ಗ್ರಾಮ ಪಂಚಾಯಿತಿ ಚುನಾವಣಾ ಕುರಿತು ಆಯೋಗ ಸ್ಪಷ್ಟನೆ

0

ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಬಗ್ಗೆ ನಕಲಿ ರಾಜ್ಯಪತ್ರ ಹರಿದಾಡುತ್ತಿದೆ ಎಂದು ಆಯೋಗ ಹೇಳಿದೆ.

ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಏಪ್ರಿಲ್ 5 ಮತ್ತು 9ರಂದು ನಡೆಸಲಾಗುತ್ತದೆ ಎಂಬ ನಕಲಿ ರಾಜ್ಯಪತ್ರ ಹರಿದಾಡುತ್ತಿದೆ. ಆಯೋಗವು ಚುನಾವಣೆ ಸಂಬಂಧ ಇದುವರೆಗೆ ಯಾವುದೇ ದಿನಾಂಕವನ್ನು ಗೊತ್ತು ಪಡಿಸಿರುವುದಿಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಾಜ್ಯ ಚುನಾವಣಾ ಆಯೋಗದ ಹೆಸರಿನಲ್ಲಿರುವ ಆದೇಶವು ನಕಲಿಯಾಗಿದೆ. ಈ ಆದೇಶದ ಮೂಲಕ ಸಾರ್ವಜನಿಕರ ಗಮನಕ್ಕೆ ಇದನ್ನು ತರಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

#ಪ್ರೌಢ ಶಿಕ್ಷಣ :
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರೌಢ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‍ಗಳನ್ನು ಕರ್ನಾಟಕದಲ್ಲಿ ಕಡ್ಡಾಯವಾಗಿ ಹೊಂದಿರಬೇಕು ಎಂದು ಚುನಾವಣಾ ಆಯೋಗ ಆದೇಶಿಸಿದೆ ಎಂಬ ನಕಲಿ ರಾಜ್ಯ ಪತ್ರ ಹರಿದಾಡುತ್ತಿತ್ತು.

ಚುನಾವಣಾ ಆಯೋಗ ಮತದಾನ ನಡೆಸಲು ದಿನಾಂಕ ನಿಗದಿ ಮಾಡಿಲ್ಲ. ಇಂತಿಷ್ಟು ಶಿಕ್ಷಣಹಾಗೂ ಇಂತಿಷ್ಟು ಮಕ್ಕಳನ್ನು ಹೊಂದಿರಬೇಕು ಎಂಬ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಆಯೋಗದ ಹೆಸರಿನಲ್ಲಿ ಹರಿದಾಡುತ್ತಿರುವ ಆದೇಶವೂ ನಕಲಿಯಾಗಿದೆ. ಜನರು ಇಂತಹ ಯಾವುದೇ ಆದೇಶಗಳನ್ನು ನಂಬಬಾರದು ಎಂದು ಚುನಾವಣಾ ಆಯೋಗ ಹೇಳಿದೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here