ಗ್ರಾಮಪಂಚಾಯಿತಿಯ ಪಿಡಿಓ ಮಲ್ಲಿಕಾರ್ಜುನ್ ಮತ್ತು ಕಾರ್ಯದರ್ಶಿ ಬಾಲು ಅವರಿಗೆ ತರಾಟೆಗೆ ತೆಗೆದುಕೊಂಡರು

0

*ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಅಂಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಗ್ರಾಮಪಂಚಾಯಿತಿಯ ಪಿಡಿಓ ಮಲ್ಲಿಕಾರ್ಜುನ್ ಮತ್ತು ಕಾರ್ಯದರ್ಶಿ ಬಾಲು ಅವರಿಗೆ ತರಾಟೆಗೆ ತೆಗೆದುಕೊಂಡರು….

ಅಂಕನಹಳ್ಳಿ ಗ್ರಾಮದಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲದ ಕಾರಣದಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಇದುವರೆಗೂ ಯಾವುದೇ ಅಧಿಕಾರಿಗಳು ಗಮನಹರಿಸಿದೆ ಬೇಜವಾಬ್ದಾರಿ ರೀತಿ ವರ್ತಿಸುತ್ತಿದ್ದಾರು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತು ಕೊಂಡು ಅಂಕನಹಳ್ಳಿ ಗ್ರಾಮಕ್ಕೆ ನಿಟ್ಟೂರು ಗ್ರಾಮಪಂಚಾಯತಿ ಅಧಿಕಾರಿಗಳು ಬಂದು ಜನರ ಸಮಸ್ಯೆಗಳನ್ನು ಆಲಿಸಿದರು.. ಚರಂಡಿಯ ನೀರು ಹರಿಯುತ್ತಿದ್ದು ಜನಸಾಮಾನ್ಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಊರಿನ ಗ್ರಾಮಸ್ಥರು ಶ್ರೀಧರ್ ಅವರು ತಿಳಿಸಿದ್ದರೆ ಮತ್ತು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವಂತಹ ವಾಟರ್ ಮ್ಯಾನ್ ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಪಿಡಿಓ ಮಲ್ಲಿಕಾರ್ಜುನ್ ಅವರಿಗೆ ನಾಗೇಶ್ ಅವರು ತಿಳಿಸಿದ್ದಾರೆ..
ಈಗಲೂ ಆದರೂ ಎಚ್ಚೆತ್ತು ಕೊಳ್ಳದ್ದಿದ್ದರೆ ಗ್ರಾಮಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೆವೆ ಎಂದು ಊರಿನ ಗ್ರಾಮಸ್ಥರು ಆದಂತಹ ಶ್ರೀಧರ್, ನಾಗೇಶ್, ಅಭಿಷೇಕ್, ಸಿದ್ದರಾಜು ಮತ್ತು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು…
ವರದಿಗಾರ :::::: ಪ್ರತಾಪ್. ಎ.ಬಿ
ಮಳವಳ್ಳಿ

LEAVE A REPLY

Please enter your comment!
Please enter your name here