ಗ್ರಾಮೀಣ ಜನರ ಆರೋಗ್ಯ ಮುಖ್ಯ ಯುದೇಶಾ..!

0

ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸೇರಿ ಜನರ ಆರೋಗ್ಯ ಹಿತದೃಷ್ಟಿಯನ್ನು ಗಮನಹರಿಸಿ ಕೊಳ್ಳುವಂತೆ ಜಾಗೃತಿ ಕಾರ್ಯಕ್ರಮ ನರಸಾಪುರ ಗ್ರಾಮದಲ್ಲಿ ಏರ್ಪಡಿಸಲಾಯಿತು

ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪನಿಂದ್ರ ಬಿ. ಆರ್ ಮಾತನಾಡಿ ಈಗಾಗಲೇ ಕೊರೋನಾ ಎಂಬುವ ಮಹಮರಿ ಯಿಂದ ತತ್ತರಿಸುತ್ತಿದ್ದಾರೆ ಎಲ್ಲೋಡು ಗ್ರಾಮ ಪಂಚಾಯತಿಗೆ ಸೇರಿರುವ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದೇವೆ ಸಾರ್ವಜನಿಕರು ಸರ್ಕಾರ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಹಾಗೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ ನಿಮ್ಮ ಗ್ರಾಮದಲ್ಲಿ ಯಾವುದೇ ರೀತಿಯ ಕೆಮ್ಮು ನೆಗಡಿ ಹಾಗೂ ಜ್ವರವು ಕಂಡುಬಂದಲ್ಲಿ ಭಯಬೀತರಾದ ಬೇಡಿ ಸರ್ಕಾರದಿಂದ ಬರ ಬೇಕಾಗಿರುವಂತಹ ಎಲ್ಲಾ ಪ್ರೀತಿಯ ಔಷಧಿಗಳನ್ನು ಉಚಿತವಾಗಿ ಪಡೆಯಬಹುದು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಮ್ಮ ಗ್ರಾಮದಲ್ಲಿ ವಯೋವೃದ್ಧರು ಹಾಗೂ ಗರ್ಭಿಣಿ ಮಹಿಳೆಯರು ಇದ್ದಲ್ಲೇ ಉಚಿತವಾಗಿ ಬಿಪಿ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಿಕೊಳ್ಳಬಹುದು ಹಾಗೂ ನಮ್ಮ ಗ್ರಾಮ ಪಂಚಾಯತಿಗೆ ಸೇರಿರುವ ಆರೋಗ್ಯ ಇಲಾಖೆಗೆ ಬಂದು ಎಲ್ಲಾ ರೀತಿಯ ಉಚಿತವಾಗಿ ತಪಾಸಣೆಗಳನ್ನು ಮಾಡಿಸಿಕೊಳ್ಳಿ,
ಅವಶ್ಯಕವಾಗಿ ಆಚೆಕಡೆ ಹೋಗಬೇಡಿ ಮನೆಯಿಂದ ಹೋಗಬೇಕಾದರೆ ಮಾಸ್ಕ್ ಇಲ್ಲದೆ ಸಂಚಾರಿ ಸಬೇಡಿ.
ಮನೆಯ ಒಳಭಾಗಕ್ಕೆ ಬಂದಮೇಲೆ ದಿನಕ್ಕೆ ಮೂರು ಬಾರಿ ಸಾಬೂನಿನಿಂದ ಕೈಕಾಲುಗಳನ್ನು ತುಳಿಯಿರಿ ಹಾಗೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ವರದಿ ಸತೀಶ್ ಬಾಬು.ಎ
ಗುಡಿಬಂಡೆ ತಾಲೂಕು

LEAVE A REPLY

Please enter your comment!
Please enter your name here