ್ರಾಮಸ್ಥರು ಈ ಮೂಲಕ ಮನವಿ ಮಾಡಿದ್ದಾರೆ.ಈ ಸಂದಭ೯ದಲ್ಲಿ ಪಟ್ಟಣ ಪಂಚಾಯ್ತಿ 20ನೇ ವಾಡ್೯ ಸದಸ್ಯರಾದ ಭಾಷಾನಾಯ್ಕ,10ನೇವಾಡ್೯ ಸದಸ್ಯ ಸಿರಿಬಿ ಮಂಜುನಾಥ,19ನೇ ವಾಡ್೯ ಸದಸ್ಯ ಪೂರ್ಯಾನಾಯ್ಕ, ಗ್ರಾಮಸ್ಥರಾದ ಪೂಜಾರಿ ಲಕ್ಷ್ಮಣನಾಯ್ಕ, ದೆವರಾಜನಾಯ್ ಕ,ಲಕ್ಷ್ಮಣನಾಯ್ಕ,ಎಲ್.ಪ್ರದೀಪನಾಯ್ಕ,ಶಂಕರನಾಯ್ಕ,ಬಣಕಾರ ಚನ್ನನಾಯ್ಕ,ರೇಚನಾಯ್ಕ,ದೇವಲನಾಯ್ಕ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

LEAVE A REPLY

Please enter your comment!
Please enter your name here