ಗೋವುಗಳ ಹತ್ಯೆ | ಜಾನುವಾರುಗಳ ಹತ್ಯೆ ಪ್ರಕರಣ | ಎಸ್ಟೇಟ್ ಸಿಬ್ಬಂಧಿಗಳ ತೀವ್ರ ವಿಚಾರಣೆ.

0

ಜಾನುವಾರುಗಳ ಹತ್ಯೆ ಪ್ರಕರಣ:ಎಸ್ಟೇಟ್ ಸಿಬ್ಬಂಧಿಗಳ ತೀವ್ರ ವಿಚಾರಣೆ.

ಕೊಡಗು(ಸೋಮವಾರಪೇಟೆ):ಸಮೀಪದ ಐಗೂರು ಗ್ರಾಮದ ಟಾಟಾ ಕಾಫಿ
ಎಸ್ಟೇಟ್‍ನಲ್ಲಿ ಕಂಡುಬಂದ ಜಾನುವಾರುಗಳ ಕಳೆಬರ ಪ್ರಕರಣ ೬ಂಬಂಧಿಸಿದಂತೆ
ತೋಟದ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳ ವಿರುದ್ದ
ಪೊಲೀಸರಿಗೆ ದೂರು ನೀಡಲಾಗಿದ್ದ ಹಿನ್ನಲೆ ವಿಚಾರಣೆ ವೇಳೆ
ತೋಟದ ವ್ಯವಸ್ಥಾಪಕರ ಸೂಚನೆಯಂತೆ ಸಿಬ್ಬಂದಿಗಳು
ಜಾನುವಾರುಗಳಿಗೆ ವಿಷವುಣಿಸಿರುವುದು ಸಾಭೀತಾಗಿದೆ.
ಕಿರಗಂದೂರು ಗ್ರಾಮದ ಕೃಷಿಕ ಎಸ್.ಸಿ. ಗಿರೀಶ್ ಅವರು
ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ
ಮೂರು ಜಾನುವಾರುಗಳನ್ನು ಟಾಟಾ ಕಾಫಿ ಸಂಸ್ಥೆಯ
ಸಿಬ್ಬಂದಿಗಳಾದ ದರ್ಶನ, ಗೋವಿಂದ, ಶ್ರೀನಿವಾಸ, ಮುತ್ತಪ್ಪ
ಸೇರಿದಂತೆ ಇತರರು ಶಾಮೀಲಾಗಿರುವ ಬಗ್ಗೆ ದೂರಿನ ಹಿನ್ನಲೆಯಲ್ಲಿ ಆರೋಪಿತರು ಸೇರಿದಂತೆ ವ್ಯವಸ್ತಾಪಕರಗಳು ಮತ್ತು ಇತರೆ ಸಿಬ್ಬಂಧಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಸುತ್ತಮುತ್ತಲಿವ ಕೆಲವು ಗ್ರಾಮಸ್ಥರು ಸಹಾ ತಮ್ಮ ನಾಪತ್ತೆಯಾಗಿರುವ ಜಾನುವಾರುಳು ಎಸ್ಟೇಟ್ ನಲ್ಲೇ ಹತ್ಯೆ ನಡೆಸಿರಬಹುದೆಂದು ಆರೋಪಿಸಿ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here